Asianet Suvarna News Asianet Suvarna News

BBK 10: ಬಿಗ್‌ಬಾಸ್‌ ಮನೆಯಿಂದ ಭಾಗ್ಯಶ್ರೀ ಔಟ್..!

ಈ ವಾರ ಡಬಲ್‌ ಎಲಿಮಿನೇಷನ್‌ನೊಂದಿಗೆ ಕಿಚ್ಚ ವೀಕೆಂಡ್ ಎಪಿಸೋಡಿಗೆ ಬಂದಿದ್ದರು. ಅದರ ಪ್ರಕಾರ ಶನಿವಾರದ ಪಂಚಾಯ್ತಿಯಲ್ಲಿ ಇಶಾನಿ ಅವರು ಎಲಿಮಿನೇಟ್ ಆಗಿದ್ದರು. ಇಂದು ಭಾಗ್ಯಶ್ರೀ ಮನೆಯಿಂದ ಹೊರಗೆ ಹೋಗುತ್ತಿರುವ ವಿಷಯವನ್ನು ಸುದೀಪ್ ಪ್ರಕಟಪಡಿಸಿದರು. 

Bhagyashree Out From Kannada Bigboss House grg
Author
First Published Nov 19, 2023, 11:10 PM IST

ಬಿಗ್‌ಬಾಸ್‌ ಸೀಸನ್‌ 10ನಲ್ಲಿ ಭಾಗ್ಯಶ್ರೀ ಅವರ ಪಯಣ ಕೊನೆಗೊಂಡಿದೆ. ಸುದೀಪ್ ಜೊತೆಗಿನ ಸೂಪರ್ ಸಂಡೆಯ ಎಪಿಸೋಡ್‌ನಲ್ಲಿ ಕಿಚ್ಚ, ಭಾಗ್ಯಶ್ರೀ ಬಿಗ್‌ಬಾಸ್‌ ಮನೆಯಿಂದ ಹೊರಬೀಳುತ್ತಿರುವ ವಿಷಯವನ್ನು ಘೋಷಿಸಿದರು.

ತಮ್ಮ ಹೆಸರಿನಲ್ಲಿಯೇ ಭಾಗ್ಯವನ್ನು ಇರಿಸಿಕೊಂಡಿರುವ ಭಾಗ್ಯಶ್ರೀ ಅವರಿಗೆ ಬಿಗ್‌ಬಾಸ್‌ ಮನೆಯೊಳಗೂ ಅನೇಕ ಸಲ ಭಾಗ್ಯವೇ ಕೈ ಹಿಡಿದಿತ್ತು. ಮಾತು ಮಾತಿಗೂ ಕಣ್ಣೀರು ಸುರಿಸುವ ಅವರ ಸ್ವಭಾವದಿಂದ ಅಳುಮುಂಜಿಯಾಗಿ ಬಿಂಬಿತವಾಗಿದ್ದರೂ, ಅವರು ಇಷ್ಟು ವಾರಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಹಾಗೆ ನೋಡಿದರೆ ಎರಡು ವಾರಗಳ ಹಿಂದೆಯೇ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಬೇಕಾಗಿತ್ತು. ಸುದೀಪ್‌ ಅವರು, ಭಾಗ್ಯಶ್ರೀ ಎಲಿಮಿನೇಟ್ ಆಗಿರುವ ಸಂಗತಿಯನ್ನು ಘೋಷಿಸಿದ್ದರು ಕೂಡ. ಆದರೆ ಬಿಗ್‌ಬಾಸ್ ಮನೆಯ ಬಾಗಿಲು ತೆರೆದಿರಲಿಲ್ಲ. ಆ ವಾರ ಹಬ್ಬದ ಕಾರಣಕ್ಕಾಗಿ ಯಾರನ್ನೂ ಎಲಿಮಿನೇಟ್ ಮಾಡದೇ ಉಳಿಸಿಕೊಂಡಿದ್ದರು ಬಿಗ್‌ಬಾಸ್. ಅದರ ಮುಂದಿನ ವಾರ ಪ್ರತಾಪ್‌ ಅವರು ಭಾಗ್ಯಶ್ರೀಯನ್ನು ನಾಮಿನೇಷನ್‌ ಪಟ್ಟಿಯಿಂದಲೇ ಪಾರುಮಾಡಿದ್ದರು. ಅದಾದ ಮೇಲೆ, ವರ್ತೂರು ಸಂತೋಷ್‌ ಅವರ ಕಾರಣದಿಂದ ಇನ್ನೊಂದು ವಾರ ಎಲಿಮಿನೇಷನ್‌ ನಡೆದಿರಲಿಲ್ಲ. 

ರಾತ್ರಿ ಅಮ್ಮ ನೆನಪಾಗ್ತಾಳೆ!: ಬಿಗ್‌ಬಾಸ್ ಕಂಟೆಸ್ಟೆಂಟ್ ಭಾಗ್ಯಶ್ರೀ ಮಗನ ಮಾತು ವೈರಲ್

ಈ ವಾರ ಡಬಲ್‌ ಎಲಿಮಿನೇಷನ್‌ನೊಂದಿಗೆ ಕಿಚ್ಚ ವೀಕೆಂಡ್ ಎಪಿಸೋಡಿಗೆ ಬಂದಿದ್ದರು. ಅದರ ಪ್ರಕಾರ ಶನಿವಾರದ ಪಂಚಾಯ್ತಿಯಲ್ಲಿ ಇಶಾನಿ ಅವರು ಎಲಿಮಿನೇಟ್ ಆಗಿದ್ದರು. ಇಂದು ಭಾಗ್ಯಶ್ರೀ ಮನೆಯಿಂದ ಹೊರಗೆ ಹೋಗುತ್ತಿರುವ ವಿಷಯವನ್ನು ಸುದೀಪ್ ಪ್ರಕಟಪಡಿಸಿದರು. 

ಮುಂದಿನ ವಾರ ಇಶಾನಿ ಮತ್ತು ಭಾಗ್ಯಶ್ರೀ ಅನುಪಸ್ಥಿತಿಯಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳು ಮನೆಯಲ್ಲಿ ಮುಂದುವರಿಯಲಿದ್ದಾರೆ. ಮನೆಯ ಸದಸ್ಯರ ಪೈಕಿ ಇಬ್ಬರು ಕಡಿಮೆಯಾಗಿರುವುದು ಸ್ಪರ್ಧೆಯನ್ನು ಇನ್ನಷ್ಟು ಚುರುಕುಗೊಳಿಸಿದೆ. ಇದರ ಪರಿಣಾಮ ಏನಾಗಲಿದೆ ಎಂಬುದನ್ನು JioCinemaದಲ್ಲಿ ಪ್ರಸಾರವಾಗುವ ಬಿಗ್‌ಬಾಸ್ ಕನ್ನಡ ಉಚಿತ ನೇರಪ್ರಸಾರವನ್ನು ವೀಕ್ಷಿಸಿ ತಿಳಿದುಕೊಳ್ಳಬಹುದು.

ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

Follow Us:
Download App:
  • android
  • ios