ಬಿಗ್ ಬಾಸ್‌ ಸೀಸನ್ 4ರ ಲಾಸ್ಯ ಅತಿ ಹೆಚ್ಚು ಮನೋರಂಜನೆ ನೀಡಿದಂತ ಸ್ಪರ್ಧಿ. ಫಿನಾಲೆ ಹಂತ ತಲುಪದಿದ್ದರೂ ವೀಕ್ಷಕರ ಪ್ರೀತಿ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಮನೆಯಿಂದ ಹೊರ ಬಂದ ನಂತರ ತಾವು ಸಂಪಾದಿಸಿರುವ ಪ್ರೀತಿಯನ್ನು ಹಾಗೆ ಉಳಿಸಿಕೊಳ್ಳಬೇಕೆಂದು ಯುಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಮನೋರಂಜಿಸುತ್ತಿದ್ದರು. 

ಬಿಗ್‌ಬಾಸ್‌ ಆರಂಭಕ್ಕೆ ದಿನಾಂಕ್ ಫಿಕ್ಸ್‌; ಇದರಲ್ಲೊಂದಿದೆ ವಿಶೇಷ! 

ಫೇಸ್‌ಬುಕ್‌ ಲೈವ್‌ ಬಂದ ಲಾಸ್ಯ ಯುಟ್ಯೂಬ್ ಖಾತೆ ಹ್ಯಾಕ್ ಆಗಿರುವುದರ ಬಗ್ಗೆ ಮಾತನಾಡಿದ್ದಾರೆ. ಲಾಸ್ಯಳ ಪ್ರತಿಯೊಂದೂ ವಿಡಿಯೋ ಭಿನ್ನವಾಗಿರುತ್ತಿತ್ತು. ಆದರೀಗ ಆ ಎಲ್ಲಾ ವಿಡಿಯೋಗಳು ಡಿಲೀಟ್ ಮಾಡಲಾಗಿದೆ, ಇದರಿಂದ ಲಾಸ್ಯ ಮಾತ್ರವಲ್ಲದೇ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. 

ಲಾಸ್ಯ ಮಾತು:
'ನಾನು ಯುಟ್ಯೂಬ್‌ಗೆ  ದೂರು ನೀಡಿದ್ದೇನೆ. ಯಾರೋ ನನ್ನ ಯೂಸರ್ ಐಡಿ ಹಾಗೂ ಪಾಸ್‌ವರ್ಡ್‌ ಬದಲಾಯಿಸಿದ್ದಾರೆ. ವಿದೇಶಿಯರು ಲೈವ್‌ ಬರುತ್ತಿದ್ದಾರೆ ಹಾಗೂ ಅಪರಿಚಿತರಿಗೆ ಮೆಸೇಜ್‌ ಕಳುಹಿಸಲಾಗುತ್ತಿದೆ. ದಯವಿಟ್ಟು ಇದಕ್ಕೆ ಯಾರೂ ಪ್ರತಿಕ್ರಿಯಿಸಬೇಡಿ. ನನ್ನ ಖಾತೆ ಮರಳಿ ಸಿಗುತ್ತದೆ ಎಂಬ ವಿಶ್ವಾಸವಿದೆ. ಆದರೆ ಈಗಾಗಲೇ ಅನೇಕ ವಿಡಿಯೋಗಳು ಡಿಲೀಟ್ ಮಾಡಲಾಗಿದೆ. ಬಹಳ ಕಷ್ಟಪಟ್ಟು ಮಾಡಿದ್ದನ್ನು ಹಾಳು ಮಾಡಿದ್ದಾರೆ,' ಎಂದು ಲಾಸ್ಯ ಅಳಲು ತೋಡಿಕೊಂಡಿದ್ದಾರೆ.