ಟಿಕ್‌‌ಟಾಕ್‌ ಕ್ವೀನ್‌ ಆಗಿ ಕಾಮನ್‌ ಮ್ಯಾನ್‌ ಪಟ್ಟಿಯಲ್ಲಿ ಬಿಗ್‌ ಬಾಸ್‌ ಸೀಸನ್‌-5ಗೆ ಕಾಲಿಟ್ಟ ನಿವೇದಿತಾ ಗೌಡ, ತಮ್ಮ ಮಾತಿನ ಶೈಲಿಯ ಮೂಲಕವೇ ಪ್ರೇಕ್ಷಕರ ಮನಸ್ಸು ಗೆದ್ದವರು. ಆರಂಭದಲ್ಲಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಅಪ್ರಬುದ್ಧ ಸ್ಪರ್ಧಿ ಎನಿಸಿದ್ದು ಸುಳ್ಳಲ್ಲ. ಆದರೆ, ಬರ ಬರುತ್ತಾ ಅವರ ನಡೆ, ನುಡಿ ಹಾಗೂ ಪ್ರಬುದ್ಧ ಮಾತುಗಳು ವೀಕ್ಷಕರನ್ನು ಸೆರೆ ಹಿಡಿದಿಡುವಲ್ಲಿ ಯಶಸ್ವಿಯಾಯಿತು. ಅಷ್ಟೇ ಅಲ್ಲದ ಇಂಗ್ಲಿಷ್ ಮಿಶ್ರಿತ ಕನ್ನಡವೂ ವೀಕ್ಷಕರಿಗೆ ಖುಷಿ ಕೊಡುವಂತಾಯಿತು. 100 ದಿನಗಳನ್ನೂ ಪೂರೈಸಿ, ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮನೋರಂಜನೆ ನೀಡುವಲ್ಲಿ ಈ ಗೊಂಬೆ ಯಶಸ್ವಿಯಾಗಿದ್ದರು. ಆಗಲೇ '3 Peg' ಕನ್ನಡ ರ‍್ಯಾಪ್ ಸಾಂಗ್‌ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಾಯಕನಾಗಿ ಮಿಂಚುತ್ತಿದ್ದ ಚಂದನ್‌ ಶೆಟ್ಟಿ ಸೆಲೆಬ್ರಿಟಿ ಲಿಸ್ಟ್‌ನಲ್ಲಿಯೇ ಬಿಗ್‌ಬಾಸ್ ಮನೆ ಪ್ರವೇಶಿಸಿ, ನಿರೀಕ್ಷೆಯಂತೆ ಆ ಸೀಸನ್‌ನ ವಿನ್ನರ್ ಆಗಿ ಹೊರ ಹೊಮ್ಮಿದರು. 

ಮುದ್ದು ಗೊಂಬೆ ಮನಸ್ಸು ಕದ್ದ Rapper; ಮದುವೆ ವಿಶೇಷಗಳಿವು!

ಬಿಗ್‌ಬಾಸ್ ಮನೆಯಲ್ಲಿಯೇ ಗೊಂಬೆ ಗೊಂಬೆ...ಹಾಡು ರಚಿಸಿ, ನಿವೇದಿತಾರಿಗೆ ಹತ್ತಿರವಾದ ಈ ಗಾಯಕ, ನಂತರ ಆ ಆತ್ಮೀಯತೆ ಪ್ರೇಮಕ್ಕೂ ತಿರುಗಿ, ಇದೀಗ ಮದುವೆಯಲ್ಲಿ ಅಂತ್ಯವಾಗಿದೆ. ಫೆಬ್ರವರಿ 25, 26ರಂದು ಮೈಸೂರಿನ ಸ್ಪೆಕ್ಟ್ರಾ ಕನ್ವೆಂಷನ್‌ ಸೆಂಟರ್‌ನಲ್ಲಿ ಈ ಜೋಡಿ ಸಪ್ತಪದಿ ತುಳಿದು, ಏಳೇಳು ಜನ್ಮಕ್ಕೂ ಸತಿ ಪತಿಗಳಾಗಿರುತ್ತೇವೆ ಎಂದು ಅಗ್ನಿ ಸಾಕ್ಷಿಯಾಗಿ, ಸಾವಿರಾರು ಜನರ ಸಮ್ಮುಖದಲ್ಲಿ ಬ್ಯಾಚುಲರ್ ಲೈಫಿಗೆ ಗುಡ್ ಬೈ ಹೇಳಿದ್ದಾರೆ.

ನವ ಜೋಡಿಗಳು ಇದೀಗ ಹನಿಮೂನ್‌ಗೆಂದು ವಿದೇಶಕ್ಕೆ ಹಾರಲು ಸಿದ್ಧವಾಗಿದೆ. ಹಾಲೆಂಡ್ ಎಂದು ಕರೆಯಲ್ಪಡುವ ನೆದರ್‌ಲ್ಯಾಂಡ್‌ನ ರಾಜಧಾನಿ  Amsterdamಗೆ ತೆರಳಲು ಸಿದ್ಧವಾಗಿದೆ. ತಮ್ಮ ಪಾಸ್‌ಪೋರ್ಟ್‌ ಹಿಡಿದಿರುವ ಫೋಟೋವನ್ನು ನಿವೇದಿತಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ತಮ್ಮ ಪಯಣದ ಬಗ್ಗೆ ರಿವೀಲ್ ಮಾಡಿದ್ದಾರೆ.

 
 
 
 
 
 
 
 
 
 
 
 
 

Off to Amsterdam ✈❤ with @chandanshettyofficial 😍😍 Cute passport covers by @lit_little_things 🥰

A post shared by Niveditha Gowda 👑 (@niveditha__gowda) on Mar 1, 2020 at 1:52am PST

ಮದುವೆ ನಂತರ ಬೆಂಗಳೂರಿನಲ್ಲಿರುವ ಚಂದನ್‌ ನಿವಾಸದಲ್ಲಿ ಸತ್ಯನಾರಾಯಣ ಪೂಜೆ ನೆರವೇರಿತ್ತು. ಆ ನಂತರ ಬೆಂಗಳೂರು ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಪಯಾಣ ಬೆಳೆಸಿದರು. 

ನಿವೇದಿತಾಗೆ 1 ಕೋಟಿ ರೂಪಾಯಿ ಕಾರು ಗಿಫ್ಟ್ ನೀಡಿದ ಚಂದನ ಶೆಟ್ಟಿ!