ನೋಡೋಕೆ ಮುದ್ದು ಗೊಂಬೆ, ಮನೆಯಲ್ಲಿ ಪುಟ್ಟ ಹುಡುಗಿಯಂತೆ ಅತ್ತ-ಇತ್ತ ಓಡಾಡಿಕೊಂಡು ಪ್ರೇಕ್ಷಕರ, ಸ್ಪರ್ಧಿಗಳ ಮನ ಗೆದ್ದ ಚುಕ್ಕಿ ಅಲಿಯಾಸ್ ಚಂದನಾ ಅನಂತಕೃಷ್ಣ ಈ ವಾರ ಮನೆಯಿಂದ ಹೊರ ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವಾರದ ಕ್ಯಾಪ್ಟನ್‌ ಆಗಿ ಪ್ರಿಯಾಂಕಾ, ಚಂದನ್ ಆಚಾರ್‌ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು.  ಇನ್ನು ಕಳೆದ ವಾರ ಮನೆಯಿಂದ ಹೊರ ಬರುವ ವೇಳೆ ಚೈತ್ರಾ ಕೊಟ್ಟೂರ್ ದೀಪಿಕಾ ದಾಸ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಹಾಗೂ ಪ್ರಕ್ರಿಯೆಯಲ್ಲಿ ಕಿಶನ್, ಹರೀಶ್, ಚಂದನಾ ಹಾಗೂ ಭೂಮಿ ನಾಮಿನೇಟ್‌ ಆಗಿದ್ದರು. 

BB7: ಕಿರುತೆರೆಯ ರಾಣಿ ಚಂದನ ಅನಂತಕೃಷ್ಣಗೆ ನಿಜ್ವಾಗ್ಲೂ ಲವ್‌ ಆಗಿದ್ಯಾ?

ಬಿಗ್ ಬಾಸ್‌ ಮನೆಯಲ್ಲಿ ಶೈನ್ ಹಾಗೂ ವಾಸುಕಿ ವೈಭವ್ ಅವರೊಂದಿಗೆ ಹೆಚ್ಚಾಗಿ ಆತ್ಮಿಯತೆ ಹೊಂದಿದ್ದೇ ಚಂದನಾ ಹೊರ ಬರಲು ಕಾರಣವಾಯ್ತಾ?  ಈ ವಾರ ಚಂದನಾಗೆ ನೀಡಿದ ಟಾಸ್ಕ್‌ನಲ್ಲಿ ಉತ್ತಮ ಎಂದೆನಿಸಿದವರಿಗೆ ಮುತ್ತು,  ಕಳಪೆ/ಇಷ್ಟ ಇಲ್ಲದವರಿಗೆ ಕಪಾಳ ಮೋಕ್ಷ ಮಾಡಬೇಕಿತ್ತು. ಈ ವೇಳೆ ವಾಸುಕಿ ಹಾಗೂ ಶೈನ್‌ಗೆ ಮುತ್ತು ನೀಡಿ ಕಿಶನ್ ಹಾಗೂ ಹರೀಶ್‌ ರಾಜ್‌ಗೆ ಕಪಾಳಕ್ಕೆ ಹೊಡೆದರು. ಅಷ್ಟೇ ಅಲ್ಲದೆ ಬಿಗ್ ಬಾಸ್‌ ಮನೆಯ  ಸ್ಪರ್ಧಿಗಳೊಂದಿಗೆ ಸಿನಿಮಾ ಮಾಡುವುದಾದರೆ ಯಾರಿಗೆ ಯಾವ ಪಾತ್ರ ಕೊಡುತ್ತೀರಿ ಎಂಬ ಟಾಸ್ಕ್‌ನಲ್ಲಿ ಶೈನ್‌ಗೆ ಹೀರೋ ಪಾತ್ರ ಹಾಗೂ ವಾಸುಕಿಗೆ ಹೀರೋ ಸ್ನೇಹಿತನ ಪಾತ್ರ ನೀಡಿದ್ದರು. ಇದನ್ನು ಗಮನಿಸಿದ ಇನ್ನಿತರ ಸ್ಪರ್ಧಿಗಳು ಆಕೆ ಚೌಕಟ್ಟಿನಿಂದ ಹೊರ ಬರಬೇಕು.  ಅವರೊಂದಿಗೆ ಇದ್ದರೆ ಬಿಗ್ ಬಾಸ್ ಮನೆಯಲ್ಲಿ ಇರಲು ಕಷ್ಟವಾಗುತ್ತದೆ'  ಎಂದು ಸಲಹೆ ನೀಡಿದ್ದರು.

ಇನ್ನು ಸ್ಪರ್ಧಿಗಳಿಗೆ ಅವರ ಮನೆಯವರನ್ನು ಭೇಟಿ ಮಾಡಲು ಬಿಗ್ ಬಾಸ್ ಅವಕಾಶ ಮಾಡಿಕೊಟ್ಟಿದ್ದರು. ಈ ವಾರ ಮನೆಯೊಳಗೆ ಚಂದನಾ ಅನಂತಕೃಷ್ಣ ತಾಯಿ, ದೀಪಿಕಾ ದಾಸ್ ತಾಯಿ ಹಾಗೂ ಚಂದನ್ ಆಚಾರ್ ತಾಯಿ ಬಂದಿದ್ದರು.