ಹಂದಿ, ಕುತಂತ್ರಿ, ಚೀಪ್, ಈಡಿಯೆಟ್ .. ಬಿಗ್‌ಬಾಸ್ ಮನೆಯಲ್ಲಿ ಇನ್ನೇನೆಲ್ಲಾ ಕೇಳ್ಬೇಕಪ್ಪಾ!
ಬಿಗ್‌ಬಾಸ್ ಸೀಸನ್ 10 ಗ್ರಾಂಡ್ ಫಿನಾಲೆ ಹತ್ತಿರ ಬರುತ್ತಿರುವ ಹಾಗೆ ಬಿಗ್‌ಬಾಸ್ ಮನೆ ಮತ್ತೆ ಕಾವೇರಿದೆ. ಆದರೆ ಸ್ಪರ್ಧಿಗಳ ಬಾಯಿಂದ ಬರುತ್ತಿರುವ ಮಾತುಗಳಿಂದ ಮಾತ್ರ ಕಿವಿ ಮುಚ್ಕೊಳ್ಳೋ ಹಾಗಾಗಿದೆ.
ಬಿಗ್‌ಬಾಸ್ ಮನೆ ಕಾವೇರುತ್ತಿದೆ. ಗ್ರ್ಯಾಂಡ್ ಫಿನಾಲೆ ಹತ್ತಿರ ಬರುತ್ತಿದ್ದ ಹಾಗೆ ಮೈಂಟಲ್ ಗೇಮ್ ಭರ್ಜರಿಯಾಗಿ ನಡೀತಿದೆ. ಪರಸ್ಪರ ಕೆಸರೆರೆಚಾಟ, ಬೈಗುಳಗಳ ಸುರಿಮಳೆಯೂ ಆಗ್ತಿದೆ. ಅಂಥಾ ಬೈಗುಳಗಳ ಕೆಲವು ಹೈಲೈಟ್ಸ್ ಇಲ್ಲಿದೆ. ಅವು ಕೇಳೋಕೆ ಕೆಲವರಿಗೆ ಮಜಾ ಅನಿಸಿದರೆ ಯಪ್ಪಾ, ಇನ್ನೇನೆಲ್ಲ ಈ ಕಿವಿಯಿಂದ ಕೇಳ್ಬೇಕಪ್ಪಾ ಅಂತ ಕೆಲವು ವೀಕ್ಷಕರು ಕಿವಿ ಮುಚ್ಚಿಕೊಳ್ಳೋ ಇಮೋಜಿ ಹಾಕಿದ್ದಾರೆ.
ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತು ಜೋಡೆತ್ತು ಅಂತಲೇ ದೊಡ್ಡ ಮನೇಲಿ ಫೇಮಸ್. ಸದಾ ಬೀನ್ ಬ್ಯಾಗ್ ಮೇಲೆ ಕೂತು ಬೇರೆಯವರ ಬಗ್ಗೆ ಕಾಮೆಂಟ್ ಮಾಡುತ್ತಿದ್ದ ಇವರಿಬ್ಬರ ಮಧ್ಯೆಯೇ ಇದೀಗ ಅಸಮಾಧಾನ ಬೂದಿ ಮುಚ್ಚಿದ ಕೆಂಡದ ಹಾಗಿದೆ. ಇದರ ನಡುವೆಯೇ ತುಕಾಲಿ ಸಂತುಗೆ ವಿನಯ್ ‘ಹಂದಿ’ ಅಂತ ಲೇವಡಿ ಮಾಡಿದ್ದಾರೆ. ಇನ್ನೊಂದು ಕಡೆ 'ನಮ್ಮನೆ ಬೆಕ್ಕು ಮೊದಲು ಹೋಗಿ ಮಣ್ಣು ಕರೆಯುತ್ತೆ. ಪಾಟ್ಟಿ ಮಾಡುವ ಟೈಮ್‌ನಲ್ಲಿ ಹಿಂದೆ ನಿನ್ನ ಮುಖ ತರಹವೇ ಆಗೋದು' ಅಂತ ತುಕಾಲಿ ಸಂತು ಬಗ್ಗೆ ವಿನಯ್ ಗೇಲಿ ಮಾಡಿದ್ದಾರೆ. 'ಒಂದ್ಕಡೆ ಕಾಫಿ ಶಾಪ್, ಒಂದ್ಕಡೆ ಕಿಟ್ಟಿ ಪಾರ್ಟಿ, ಜೈಲಲ್ಲಿ ಒಬ್ಬ ಖೈದಿ, ಹೊರಗಡೆ ಒಬ್ಬ ಹಂದಿ’ ಅಂತ್ಹೇಳಿ ವಿನಯ್ ನಕ್ಕಿದ್ದಾರೆ. ವಿನಯ್ ಈ ಕಟುಮಾತು ತುಕಾಲಿ ಸಂತುಗೆ ಬೇಸರ ತಂದಿದೆ. ಇದಕ್ಕೂ ಮೊದಲು ಕಾರ್ತಿಕ್, ' ಕೆಲವು ಟೈಮಲ್ಲಿ ಸಂತು ಮುಖ ಒಂಥರಾ ಆಗುತ್ತೆ. ಆ ಮುಖವನ್ನ ನಾನು ನೋಡಬೇಕು. ಈ ಮುಖ ನನಗೆ ತುಂಬಾ ಇಷ್ಟ’ ಅಂತ ಹೇಳಿಬಿಟ್ರು. ಅದಕ್ಕೆ, ‘’ಅವನಿಗೆ ಏನಾದರೂ ಅಂದ ತಕ್ಷಣ ಈ ತರಹ ಮಾಡಿಕೊಳ್ತಾನೆ. ನಮ್ಮನೆ ಬೆಕ್ಕು ಮೊದಲು ಹೋಗಿ ಮಣ್ಣು ಕರೆಯುತ್ತೆ. ಪಾಟ್ಟಿ ಮಾಡುವ ಟೈಮ್‌ನಲ್ಲಿ ಹಿಂದೆ ನಿನ್ನ ಮುಖ ತರಹವೇ ಆಗೋದು’’ ಅಂತ ತುಕಾಲಿ ಸಂತು ಬಗ್ಗೆ ವಿನಯ್ ಹೇಳಿದರು. ಆ ಬಳಿಕ ಮಾತು ಬೇರೆ ಕಡೆ ತಿರುಗಿತು.
ಇನ್ನೊಂದು ಕಡೆ ಡ್ರೋನ್‌ಗೂ ವಿನಯ್‌ಗೂ ಜಟಾಪಟಿ ಆಗಿದೆ. 'ಚೀಪ್, ಮೂರ್ಖ, ಈಡಿಯೆಟ್' ಅಂತೆಲ್ಲ ವಿನಯ್ ಡ್ರೋನ್ ಮೇಲೆ ಕಿಡಿಕಾರಿದ್ದಾರೆ. ಆಗ ’ನಾಲಿಗೆ ಮೇಲೆ ಹಿಡಿತ ಇರಲಿ . ಇಲ್ಲಾಂದ್ರೆ ಪರಿಣಾಮ ನೆಟ್ಟಗೆ ಇರಲ್ಲ. ಮಾತುಗಳ ಮುಖಾಂತರ ಉತ್ತರ ಕೊಡ್ತೀನಿ. ನೀವು ಅಂದ ಹಾಗೆ ಅನಿಸಿಕೊಳ್ಳೋಕೆ ಆಗಲ್ಲ’ ಎಂದು ವಾರ್ನ್ ಮಾಡಿದ್ದಾರೆ ಡ್ರೋನ್ ಪ್ರತಾಪ್. ಡ್ರೋನ್ ಪ್ರತಾಪ್ ಮೇಲೆ ಏಕವಚನದಲ್ಲಿ ಮಾತಿನ ದಾಳಿ ಮಾಡಿರುವ ವಿನಯ್, ‘ಹೋಗೋಲೇ, ಮುಚ್ಕೊಂಡ್ ಕೂತುಕೊಳ್ಳಬೇಕು’ ಅಂತೆಲ್ಲಾ ಕೂಗಾಡಿದ್ದಾರೆ. ‘ನನಗೆ ಎಫೆಕ್ಟ್ ಆದರೂ ಪರ್ವಾಗಿಲ್ಲ. ಇಡೀ ಕರ್ನಾಟಕಕ್ಕೆ ಗೊತ್ತಾಗಬೇಕು ಇವನು ಆಡ್ತಿರೋ ನಾಟಕವನ್ನ’ ಎಂದು ಡ್ರೋನ್ ಪ್ರತಾಪ್ ವಿರುದ್ಧ ವಿನಯ್ ಹೇಳಿದ್ದಾರೆ.
‘ಯಾವ ಪುಸ್ತಕವನ್ನ ಯಾರು ಬರೆದರೆ ಅರ್ಹ’ ಎಂಬ ಚಟುವಟಿಕೆಯನ್ನ ಕಿಚ್ಚ ಸುದೀಪ್ ನೀಡಿದ್ದರು. ಈ ವೇಳೆ ‘ಬೇರೆಯವರನ್ನ ತುಳಿದು ಬೆಳೆಯೋದು ಹೇಗೆ?’ ಪುಸ್ತಕವನ್ನ ವಿನಯ್‌ಗೆ ಡ್ರೋನ್ (drone) ಪ್ರತಾಪ್ ನೀಡಿದರು. ಅದಕ್ಕೆ 'ಇಲ್ಲಿಯವರೆಗೂ ಯಾರ್ಯಾರು ವಿನಯ್ ಜೊತೆಯಲ್ಲಿ ಇದ್ದರೋ ಎಲ್ಲಾ ಫ್ರೆಂಡ್ಸ್, (friends) ಹಾಗೆ ಹೀಗೆ ಅಂದುಕೊಂಡು ಅವರೆಲ್ಲಾ ಎಲ್ಲಿ ತಪ್ಪು ಮಾಡ್ತಿದ್ದಾರೆ ಎಂಬ ಅಭಿಪ್ರಾಯವನ್ನೇ ವಿನಯ್ ಅವರು ಕೊಟ್ಟಿಲ್ಲ. ಇಂತಹ ಕಡೆ ತಪ್ಪು ಮಾಡ್ತಿದ್ದಾರೆ ಅಂತ ವಿನಯ್ ಹೇಳೇ ಇಲ್ಲ. ಸರಿ ಎಂದುಕೊಂಡೇ ಜೊತೆಯಲ್ಲಿ ಇದ್ದವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್ ಎಲ್ಲಾ ಇವರ ಬೆಡ್‌ಗೆ ಸೇರಿಕೊಳ್ತು’ ಎಂದು ಡ್ರೋನ್ ಪ್ರತಾಪ್ ಕಾರಣ ಕೊಟ್ಟರು. ಇದು ವಿನಯ್‌ನ ರೊಚ್ಚಿಗೆಬ್ಬಿಸಿ ಆಟ (game) ಬಾರದ ಮಾತು ಆಡುವ ಹಾಗೆ ಮಾಡಿತು.
ಅಮಾಯಕನ ವೇಷ ಹಾಕ್ಕೊಂಡು ಪ್ರತಾಪ್ ಬೂದಿ ಎರೆಚ್ತಾನೆ: ವಿನಯ್- ಡ್ರೋನ್ ಮಾತಿನ ಚಕಮಕಿ!