ಕಂಟ್ರೋಲ್​+ ಆಲ್ಟ್​+ ಡಿಲೀಟ್​ ಸೂತ್ರ ಒಪ್ಪಿಕೊಂಡ್ರೆ ನೂರು ಶಕುಂತಲಾ ಬಂದ್ರೂ ಸಂಸಾರ ಬಲು ಸುಂದರ!

ಭೂಮಿಕಾಗೆ ತನ್ನ ತಪ್ಪಿನ ಅವರಿವಾಗಿದೆ. ಗೌತಮ್​ ಬಳಿ ಕ್ಷಮೆ ಕೋರಿದ್ದಾಳೆ. ಆಗ ಗೌತಮ್​ ಕಂಟ್ರೋಲ್​+ ಆಲ್ಟ್​+ ಡಿಲೀಟ್​ ಸೂತ್ರ ಹೇಳಿದ್ದಾನೆ. ಏನಿದು?
 

Bhoomika realizes her mistake and apologized to Gautham in Amrutadhare suc

ಎಷ್ಟೋ ಸಂದರ್ಭದಲ್ಲಿ ಮಿಸ್​ ಕಮ್ಯುನಿಕೇಷನ್​ ಆಗಿ ದಂಪತಿ ನಡುವೆ ಬಿರುಕು ಉಂಟಾಗುತ್ತದೆ. ಚಿಕ್ಕಪುಟ್ಟ ಸಮಸ್ಯೆಗಳೇ ಬೃಹದಾಕಾರವಾಗಿ ಬೆಳೆದು ದಾಂಪತ್ಯ ಕೊನೆಗೊಳ್ಳುತ್ತದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಎಷ್ಟೋ ಪ್ರಕರಣಗಳಲ್ಲಿನ ಕಾರಣ ಕೇಳಿದಾಗ ಅಯ್ಯೋ ಇದಕ್ಕೂ ಡಿವೋರ್ಸ್​ ತೆಗೆದುಕೊಳ್ಳುತ್ತಾರಾ ಎನ್ನಿಸುವುದು ಉಂಟು. ಏಕೆಂದರೆ ದಂಪತಿ ನಡುವೆ ಇಗೋ ಬಂದು ನಾನು ಹೇಳಿದ್ದೇ ಸರಿ ಎಂದಾಗ, ಯಾರು ಸರಿ- ಯಾರು ತಪ್ಪು ಎನ್ನುವುದು ಮುಖ್ಯವಾಗುವುದೇ ಇಲ್ಲ. ಹಾಗೆ ನೋಡಿದರೆ ಎಷ್ಟೋ ಸಂದರ್ಭಗಳಲ್ಲಿ ಇಬ್ಬರದ್ದೂ ತಪ್ಪು ಇರಲ್ಲ. ಇಬ್ಬರ ನಡುವೆ ಹುಳಿ ಹಿಂಡುವವರ ಮೇಲುಗೈ ಆಗಿಬಿಡುತ್ತದೆ. ಇದೇ ಕಾರಣಕ್ಕೆ ದಂಪತಿ ನಡುವೆ ಏನೇ ಕಲಹ ಉಂಟಾದರೂ ಅದನ್ನು ಒಟ್ಟಿಗೇ ಕುಳಿತು ಬಗೆಹರಿಸಿಕೊಂಡರೆ ಸುಂದರ ಸಂಸಾರ ನಡೆಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ ಅಮೃತಧಾರೆ.

ಇಲ್ಲಿ ಭೂಮಿಕಾಳ ಅಹಂಗೆ ಪೆಟ್ಟುಬಿದ್ದಿತ್ತು. ಯಾರೂ ಹಂಗೂ ಇಲ್ಲದೇ, ಯಾರ ಇನ್​ಫ್ಲುಯೆನ್ಸ್​ ಇಲ್ಲದೇ ತನ್ನ ಸ್ವಂತ ಶಕ್ತಿ, ಟ್ಯಾಲೆಂಟ್​ ಮೇಲೆ ಕೆಲಸ ಮಾಡಬೇಕು ಎನ್ನುವುದು ಆಕೆಯ ಆಸೆ. ಅದೇನೂ ಗೌತಮ್​ಗೆ ತಿಳಿಯದ ವಿಷಯವೇನಲ್ಲ. ಅದೇ ಕಾರಣಕ್ಕೆ ನಿಮಗಿಷ್ಟವಾದ ಕೆಲಸ ಮಾಡಿ ಎಂದಿದ್ದ. ಭೂಮಿಕಾ ಕೂಡ ಕೆಲಸಕ್ಕೆ ಹೋಗಿದ್ದಳು.  ಆದರೆ ಅಲ್ಲಿ ಅವಳಿಗೆ ದೊಡ್ಡ ಹುದ್ದೆ ನೀಡಲಾಯಿತು. ಅಲ್ಲಿದ್ದವರು ಸುಮ್ಮನೇ ಇರಬೇಕಲ್ಲಾ, ಗೌತಮ್​ ಅವರ ಇನ್​ಫ್ಲುಯೆನ್ಸ್​ ಎಂದು ಚುಚ್ಚಲು ಶುರು ಮಾಡಿದರು. ಅಸಲಿಗೆ ಈ ದಂಪತಿ ನಡುವೆ ಹುಳಿ ಹಿಂಡಿದ್ದವಳು ಶಕುಂತಲಾ. ಭೂಮಿಕಾಳ ಗುಣ ಗೊತ್ತಿದ್ದ ಅವಳೇ ಬೇಕಂತಲೇ ದೊಡ್ಡ ಹುದ್ದೆ ಕೊಡಿಸಿದ್ದಳು. ಇದು ಗೌತಮ್​ ಮಾಡಿದ್ದು ಎಂದು ತಿಳಿದು ಭೂಮಿಕಾ ರಾದ್ಧಾಂತ ಮಾಡುತ್ತಾಳೆ. ಆಮೇಲೆ ಇಬ್ಬರ ನಡುವೆ ಬಿರುಕು ಬರುತ್ತದೆ ಎಂದು ಅಂದುಕೊಂಡಿದ್ದಳು.

ಜಗಳ ಮಾಡೋ ಮೊದ್ಲು ವಿಷ್ಯ ಏನಂತ ಗಂಡನಿಗೆ ಸರಿಯಾಗಿ ಹೇಳ್ಬಾರ್ದಾ? ಹೆಂಡತಿಯರಿಗೆ ನೆಟ್ಟಿಗರ ಕ್ಲಾಸ್‌!

ಹಾಗೆ ಆಯಿತು ಕೂಡ. ಮೂಗಿನ ತುದಿಯಲ್ಲಿಯೇ ಕೋಪ ಇರುವ ಕೆಲವು ಹೆಣ್ಣುಮಕ್ಕಳಂತೆ ಭೂಮಿಕಾ ಕೂಡ ಹಿಂದೆ ಮುಂದೆ ಯೋಚಿಸದೇ ಗೌತಮ್​ನೇ ಇದಕ್ಕೆ ಕಾರಣ ಎಂದು ರೇಗಾಡಿದಳು. ಕೊನೆಗೆ ಆನಂದ್​ ಬುದ್ಧಿ ಹೇಳಿದ. ಸಮಾಧಾನಗೊಂಡ ಬಳಿಕ ಭೂಮಿಕಾಗೆ ತಪ್ಪಿನ ಅರಿವಾಯ್ತು. ಗಂಡನ ಬಳಿ ಹೋಗಿ ಕ್ಷಮೆ ಕೇಳಿದಳು. ಅವನೋ ಗೌತಮ್​. ಪತ್ನಿಯೆದುರು ಇನ್ನೂ ಪ್ರೀತಿ ನಿವೇದನೆ ಮಾಡಿಕೊಂಡಿಲ್ಲ ಅನ್ನೋದು ಬಿಟ್ಟರೆ ಆಕೆಯೆಂದರೆ ಪ್ರಾಣ. ಅವನಿಗೂ ಇಂಥ ವಿಷಯಗಳು ಚೆನ್ನಾಗೇ ಗೊತ್ತು. ಅದಕ್ಕಾಗಿಯೇ ಸುಲಭ ಸೂತ್ರವೊಂದು ಹೇಳಿಕೊಟ್ಟ ಅದೇ  ಕಂಟ್ರೋಲ್​+ ಆಲ್ಟ್​+ ಡಿಲೀಟ್​.

ಕಂಪ್ಯೂಟರ್​ನಲ್ಲಿ  ಕಂಟ್ರೋಲ್​+ ಆಲ್ಟ್​+ ಡಿಲೀಟ್​ ಮಾಡಿದರೆ ಇರುವ ಎಲ್ಲಾ ಫೈಲ್​ಗಲು ಡಿಲೀಟ್​ ಆಗಿ ಹೋಗುತ್ತವೆ. ಹಾಗೆಯೇ ಇಲ್ಲಿಯವರೆಗೆ ನಡೆದ ಗಲಾಟೆಯನ್ನೆಲ್ಲಾ  ಕಂಟ್ರೋಲ್​+ ಆಲ್ಟ್​+ ಡಿಲೀಟ್​ ಮಾಡಿಬಿಡೋಣ. ನಿಮ್ಮ ನನ್ನ ನಡುವೆ ಏನೂ ಆಗೇ ಇಲ್ಲ, ಮಾತುಕತೆಯೇ ನಡೆದೇ ಇಲ್ಲ ಎನ್ನೋದು ಎಂದಿದ್ದಾನೆ. ಹಾಗೆಯೇ ದಂಪತಿ ಹತ್ತಿರವಾಗಿದ್ದಾರೆ. ರಾತ್ರಿ ನಿದ್ದೆ ಬರದ್ದಕ್ಕೆ ಇಬ್ಬರೂ ಐಸ್​ಕ್ರೀಂ ತಿಂದು ಮನಸ್ಸನ್ನು ತಂಪು ಮಾಡಿಕೊಂಡಿದ್ದಾರೆ. ಅತ್ತ ಗಂಡ-ಹೆಂಡತಿ ಎಲ್ಲಿ ಜಗಳವಾಡಿಕೊಂಡು ಮುನಿಸಿಕೊಂಡಿದ್ದಾರೋ ಎಂದು ಆನಂದ್​ ಫೋನ್​ ಮಾಡಿದರೆ ಇಬ್ಬರೂ ಐಸ್​ಕ್ರೀಂ ತಿಂತಿರೋ ವಿಷಯ ಕೇಳಿ ಅವರಿಗೂ ಫುಲ್​  ಖುಷ್​ ಆಗಿದೆ. ಇದೇ ಸೂತ್ರ ಎಲ್ಲರೂ ಅಳವಡಿಸಿಕೊಳ್ಳಬೇಕಿದೆ ಎನ್ನುತ್ತಿದ್ದಾರೆ  ನೆಟ್ಟಿಗರು. 

ಯಶ್‌ ಟಾಕ್ಸಿಕ್‌ ಚಿತ್ರದಿಂದ ನಟಿ ಕರೀನಾ ಕಪೂರ್‍ ಔಟ್‌! ಬಾಲಿವುಡ್‌ ಬೆಡಗಿಗೆ ಆಗಿದ್ದೇನು?

Latest Videos
Follow Us:
Download App:
  • android
  • ios