ಹೆಂಡತಿಯ ಕುತ್ತಿಗೆ ಹಿಸುಕಿ ಸಾಯಿಸಬೇಕೆಂದು ಯಾವ ಗಂಡಂಗೆ ಅನಿಸಲ್ಲ ಹೇಳಿ: 'ಭಾಗ್ಯಲಕ್ಷ್ಮಿ' ನಟ ಸುದರ್ಶನ್
ಕಲರ್ಸ್ ಕನ್ನಡ ವಾಹಿನಿ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಧಾರಾವಾಹಿ ಮೂಲಕ ಮನರಂಜನೆ ನೀಡಿದ್ರೆ, ವೀಕೆಂಡ್‍ನಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ಸೆಳೆಯುತ್ತಿದೆ.

ಕಲರ್ಸ್ ಕನ್ನಡ ವಾಹಿನಿ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಧಾರಾವಾಹಿ ಮೂಲಕ ಮನರಂಜನೆ ನೀಡಿದ್ರೆ, ವೀಕೆಂಡ್‍ನಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ಸೆಳೆಯುತ್ತಿದೆ. ಆ ಪೈಕಿ ‘ಫ್ಯಾಮಿಲಿ ಗ್ಯಾಂಗ್‍ಸ್ಟಾರ್ಸ್’ ಕೂಡ ಒಂದು. ಇಷ್ಟು ವಾರಗಳ ಕಾಲ ಸಖತ್ ಮನರಂಜನೆ ನೀಡಿದ ಈ ಶೋ ಈಗ ಫಿನಾಲೆ ಹಂತ ತಲುಪಿದೆ. ಸೃಜನ್ ಲೋಕೇಶ್ ಅವರ ನಿರೂಪಣೆಯಲ್ಲಿ ಈ ಶೋ ಪ್ರಸಾರ ಕಂಡಿದೆ. ಫಿನಾಲೆಯಲ್ಲಿ ಎಂಟರ್‌ಟೈನ್‌ಮೆಂಟ್ ಡಬಲ್ ಆಗಿದೆ. ಇದರ ಪ್ರೋಮೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟ ಸುದರ್ಶನ್ ರಂಗಪ್ರಸಾದ್ ಅವರಿಗೆ ರಂಗಭೂಮಿ ಹಿನ್ನೆಲೆ ಇದೆ. ಅವರು ಸ್ಟ್ಯಾಂಡಪ್ ಕಾಮಿಡಿಯನ್ ಕೂಡ ಹೌದು. ಅವರು ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ತಾಂಡವ್ ಹೆಸರಿನ ಭಾಗ್ಯಳ ಪತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಪತ್ನಿಯನ್ನು ಕಂಡರೆ ತಾಂಡವ್ಗೆ ಕಿಂಚಿತ್ ಇಷ್ಟವಿಲ್ಲ. 'ಫ್ಯಾಮಿಲಿ ಗ್ಯಾಂಗ್‍ಸ್ಟಾರ್ಸ್' ಸ್ಪರ್ಧಿ ಆಗಿರುವ ಅವರಿಗೆ ನಿಜ ಜೀವನದಲ್ಲಿ ಪತ್ನಿಯನ್ನು ಕಂಡರೆ ಯಾವ ರೀತಿಯ ಅಭಿಪ್ರಾಯ ಇದೆ ಎನ್ನುವ ಬಗ್ಗೆ ಸೃಜನ್ ಲೋಕೆಶ್ ವೇದಿಕೆಯಲ್ಲಿ ಸುದರ್ಶನ್ ಅವರನ್ನು ಪ್ರಶ್ನೆ ಮಾಡಿದ್ದಾರೆ.
‘ತಾಂಡವ್ ಆಗಿ ಇಷ್ಟೊಂದು ಬೋಧನೆ ಮಾಡುತ್ತೀಯಲ್ಲ. ಮನೆಯಲ್ಲಿ ಹೆಂಡತಿ ಉಗಿಯೋದಿಲ್ಲವ’ ಎಂದು ಸೃಜನ್ ಕೇಳಿದಾಗ ‘ಅಯ್ಯೋ ಉಗೀತಾಳೆ’ ಎಂದು ಸುದರ್ಶನ್ ಹೇಳುತ್ತಾರೆ. ಆ ಸಮಯಕ್ಕೆ ಸರಿಯಾಗಿ ಅವರ ಪತ್ನಿ ಸಂಗೀತಾ ಭಟ್ ಹಿಂಬದಿಗೆ ಬಂದು ನಿಲ್ಲತ್ತಾರೆ. ಈ ವೇಳೆ ಸುದರ್ಶನ್ ಕಾಲು ಎಳೆಯೋಕೆ ಸೃಜನ್ ಪ್ರಯತ್ನಿಸಿತ್ತಾರೆ. 'ಹೆಂಡತಿಯ ಕುತ್ತಿಗೆ ಹಿಸುಕಿ ಸಾಯಿಸಬೇಕು ಎಂದು ಯಾವಾಗಲೂ ಅನಿಸಿಲ್ಲವೇ' ಎಂದು ಕೇಳಿದಾಗ ಸುದರ್ಶನ್ ‘ಯಾವ ಗಂಡಿಗೆ ತಾನೇ ಅನಿಸಲ್ಲ ಹೇಳಿ’ ಎಂದು ಹೇಳುತ್ತಾರೆ.
ಗುರುತೇ ಸಿಗದಷ್ಟು ಬದಲಾದ ಹುಚ್ಚ ರೇಖಾ: ಏನಾಯ್ತು ಜಿಂಕೆ ಮರಿ ನಟಿಗೆ? ಅಭಿಮಾನಿಗಳಲ್ಲಿ ಆತಂಕ!
ಈ ಮಾತನ್ನು ಹೇಳುವ ಸಮಯದಲ್ಲಿ ಸುದರ್ಶನ್ ಪತ್ನಿ ಸಂಗೀತಾ ಹಿಂದೆಯೇ ಇರುತ್ತಾರೆ. ‘ಹೆಂಡತಿಗೆ ಈ ಡೈಲಾಗ್ ಹೇಳಿ’ ಎಂದು ಸೃಜನ್, ಸುದರ್ಶನ್ ಅವರನ್ನು ಹಿಂದಕ್ಕೆ ತಿರುಗಿಸಿದರು. ಹಿಂದೆ ಪತ್ನಿಯನ್ನು ನೋಡಿ ಒಮ್ಮೆ ಸುದರ್ಶನ್ ಗಾಬರಿಯಾಗುತ್ತಾರೆ. ಜೊತೆಗೆ ‘ಭಾಗ್ಯಳ ಬಳಿ ಹೇಗೆ ಮಾತಾಡ್ತೀಯೋ ಹಾಗೆಯೇ ಸಂಗೀತಾ ಬಳಿಯೂ ಮಾತನಾಡು’ ಎಂದು ಸೃಜನ್ ಸವಾಲು ಹಾಕಿದಾಗ ಸುದರ್ಶನ್ ಏನೂ ಮಾತನಾಡದೇ ಸುಮ್ಮನಿರುತ್ತಾರೆ. ಇನ್ನು ‘ಭಾಗ್ಯಲಕ್ಷ್ಮಿ’ ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಸುಷ್ಮಾ ರಾವ್, ಪದ್ಮಜಾ ರಾವ್, ಸುದರ್ಶನ್ ಮೊದಲಾದವರು ಈ ಧಾರಾವಾಹಿಯ ತಾರಾಬಳಗದಲ್ಲಿದ್ದಾರೆ.