ಬಾಗ್ ಬಾಸ್‌ ಸೀಸನ್‌ 6ರ ವಿಜೇತ, ಮಾಡ್ರನ್ ರೈತ, ನಟ ಶಶಿ ಕುಮಾರ್ ಕೆಂಪು ಬಣ್ಣದ ಮಿನಿ ಕೂಪರ್ ಕಾರು ಖರೀದಿಸಿದ್ದಾರೆ. ಕಾರು ಮುಂದೆ ನಿಂತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. 

'ಹಾಯ್, ನನ್ನ ಕನಸಿನ ಕಾರು ಇದೀಗ ನಮ್ಮ ಮನೆಯ ಪಾರ್ಕಿಂಗ್ ಜಾಗದಲ್ಲಿ. ನನ್ನ ಮೊದಲ ಕಾರು ಓಮಿನಿ ಆಗಿತ್ತು, ಉಳುಮೆಗೆ ಸಂಬಂಧ ಪಟ್ಟ ಬ್ಯಾಗ್‌ಗಳನ್ನು ಹಾಕಿಕೊಂಡು ಓಡಾಡುತ್ತಿದೆ. ಈಗ ಕೂಪರ್ ಖರೀದಿಸಿರುವೆ,' ಎಂದು ಶಶಿ ಬರೆದುಕೊಂಡಿದ್ದಾರೆ. 

ಜನ ಸಾಮಾನ್ಯರಾಗಿ ಬಿಗ್ ಬಾಸ್‌ ಎಂಟರ್ ಆಗಿದ್ದ ಶಶಿ ಕುಮಾರ್ ಆಧುನಿಕ ಕೃಷಿ ಪದ್ಧತಿ ಮೂಲಕ ಜನಪ್ರಿಯತೆ ಪಡೆದವರು. ಬಹುಭಾಷಾ ನಟ ಖಬೀರ್ ಸಿಂಗ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಅನೇಕ ಚಿತ್ರರಂಗದ ಆಪ್ತರು ಕಾಮೆಂಟ್ ಮೂಲಕ ಇವರಿಗೆ ಶುಭ ಹಾರೈಸಿದ್ದಾರೆ. ಇನ್ನು ಅಭಿಮಾನಿಗಳು 'ಸರ್ ನಾನು ನಿಮಗೆ ತುಂಬಾ ಸಪೋರ್ಟ್ ಮಾಡಿದ್ದೀನಿ, ಬನ್ನಿ ಒಂದು ರೌಂಡ್ ಹೋಗಿ ಬರೋಣ,' ಎಂದಿದ್ದಾರೆ. 

28 ಮಕ್ಕಳನ್ನು ದತ್ತು ಪಡೆದ ಬಿಗ್ ಬಾಸ್ ಸ್ಪರ್ಧಿ! 

ಕೆಲವು ತಿಂಗಳಿನಿಂದ ಚಿತ್ರ ನಟ-ನಟಿಯರು ಕಾರು ಖರೀದಿ ಮಾಡುತ್ತಿದ್ದಾರೆ. ಕನ್ನಡತಿ ಖ್ಯಾತಿಯ ಕಿರಣ್ ರಾಜ್, ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದು ಗೌಡ, ನಟಿ ಕಾರುಣ್ಯ ರಾಮ್, ಪಾರು ಖ್ಯಾತಿಯ ಮೋಕ್ಷಿತಾ ಪೈ ಕಾರು ಖರೀದಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.