Asianet Suvarna News Asianet Suvarna News

ಬಿಗ್​ಬಾಸ್ ಮನೆಯೊಳ​ಗೆ ಸ್ಪರ್ಧಿಯಾಗಿ ಕತ್ತೆ ಎಂಟ್ರಿ! ಜನರಿಂದ ದೂರು ದಾಖಲು: ಪೇಟಾನಿಂದ ನೋಟಿಸ್ ಜಾರಿ...

ಬಿಗ್​ಬಾಸ್​ ಮನೆಯಲ್ಲಿ  ಕತ್ತೆಯನ್ನು ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪೇಟಾ ಅಸಮಾಧಾನ ಹೊರಹಾಕಿದ್ದು, ಈ ಬಗ್ಗೆ ನೋಟಿಸ್​ ಜಾರಿಗೊಳಿಸಿದೆ. ಏನಿದು ವಿಷಯ?
 

Bigg Boss 18 PETA calls use of donkey distressing asks Salman Khan to avoid using animals as props suc
Author
First Published Oct 10, 2024, 12:58 PM IST | Last Updated Oct 10, 2024, 12:58 PM IST

 ಬಿಗ್​ಬಾಸ್​ಗೆ ಹೋಗುವ ಬಹುತೇಕ ಸ್ಪರ್ಧಿಗಳು ಚಿತ್ರ-ವಿಚಿತ್ರ ಸ್ವಭಾವದವರು, ಜಗಳಗಂಟರು ಎಂದೆಲ್ಲಾ ಬಿರುದು ಪಡೆದವರು. ಆದರೆ ಇವರ ಮಧ್ಯೆಯೇ ಈಗ ಕತ್ತೆಯೂ ಬಿಗ್​ಬಾಸ್​ ಪ್ರವೇಶ ಮಾಡಿದ್ದು, ಭಾರಿ ಕೋಲಾಹಲ ಸೃಷ್ಟಿಯಾಗಿದೆ.   ಅಂದಹಾಗೆ ಕತ್ತೆ ಎಂಟ್ರಿ ಕೊಟ್ಟಿರೋದು ಕನ್ನಡದ ಬಿಗ್​ಬಾಸ್​ನಲ್ಲಿ ಅಲ್ಲ, ಬದಲಿಗೆ  ಹಿಂದಿಯ ಬಿಗ್​ಬಾಸ್​ ಸೀಸನ್​ 18ಗೆ. ಕತ್ತೆ ಎಂಟ್ರಿಯ ಬಗ್ಗೆ ಮೊದಲೇ ಸಲ್ಮಾನ್​ ಖಾನ್​ ಭಾರಿ ಪ್ರಚಾರ ಮಾಡಿದ್ದರು. ವಾಹಿನಿ ಕೂಡ ಪ್ರೊಮೋ ರಿಲೀಸ್​ ಮಾಡಿತ್ತು. ಇದೇ  6 ರಂದು 18ನೇ  ಸೀಸನ್​ ಆರಂಭವಾಗಿದ್ದು, ಸ್ಪರ್ಧಿಗಳಿಗೂ ಮುನ್ನವೇ ಕತ್ತೆ ಎಂಟ್ರಿ ಕೊಟ್ಟಿತ್ತು.  
 
ಇದಕ್ಕೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಲವರು ಸ್ಪರ್ಧಿಗಳ ಮಧ್ಯೆ ಕತ್ತೆಗೆ ಅವಮಾನ ಮಾಡ್ಬೇಡಿ ಎಂದೂ ಸಲ್ಮಾನ್​ ಖಾನ್​ ಕಾಳೆದಿದದ್ದರು ಎನ್ನಿ. ಆದರೆ ಇದೀಗ, ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್(PETA) ಇಂಡಿಯಾ ಸಲ್ಮಾನ್​ ಖಾನ್​ಗೆ ನೋಟಿಸ್​ ಜಾರಿ ಮಾಡಿದೆ. ಬಿಗ್ ಬಾಸ್ ಮನೆಯಲ್ಲಿ ಕತ್ತೆಯನ್ನು ಸಾಕಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಾರ್ವಜನಿಕರಿಂದ ನಮಗೆ ದೂರುಗಳು ಬರುತ್ತಿವೆ. ಅವರ ಕಳವಳಗಳನ್ನು ನಿರ್ಲಕ್ಷಿಸಬಾರದು ಎಂದಿರುವ ಪೇಟಾ,  ಪ್ರಾಣಿಗಳನ್ನು ಮನರಂಜನೆಗಾಗಿ ಬಳಸುವುದನ್ನು ತಪ್ಪಿಸಲು,  ಕತ್ತೆಯನ್ನು ಹೊರಹಾಕಿ ಎಂದು ಬಿಗ್​ಬಾಸ್​ಗೆ ನೋಟಿಸ್​ ಮೂಲಕ ತಿಳಿಸಿದೆ.  ಸಲ್ಮಾನ್​ ಖಾನ್​ ಅವರಿಗೆ ಪತ್ರ ಬರೆದಿರುವ ಪೇಟಾ, ನಿಮ್ಮ ಪ್ರಭಾವ ಬಳಸಿ ಕತ್ತೆಯನ್ನು ಹೊರಕ್ಕೆ ಹಾಕುವಂತೆ ಬಿಗ್​ಬಾಸ್​ ಆಯೋಜಕರಿಗೆ ತಿಳಿಸಿ ಎಂದು ಹೇಳಿದೆ. 

ಚೈತ್ರಾ ಕುಂದಾಪುರಗೆ ಮಾತು ಕಲಿಸಿದ್ದೇ ರಂಜಿತ್​ ಅಂತೆ: ಚೈತ್ರಾರ ಮಾತು ಕೇಳಿ ಖುದ್ದು ಸುದೀಪ್​ ಶಾಕ್​!

ಅಂದಹಾಗೆ, ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಅವರಿಗಿಂತಲೂ ಮೊದಲು ಕತ್ತೆ ಕಾಣಿಸಿಕೊಂಡಿದೆ. ಬಿಗ್ ಬಾಸ್ ಆರಂಭವಾದಾಗ ಎಲ್ಲರೂ ಅದರಲ್ಲಿ ಸಲ್ಮಾನ್ ಖಾನ್ ಪ್ರವೇಶಕ್ಕಾಗಿ ಕಾಯುತ್ತಿದ್ದರು, ಆದರೆ ಸಲ್ಮಾನ್ ಖಾನ್ ಬದಲಿಗೆ ಕತ್ತೆಯೊಂದು ವೇದಿಕೆಯನ್ನು ಪ್ರವೇಶಿಸಿತ್ತು.  ಕತ್ತೆಯು ವೇದಿಕೆಯಲ್ಲಿ ಹುಲ್ಲು ತಿನ್ನುತ್ತಿತ್ತು. ಆ ಬಳಿಕ ಬಿಗ್ ಬಾಸ್ ಧ್ವನಿ ಹಿನ್ನೆಲೆಯಿಂದ ಬಂದಿತ್ತು.   ಅಂದಹಾಗೆ, ಕತ್ತೆಯ ಹೆಸರು ಮ್ಯಾಕ್ಸ್. ಇದು ಸ್ಪರ್ಧಿ ವಕೀಲ ಗುಣರತ್ನ ಸದಾವರ್ತೆ ಅವರ ಸಾಕುಪ್ರಾಣಿ ಎಂದು ಕೊನೆಗೆ ಸ್ಪಷ್ಟನೆ ನೀಡಲಾಗಿತ್ತು.  ಹಿಂದಿಯ ಬಿಗ್​ಬಾಸ್​ ಕೂಡ ಈ ಬಾರಿ  ಇತರ ಸೀಸನ್‌ಗಳಿಗಿಂತ ವಿಭಿನ್ನ ಮತ್ತು ಆಸಕ್ತಿದಾಯಕವಾಗಿರುತ್ತದೆ ಎಂದು ಮೊದಲೇ  ಅನೌನ್ಸ್​  ಮಾಡಲಾಗಿದ್ದು, ಕತ್ತೆ ಎಂಟ್ರಿ ಮೂಲಕ ಮತ್ತಷ್ಟು ಕುತೂಹಲ ಕೆರಳಿಸಿತ್ತು.  
 
ಅಷ್ಟಕ್ಕೂ ಈ ರೀತಿ ಮಾಡಿದರೆ ಅದು ಕಾಂಟ್ರವರ್ಸಿಯಾಗಿ ರಿಯಾಲಿಟಿ ಷೋ ಮತ್ತಷ್ಟು ಜನಪ್ರಿಯ ಆಗುತ್ತದೆ ಎಂಬ ಕಾರಣವೂ ಇದರ ಹಿಂದೆ ಇದೆ ಎನ್ನುವುದು ಹಲವರ ಆರೋಪ. ವಿವಾದಾತ್ಮಕ ವ್ಯಕ್ತಿಗಳನ್ನು ಷೋಗೆ ಕರೆಸುವುದು, ನಂತರ ಪೊಲೀಸರು ಎಂಟ್ರಿ ಕೊಡುವುದು, ಇಲ್ಲವೇ ಯಾರಿಂದಲೋ ಕಂಪ್ಲೇಂಟ್​ ಕೊಡಿಸುವುದು, ಆಮೇಲೆ ಜೈಲಿಗೆ ಅಟ್ಟುವುದು, ನಂತರ ಬಂದ ಮೇಲೆ ಮತ್ತಷ್ಟು ಟಿಆರ್​ಪಿ ಏರಿಸಿಕೊಳ್ಳುವುದು... ಹೀಗೆ ಎಲ್ಲವೂ ಮೊದಲೇ ನಿಗದಿಯಾಗಿ ಇರುತ್ತದೆ, ಎಲ್ಲವೂ ಸ್ಕ್ರಿಪ್ಟೆಡ್​ ಎಂಬ ಬಗ್ಗೆ ಇದಾಗಲೇ ಬಿಗ್​ಬಾಸ್​ಗೆ ಹೋಗಿ ಬಂದಿರುವ ಹಲವು ಸ್ಪರ್ಧಿಗಳೇ ಖುದ್ದು ಹೇಳಿದ್ದಾರೆ. ಎಲ್ಲವೂ ಜನರನ್ನು ಮೋಸ ಮಾಡುವ ತಂತ್ರಗಳು, ಇಲ್ಲದಿದ್ದರೆ ಟಿಆರ್​ಪಿ ಕುಸಿಯುತ್ತದೆ ಎನ್ನುವ ಕಾರಣಕ್ಕೆ ಮೊದಲೇ ನಿಗದಿ ಮಾಡಿ ಎಲ್ಲವನ್ನೂ ಮಾಡಲಾಗುತ್ತದೆ ಎಂಬ ಗಂಭೀರ ಆರೋಪಗಳೂ ಇವೆ. 

ಬಿಗ್​ಬಾಸ್​ನವ್ರು ಕರೆದಾಗ ಕದ್ದು ಮುಚ್ಚಿ ಶೂಟಿಂಗ್​ ಮಾಡಿ ಬರ್ತೇನೆ ಎಂದ ರಾಖಿ ಸಾವಂತ್​! ದುಬೈನಿಂದ ಸಂದರ್ಶನ
 

Latest Videos
Follow Us:
Download App:
  • android
  • ios