ಸೀತಾರಾಮ ಧಾರವಾಹಿಯಲ್ಲಿ ಸಿಹಿ ಆಟ ಶುರುವಾಗಿದೆ. ಭಾರ್ಗವಿ ಚಾಪೆ ಕೆಳಗೆ ನುಸುಳಿದ್ರೆ ಸಿಹಿ ರಂಗೋಲಿ ಕೆಳಗೆ ನುಸುಳುವಂತೆ ಕಾಣುತ್ತೆ. ರಾಮ – ಸೀತೆ ಜೊತೆ ಮಲಗಲು ಮುಂದಾದ ಸಿಹಿ ತನ್ನ ಆಸೆ ಈಡೇರಿಸಿಕೊಂಡಿದ್ದಾಳೆ.  

ಝೀ ಕನ್ನಡದಲ್ಲಿ ಪ್ರಸಾರವಾಗುವ ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಎಲ್ಲರ ಫೆವರೆಟ್. ಆಕೆಯ ಮಾತು, ನಟನೆಗೆ ಅಭಿಮಾನಿಗಳು ಮನಸೋತಿದ್ದಾರೆ. ಸೀತಾ – ರಾಮನ ಮದುವೆ ಆಗುತ್ತಾ ಎನ್ನುವ ದೊಡ್ಡ ಪ್ರಶ್ನೆಯಲ್ಲಿದ್ದವರಿಗೆ ಉತ್ತರವೇನೋ ಸಿಕ್ಕಿದೆ. ಆದ್ರೆ ಮದುವೆ ಆದ್ಮೇಲೆ ನಿರೀಕ್ಷೆಯಂತೆ ಭಾರ್ಗವಿ, ಸಿಹಿಗೆ ತೊಂದರೆ ಕೊಡ್ತಾಳೆ ಅಂತ ವೀಕ್ಷಕರು ಭಾವಿಸಿದ್ದರು. ಅದ್ರಂತೆ ಭಾರ್ಗವಿ, ಸಿಹಿಗೆ ದುಸ್ವಪ್ನವಾಗಿ ಕಾಡುವ ಪ್ರಯತ್ನವನ್ನೇನೋ ಮಾಡ್ತಿದ್ದಾಳಾದ್ರೂ ಸಿಹಿ ಏನು ಕಮ್ಮಿ ಇಲ್ಲ. ಏಟಿಗೆ ಎದುರೇಟು ನೀಡುವ ಸಿಹಿ ಈ ಬಾರಿ ಭಾರ್ಗವಿಗೆ ಸರಿಯಾದ ಪೆಟ್ಟು ನೀಡಿದ್ದಾಳೆ.

ರಾಮ (Rama) ನ ಮನೆಯಲ್ಲಿ ಸದ್ಯ ಫಸ್ಟ್ ನೈಟ್ (First Night) ತಯಾರಿ ನಡೆಯುತ್ತಿದೆ. ಈ ನೆಪದಲ್ಲಾದ್ರೂ ಸೀತಾ (Sita) – ರಾಮನಿಂದ ಸಿಹಿಯನ್ನು ದೂರ ಮಾಡ್ಬೇಕು ಅಂತಾ ಭಾರ್ಗವಿ ನೋಡ್ತಿದ್ದಾಳೆ. ಹಾಗಾಗಿಯೇ ಸಿಹಿ ರೂಮ್ ಬದಲಿಸುವ ಪ್ರಯತ್ನ ನಡೆಸ್ತಾಳೆ. ಅಮ್ಮನ ರೂಮಿಗೆ ಹೋಗ್ತಿದ್ದ ಸಿಹಿಯನ್ನು ಕರೆದು, ನಿನ್ನ ರೂಮ್ ಕೆಳಗಿದೆ, ಮೇಲೆ ಸೀತಾ ಹಾಗೂ ರಾಮ ಇಬ್ಬರೇ ಇರ್ತಾರೆ. ಸೀತಾರಿಂದ ನೀನು ದೂರ ಇರಬೇಕು ಎನ್ನುತ್ತಾಳೆ. ಅದಕ್ಕೆ ಭಯಗೊಂಡ ಸಿಹಿ, ಅಮ್ಮನನ್ನು ಕೂಗ್ತಾ ಓಡ್ತಾಳೆ. ಸದಾ ಸಿಹಿ ಗುಂಗಿನಲ್ಲೇ ಇರುವ ರಾಮನಿಗೆ ಸಿಹಿ ಧ್ವನಿ ಕೇಳಿಸುತ್ತೆ. ತಕ್ಷಣ ಆಕೆಯನ್ನು ಹುಡುಕ್ತಾ ರಾಮ ಕೆಳಗೆ ಬರ್ತಾನೆ. ಸಿಹಿಯನ್ನು ಏನು ಅಂತ ಪ್ರಶ್ನೆ ಮಾಡ್ತಾನೆ. ಮಧ್ಯೆ ಬಾಯಿ ಹಾಕುವ ಭಾರ್ಗವಿ, ಇವತ್ತು ಸಿಹಿನಾ ಎನ್ನುವ ಮೊದಲೇ ರಾಮ್, ನಾನು ನೋಡ್ಕೊಳ್ತೇನೆ ಅಂತಾ ಹೇಳಿಬಿಡ್ತಾನೆ. ನಾನು ನಿಮ್ಮ ಜೊತೆ ಮಲಗ್ಬಹುದಾ ಅಂತಾ ಮುದ್ದಾಗಿ ಕೇಳುವ ಸಿಹಿ ಮಾತಿಗೆ ರಾಮ ಇಲ್ಲ ಅನ್ನೋದಿಲ್ಲ. ಓಕೆ ಎನ್ನುತ್ತಿದ್ದಂತೆ ಖುಷಿಯಾಗುವ ಸಿಹಿ, ಭಾರ್ಗವಿಗೆ ತಿರುಗೇಟು ನೀಡಲು ಮರೆಯೋದಿಲ್ಲ. ಗುಡ್ ನೈಟ್ ಬಡ್ಡಿ ಬಂಗಾರಮ್ಮ ಆಂಟಿ ಎನ್ನುತ್ತಲೇ ಭಾರ್ಗವಿಯನ್ನು ಕೆಣಕುತ್ತಾಳೆ. 

ನಟ ದರ್ಶನ್ ಬಿಡುಗಡೆಗೆ ಅಲಾಯಿ ದೇವರ ಮೊರೆ ಹೋದ ಅಭಿಮಾನಿಗಳು!

ರಾಮ- ಸೀತೆರ ಕೈ ಹಿಡಿದು ಮಧ್ಯೆ ಮಲಗುವ ಸಿಹಿಗೆ ರಾಮನ ಬಲವಿದೆ. ಭಾರ್ಗವಿ ತಂತ್ರವೆಲ್ಲ ವಿಫಲವಾದಂತೆ ಕಾಣ್ತಿದೆ. ಧಾರಾವಾಹಿ ತುಣುಕು ನೋಡ್ತಿದ್ದಂತೆ ವೀಕ್ಷಕರು ಖುಷಿಯಾಗಿದ್ದಾರೆ. ಭಾರ್ಗವಿಗೆ ಇಂಥವರೇ ಬೇಕು ಅಂತ ವೀಕ್ಷಕರು ಹೇಳ್ತಿದ್ದಾರೆ. ಸಿಹಿ ರಾಕ್ಸ್ ಭಾರ್ಗವಿ ಶಾಕ್ಸ್ ಅಂತ ಕಮೆಂಟ್ ಮಾಡಿದ್ದಾರೆ. ಚಾಲಾಕಿ ಸಿಹಿ ಚೆನ್ನಾಗಿ ಆಟ ಆಡಿಸ್ತಿದ್ದಾಳೆ ಎಂಬುದು ವೀಕ್ಷಕರ ಅಭಿಪ್ರಾಯ. ಇದು ಬರೀ ಟ್ರಯಲ್, ಮುಂದಿದೆ ಮಾರಿಹಬ್ಬ ಅನ್ನೋದು ಅಭಿಮಾನಿಗಳ ಮಾತು. 

ಮದುವೆ ನಂತ್ರ ಭಾರ್ಗವಿ ಹಾಗೂ ಸಿಹಿ ಆಟ ನೋಡೋದು ವೀಕ್ಷಕರಿಗೆ ಇಷ್ಟವಾಗ್ತಿದೆ. ಮದುವೆಯಲ್ಲೂ ಭಾರ್ಗವಿ, ಸಿಹಿ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಳು. ಫೋಟೋ ವಿಷ್ಯದಲ್ಲಿ ಸಿಹಿಯನ್ನು ದೂರ ಇಟ್ಟಿದ್ದಳು. ಸೀತಾ ಹಾಗೂ ರಾಮ ಇಬ್ಬರೇ ಜೊತೆಗಿರೋ ಫೋಟೋ ಬೇಕು, ನಾವು ಆಮೇಲೆ ಸೆಲ್ಫಿ ತೆಗೆದುಕೊಳ್ಳೋಣ ಅಂತ ಸಿಹಿಗೆ ಬುದ್ಧಿವಾದ ಹೇಳಿ, ಗ್ರೂಪ್ ಫೋಟೋಕ್ಕೆ ಫೋಸ್ ನೀಡಲು ಮುಂದಾಗಿದ್ದಳು ಭಾರ್ಗವಿ. ಈಗ ಫಸ್ಟ್ ನೈಟ್ ಸಮಯದಲ್ಲಿ ರಾಮ ಹಾಗೂ ಸೀತಾರಿಂದ ಸಿಹಿಯನ್ನು ದೂರ ಮಾಡಲು ಮುಂದಾಗಿದ್ದಾಳೆ.

ಒಮ್ಮೆ ಅವ್ರು ಮತ್ತೊಂದು ಮದ್ವೆ ಆದ್ರೆ ನಿಮ್ ರಿಯಾಕ್ಷನ್ ಏನಿರ್ಬಹುದು ಅಂದಾಗ ಚಂದನ್ ಶೆಟ್ಟಿ ಏನಂದ್ರು..?

ಬಹುತೇಕ ಎಲ್ಲ ಧಾರಾವಾಹಿಯಲ್ಲಿ ಅತ್ತೆ- ಸೊಸೆ ಅಥವಾ ಅತ್ತಿಗೆ ನಾದಿನಿ ಜಗಳ, ಕಿತ್ತಾಟವನ್ನು ನಾವು ನೋಡ್ತೇವೆ. ಆದ್ರೆ ಈ ಧಾರಾವಾಹಿಯಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡಲು ಭಾರ್ಗವಿ ಮುಂದಾಗಿದ್ದಾಳೆ. ಆದ್ರೆ ಸಿಹಿ ಗುಬ್ಬಿಯಲ್ಲ ಹುಲಿ ಅನ್ನೋದು ಭಾರ್ಗವಿಗೆ ಇನ್ಮುಂದೆ ಗೊತ್ತಾಗುತ್ತೆ ಎನ್ನುತ್ತಾರೆ ವೀಕ್ಷಕರು. ಬಹುತೇಕ ವೀಕ್ಷಕರಿಗೆ ಸಿಹಿ, ಬಡ್ಡಿ ಬಂಗಾರಮ್ಮ ಆಂಟಿ ಅಂತ ಕರೆದಿದ್ದು ಇಷ್ಟವಾಗಿದೆ.

View post on Instagram