'ಭರವಸೆ' ಕರ್ನಾಟಕದ  ಭಿನ್ನ ಭಿನ್ನ ಕನ್ನಡ ಒಂದೇ ಹಾಡಿನಲ್ಲಿ!

ಕರ್ನಾಟಕದಲ್ಲಿ ಕನ್ನಡ ಭಾಷೆ ಸೊಗಡು ಬೇರೆ ಬೇರೆ/ ಎಲ್ಲ ಭಾಷೆಗಳನ್ನು ಒಂದೇ  ಹಾಡಿನಲ್ಲಿ ತರಲಾಗಿದೆ/  ಹುಡುಗರ ತಂಡದ ಸಾಹಸ/ ವಿಕಸನ ಕ್ರಿಯೇಶನ್ ಅರ್ಪಿಸುವ ಭರವಸೆ  ಹಾಡಿಗೆ ಸಖತ್ ರೆಸ್ಪಾನ್ಸ್ 

BHARAVSE Kannnada Song gets good response in Social Media You tube mah

ಶಿವಮೊಗ್ಗ(ಡಿ .  25)  ಕನ್ನಡದಲ್ಲಿ ಹೊಸ  ಹೊಸ  ಸಾಹಸಗಳು ನಡೆಯುತ್ತಲೇ ಇರುತ್ತವೆ. ಕನ್ನಡದ್ದೇ ಹುಡುಗರ ತಂಡವೊಂದು  ಯು ಟ್ಯೂಬ್ ನಲ್ಲಿ ಗೀತೆಯೊಂದನ್ನು ಬಿಡುಗಡೆ ಮಾಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ವಿಕಸನ ಕ್ರಿಯೇಶನ್ ಅರ್ಪಿಸುವ ಭರವಸೆ  ಹಾಡಿಗೆ ಸಖತ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಕರ್ನಾಟಕದ ಎಲ್ಲ  ಕನ್ನಡಗಳನ್ನು ಕಟ್ಟಿಕೊಡುವ ಕೆಲಸ ಮಾಡಲಾಗಿದೆ. 

ಕನ್ನಡ ನಾಡಿನ ಸಕ್ಕರೆಯ ನುಡಿಗೆ ನೂರಾರು ದಾಟಿಗಳು..... ಬೀದರಿನಿಂದ ಚಾಮರಾಜ ನಗರದವರೆಗೆ..... ಮಂಗಳೂರಿನಿಂದ ಪಾವಗಡದವರೆಗೆ  ನಮ್ಮ ಕನ್ನಡಕ್ಕೆ ನೂರಾರು ರೂಪಗಳು!!!!.... ಪ್ರತಿಯೊಂದು ಬಗೆಯೂ ಸಮೃದ್ಧ, ಶ್ರೀಮಂತ.... ಅಷ್ಟೇ ಸತ್ವಯುತ.... ಈ ಗೀತ ಚಿತ್ರದಲ್ಲಿ ನಾವು ಇದೇ ಭಾವವನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದೇವೆ ಎಂದು ಜವಾಬ್ದಾರಿ ಹೊತ್ತಿರುವ ವಿನಯ್  ಹೇಳುತ್ತಾರೆ.

ಅಲೆಯಾಗಿ ಬಾ ಕನ್ನಡ ಆಲ್ಬಂ ಸಾಹಸ

ಕುಂದಾಪುರದ ಕುಂದಗನ್ನಡ, ಉತ್ತರ ಕರ್ನಾಟಕದದ ಗಂಡುಗನ್ನಡ, ಶಿರಸಿ-ಸಾಗರ ಭಾಗದ ಹವ್ಯಕ ಕನ್ನಡ ಹಾಗು ಮಧ್ಯ ಭಾಗದ ಮಂಡ್ಯಗನ್ನಡವನ್ನು ಈ ಹಾಡಿನಲ್ಲಿ  ಬಳಸಲಾಗಿದೆ. ಭಾಷೆ ಯಾವತ್ತೂ ದೊಡ್ಡದು.... ಅದರ ಹದ ಅರಿತು ಪ್ರೀತಿಯಿಂದ ಬಳಸುವುದಷ್ಟೇ ಭಾಷಿಕರಾಗಿ ನಾವು ಮಾಡಬಹುದಾದ ಕೆಲಸ ..... ಭಾಷೆ-ಭಾಷಿಕರ ನಡುವೆ ಇರಬೇಕಾದುದು ಇದೇ ಭರವಸೆ ಎಂದು ಹಾಡಿನ ಸಂದೇಶ ಸಾರುತ್ತಾರೆ.

 ಪಾರ್ಥ ಚಿರಂತನ್, ಪ್ರಥ್ವಿ ಪಿ ಗೌಡ ರಾಗ ಸಂಯೋಜನೆ ಮಾಡಿದ್ದಾರೆ. ಗಾಯನಕ್ಕೆ  ಪ್ರಥ್ವಿ ಗೌಡ, ಪಾರ್ಥ ಚಿರಂತನ್, ವಿನಯ್ ಶಿವಮೊಗ್ಗ ದನಿ ನೀಡಿದ್ದಾರೆ. ದೀಪಕ್ ಜಯಶೀಲನ್ ಸಂಗೀತ ನೀಡಿದ್ದಾರೆ. ಧ್ವನಿ ಗ್ರಹಣ, ಸಂಸ್ಕರಣ ವಿಠ್ಠಲ್ ರಂಗಧೋಳ್ ಅವರದ್ದು. ಛಾಯಾಗ್ರಹಣ ಮತ್ತು ಸಂಕಲನ ಅಕ್ಷಯ್ ಶಿರಸಂಗಿ ಅವರದ್ದು ಆದರೆ ಸಾಹಿತ್ಯ ಮತ್ತು ಪರಿಕಲ್ಪನೆ ನಿರ್ದೇಶನ ವಿನಯ್ ಅವರದ್ದು.  ಹುಡುಗರ ಒಂದು ಹೊಸ ಸಾಹಸಕ್ಕೆ ನಿಮ್ಮೆಲ್ಲರದ್ದು  ಒಂದು ಮೆಚ್ಚುಗೆ ಇರಲಿ. 

ಯುವಾ ಬ್ರಿಗೇಡ್ ಶಿವಮೊಗ್ಗದಲ್ಲಿ ನಡೆಸಿದ್ದ ಎದೆ ಭಾಷೆ ಕಾರ್ಯಕ್ರಮದಿಂದ ಪ್ರೇರಣೆ ಪಡೆದುಕೊಂಡು ಈ ಅದ್ಭುತ ಗೀತೆ ಮೂಡಿ ಬಂದಿದೆ

 

 

Latest Videos
Follow Us:
Download App:
  • android
  • ios