ಕಿನ್ನರಿ ಧಾರಾವಾಹಿ ಮತ್ತು ಬಿಗ್‌ಬಾಸ್ ಮೂಲಕ ಖ್ಯಾತಿ ಪಡೆದ ಭೂಮಿ ಶೆಟ್ಟಿ, ತಮಿಳು ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ವಿದೇಶದಿಂದ ಹಿಂದಿರುಗಿ, ಈಗ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಲವಕುಶದಲ್ಲಿ ಸೀತೆಯ ಪಾತ್ರ ನಿರ್ವಹಿಸಿದ ಇವರು, ಯಕ್ಷಗಾನವನ್ನು ಪವಿತ್ರ ಆಚರಣೆ ಎಂದು ಕರೆದಿದ್ದಾರೆ.
ಕಿನ್ನರಿ ಸೀರಿಯಲ್ ಮೂಲಕ ಕನ್ನಡಿಗರ ಮನೆಮಾತಾದ ನಟಿ ಭೂಮಿ ಶೆಟ್ಟಿ (Bhoomi Shetty) ಬಳಿಕ ಬಿಗ್ ಬಾಸ್ ಸೀಸನ್ 7 ರ ಮೂಲಕ, ತಮ್ಮ ಮುದ್ದು ಮಾತುಗಳು, ಆಟದ ವಿಷಯಕ್ಕೆ ಬಂದಾಗ ಟಫ್ ಸ್ಪರ್ಧಿಯಾಗಿ ನಿಂತಿದ್ದು, ವೀಕ್ಷಕರನ್ನು ಸಖತ್ ಆಗಿ ಮನರಂಜಿಸಿದ್ದರು. ನಂತರ ಭೂಮಿ ಶೆಟ್ಟಿ ತಮಿಳು, ತೆಲುಗು ಸೀರಿಯಲ್ ಗಳಲ್ಲಿ ಬ್ಯುಸಿಯಾದರು. ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಕೂಡ ಸುದ್ದಿಯಲ್ಲಿದ್ದರು ಭೂಮಿ ಶೆಟ್ಟಿ. ಅಷ್ಟೇ ಅಲ್ಲ ತಮ್ಮ ವಿಭಿನ್ನ ಲುಕ್ ಮೂಲಕವೂ ಇವರು ಗಮನ ಸೆಳೆದಿದ್ದರು. ಕಳೆದ ಒಂದಷ್ಟು ಸಮಯದಿಂದಂತೂ ಭೂಮಿ ಶೆಟ್ಟಿ ವಿದೇಶದಲ್ಲಿದ್ದು, ಅಲ್ಲಿನ ಮೂಲೆ ಮೂಲೆಯನ್ನು ಎಕ್ಸ್ ಪ್ಲೋರ್ ಮಾಡೋದ್ರಲ್ಲಿ ಬ್ಯುಸಿಯಾಗಿ ಬಿಟ್ಟಿದ್ದರು. ಸದ್ಯಕ್ಕೆ ಭಾರತದಲ್ಲಿದ್ದು, ಒಂದಷ್ಟು ಕೆಲಸಗಳಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ.
ಸೀರೆಯಲ್ಲಿ ಭೂಮಿ ಶೆಟ್ಟಿ… ಕಡಲೂರಿನ ಚೆಲುವೆಯ ಅಂದಕ್ಕೆ ನೆಟ್ಟಿಗರು ಫಿದಾ!
ಇತ್ತೀಚೆಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವರ್ಕ್ ಔಟ್ ವಿಡಿಯೋಗಳನ್ನು (workout video) ಶೇರ್ ಮಾಡಿದ್ದರು. ಭೂಮಿ ಫಿಟ್ ಆಗಿರೋದಕ್ಕೆ ಮಿಸ್ ಮಾಡದೆ ವರ್ಕೌಟ್ ಮಾಡೋದೆ ಕಾರಣ. ವಿದೇಶದಲ್ಲಿದ್ದಾಗಲೂ ನಟಿ ಫಿಟ್ನೆಸ್ ಬಗ್ಗೆ ಗಮನ ಕೊಡೋದನ್ನು ಮರೆತಿರಲಿಲ್ಲ. ಇದೀಗ ಭೂಮಿ ತಮ್ಮ ಹಳೆಯ ಹವ್ಯಾಸಕ್ಕೆ ಮತ್ತೆ ಬಣ್ಣ ಹಚ್ಚಿದ್ದಾರೆ. ಭೂಮಿ ಶೆಟ್ಟಿ ಅತ್ಯುತ್ತಮ ನಟಿ ಅನ್ನೋದು ಗೊತ್ತೆ ಇದೆ. ಈಗಾಗಲೇ ಸೀರಿಯಲ್, ಸಿನಿಮಾಗಳ ಮೂಲಕ ಆದನ್ನು ಸಾಬೀತು ಪಡಿಸಿದ್ದಾರೆ. ಆದರೆ ಅವರೊಬ್ಬ ಹವ್ಯಾಸಿ ಯಕ್ಷಗಾನ ಕಲಾವಿದೆ ಅನ್ನೋದು ಗೊತ್ತಾ? ಹೌದು ಕರಾವಳಿ ಕುಂದಾಪುರದ (Kundapura girl) ಹುಡುಗಿಯಾಗಿರುವ ಭೂಮಿ ಶೆಟ್ಟಿ ಯಕ್ಷಗಾನವನ್ನೂ ಸಹ ಮಾಡುತ್ತಾರೆ. ಇತ್ತೀಚೆಗೆ ಮತ್ತೆ ಯಕ್ಷಗಾನಕ್ಕೆ ಬಣ್ಣ ಹಚ್ಚಿದ್ದು, ಅದರ ವಿಡಿಯೋ ತುಣುಕು ಮತ್ತು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ ನಟಿ.
ತಮ್ಮ ಮುದ್ದಾದ ಫೋಟೊ ಶೇರ್ ಮಾಡಿ Don’t be Beautiful ಎಂದ ನಟಿ ಭೂಮಿ ಶೆಟ್ಟಿ
ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಯಕ್ಷಗಾನಕ್ಕೆ (Yakshagana) ಬಣ್ಣ ಹಚ್ಚುತ್ತಿರುವ, ಡೈಲಾಗ್ ಅಭ್ಯಸಿಸುತ್ತಿರುವ ಹಾಗೂ ಯಕ್ಷಗಾನದ ತುಣುಕುಗಳ ವಿಡಿಯೋ ಶೇರ್ ಮಾಡಿರುವ ಭೂಮಿ ಶೆಟ್ಟಿ, ಹವ್ಯಾಸಿ ಯಕ್ಷಗಾನ ಕಲಾವಿದೆ ಎಂದು ಬರೆದುಕೊಂಡು, ಯಕ್ಷಗಾನವು ನನಗೆ ಕೇವಲ ಒಂದು ಕಲಾ ಪ್ರಕಾರವಲ್ಲ, ಅದು ಒಂದು ಪವಿತ್ರ ಆಚರಣೆ, ನಾನು ಪ್ರತಿವರ್ಷ ಹೆಮ್ಮೆಯಿಂದ ಎತ್ತಿಹಿಡಿಯುವ ಸಂಪ್ರದಾಯವಾಗಿದೆ. ಈ ರೋಮಾಂಚಕ ಮತ್ತು ಕಾಲಾತೀತ ಕಥೆ ಹೇಳುವಿಕೆಗೆ ಪ್ರತಿ ಪ್ರದರ್ಶನವೂ ನನ್ನ ಕೊಡುಗೆ, ನನ್ನ ಸೇವೆ. ಈ ವರ್ಷ ವಿಶೇಷವಾಗಿತ್ತು, ಇದು ನನ್ನ ಪ್ರಯಾಣದಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸಿತು, ನಾನು ಮೊದಲ ಬಾರಿಗೆ ಸ್ತ್ರೀ ವೇಷಕ್ಕೆ ಕಾಲಿಟ್ಟೆ, ಲವ ಕುಶನ ಮಹಾಕಾವ್ಯದಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿದೆ. ಈ ಕಲಾ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ನನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುವುದು ನನ್ನ ಹೃದಯಕ್ಕೆ ಹತ್ತಿರವಾದ ವಿಷ್ಯ. ನನಗೆ ಸಾಧ್ಯವಾದಷ್ಟು, ನಾನು ಈ ಕಲೆಯ ಸೇವೆಯನ್ನು ಭಕ್ತಿಯಿಂದ ಮುಂದುವರಿಸುತ್ತೇನೆ, ಅದರ ಸ್ಫೂರ್ತಿಯನ್ನು ಹೆಮ್ಮೆಯಿಂದ ಮುಂದುವರಿಸುತ್ತೇನೆ. ಎಂದೆಂದಿಗೂ ಕೃತಜ್ಞರಾಗಿರುತ್ತೇವೆ ಎಂದು ಬರೆದುಕೊಂಡಿದ್ದಾರೆ ಭೂಮಿ ಶೆಟ್ಟಿ.
