ಕೈಯಲ್ಲಿ ಗರಗಸ ಹಿಡಿದು ಶ್ರೇಷ್ಠಾಳನ್ನು ಕೊಲ್ಲಲು ಹೊರಟ ಭಾಗ್ಯ: ವಿಡಿಯೋ ನೋಡಿ ಅಭಿಮಾನಿಗಳ ಸಪೋರ್ಟ್!
ಕೈಯಲ್ಲಿ ಗರಗಸ ಹಿಡಿದು ಎಲ್ಲೆಡೆ ಓಡಾಡುತ್ತಿದ್ದಾಳೆ ಭಾಗ್ಯ. ಶ್ರೇಷ್ಠಾ ಎಲ್ಲಿ ಎಂದು ಕೇಳುತ್ತಿದ್ದಾಳೆ. ಭಾಗ್ಯಳಿಗೆ ಸತ್ಯ ಗೊತ್ತಾಗಿ ಬಿಡ್ತಾ? ಇದರ ಅಸಲಿಯತ್ತೇನು?
ಭಾಗ್ಯಳಿಗೆ ಇನ್ನೂ ಸತ್ಯ ತಿಳಿದಿಲ್ಲ. ಸತ್ಯ ತಿಳಿದುಕೊಳ್ಳಲೇಬೇಕು ಎಂದು ಪಣ ತೊಟ್ಟಿದ್ದಾಳೆ. ಮನೆಯಲ್ಲಿ ಹುಚ್ಚಿಯಂತೆ ಆಡುತ್ತಿದ್ದಾಳೆ. ಹೀಗ್ಯಾಕೆ ಮಾಡುತ್ತಿದ್ದಿಯಾ ಎಂದು ತಾಂಡವ್ ಕೇಳಿದಾಗ ನನಗೆ ಸತ್ಯ ತಿಳಿಯಬೇಕಿದೆ ಎಂದಿದ್ದಾರೆ. ಮದುವೆಯಾಗಲು ಹೊರಟಿರೋ ತಾಂಡವ್ಗೂ ವಿಚಿತ್ರ ಎಂದರೆ ಸತ್ಯ ಹೇಳಲು ಭಯ! ಇದೊಳ್ಳೆ ಹಾಸ್ಯಾಸ್ಪದವಾಗಿದೆ ಎನ್ನುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು! ಅತ್ತೆ ಕುಸುಮಾ ಮತ್ತು ಭಾಗ್ಯ ಇನ್ನೂ ಸತ್ಯ ಮುಚ್ಚಿಡಲು ನೋಡ್ತಿದ್ದಾರೆ. ಮದುವೆ ಮನೆಗೆ ಭಾಗ್ಯ ಹೋದರೂ ಡೌಟೇ ಬರಲಿಲ್ಲ! ಅಲ್ಲಿ ದ್ವಾರದಲ್ಲಿಯೇ ತಾಂಡವ್ ಫೋಟೋ ಇದ್ದದ್ದೂ ನೋಡಲಿಲ್ಲ! ಸಾಲದು ಎಂಬುದಕ್ಕೆ ಗಂಡಿನ ಕಡೆಯವರು ಮದುವೆ ನಿಲ್ಲಿಸಿದ್ದು ಹಾಗೂ ಕುಸುಮಾ ಮತ್ತು ಪೂಜಾ ಬಂದು ಮದುವೆ ನಿಲ್ಲಿಸಿದ್ದು ಎನ್ನುವ ಮಾತಿಗೆ ತಾಳೆ ಹಾಕಿರುವ ಭಾಗ್ಯಳಿಗೆ ತಾಂಡವ್ ಮೇಲೆ ಸಂದೇಹ ಬಂದಿದೆ ಅಷ್ಟೇ. ಆದರೆ ಇದುವರೆಗೂ ಅದು ಗಂಡನೇ ಎನ್ನುವುದು ಮಾತ್ರ ಗೊತ್ತಾಗಲಿಲ್ಲ! ಇದಕ್ಕೆ ಏನೆನ್ನಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಮದುವೆ ಗಂಡು ಯಾರು ಎಂದು ಅತ್ತೆ ಮತ್ತು ತಂಗಿಯನ್ನು ಪೂಜಾ ಪ್ರಶ್ನಿಸುತ್ತಿದ್ದಾಳೆ. ಅತ್ತ ಅತ್ತೆ ಕೂಡ ಭಾಗ್ಯಳಿಗೆ ವಿಷಯ ಗೊತ್ತಾಗಬಾರದು ಎಂದು ಏನೇನೋ ಕಸರತ್ತು ಮಾಡುತ್ತಿದ್ದಾಳೆ.
ಇದರ ನಡುವೆಯೇ ಭಾಗ್ಯ ಕೈಯಲ್ಲಿ ಗರಗಸ ಹಿಡಿದು ಶ್ರೇಷ್ಠಾಳನ್ನು ಕೊಲ್ಲಲು ಹೊರಟಿದ್ದಾಳೆ. ಸಿಕ್ಕ ಸಿಕ್ಕವರ ಮೇಲೆ ಸಿಟ್ಟು ತೋರಿಸುತ್ತಿದ್ದಾಳೆ. ಶ್ರೇಷ್ಠಾ ಎಲ್ಲಿ, ನನ್ನ ಗಂಡನನ್ನು ಮದ್ವೆಯಾಗ್ತಿಯಾ ಎಂದು ಜೋರು ಮಾಡುತ್ತಿದ್ದಾಳೆ. ಹಾಗಿದ್ದರೆ ಭಾಗ್ಯಳಿಗೆ ವಿಷಯ ಗೊತ್ತಾಗಿ ಹೋಯ್ತಾ? ಏನು ಮಾಡಿದರೂ ಭಾಗ್ಯಳಿಂದ ಸತ್ಯ ಮುಚ್ಚಿಡಬೇಕು ಎಂದು ಕುಸುಮಾ ಮತ್ತು ಪೂಜಾ ಮಾಡ್ತಿರೋ ಪ್ಲ್ಯಾನ್ ಎಲ್ಲಾ ಫ್ಲಾಪ್ ಆಗೋಯ್ತಾ ಎಂದು ಕೇಳುವುದಾದರೆ, ಸದ್ಯ ಸೀರಿಯಲ್ನಲ್ಲಿ ಈ ವಿಷಯ ಭಾಗ್ಯಳಿಗೆ ತಿಳಿದಿಲ್ಲ. ಬದಲಿಗೆ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ತಮ್ಮ ಎಂದಿನ ಹಾಸ್ಯದ ರೂಪದಲ್ಲಿ ಗರಗಸ ಹಿಡಿದು ಓಡಾಡಿದ್ದಾರೆ. ಇದರ ವಿಡಿಯೋ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ದಯವಿಟ್ಟು ಶ್ರೇಷ್ಠಾಳನ್ನು ಕೊಚ್ಚಿ ಕೊಲೆ ಮಾಡಿ, ನಾವು ಸಪೋರ್ಟ್ಗೆ ಇದ್ದೀವಿ ಅಂತಿದ್ದಾರೆ ಫ್ಯಾನ್ಸ್. ಇನ್ನು ಕೆಲವರು ನಿನಗೆ ಇಂಥ ಗಂಡ ಬೇಕಾ? ಬಿಟ್ಟು ಬಿಡು ಎಂದೂ ಉಪದೇಶ ಮಾಡುತ್ತಿದ್ದಾರೆ.
ಶೂಟಿಂಗ್ ವೇಳೆ ಭಾಗ್ಯಳನ್ನು ಒದೆಯಲು ಹೋದ ಶ್ರೇಷ್ಠಾ ಪಾತ್ರಧಾರಿಯ ಹಿಂಬದಿ ಡ್ಯಾಮೇಜ್!
ನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಅವಳಿಗೆ ಇನ್ನೂ ಸತ್ಯ ತಿಳಿದಿಲ್ಲ. ಇದರಿಂದಾಗಿ ಸೀರಿಯಲ್ ಪ್ರೇಮಿಗಳಿಗೆ ಅಹಸ್ಯ ಹುಟ್ಟಲು ಶುರುವಾದಂತಿದೆ. ಭಾಗ್ಯಳಿಗೆ ಅಲ್ಲಿರೋ ಮದುವೆ ಗಂಡು ತನ್ನ ಗಂಡನೇ ಎಂದು ತಿಳಿಯದಷ್ಟು ಪೆದ್ದಿನಾ? ಇದು ಮುಗ್ಧತೆಯ ಪರಮಾವಧಿಯೋ, ಮೂರ್ಖತನದ ಪರಮಾವಧಿಯೋ ಒಂದೂ ಗೊತ್ತಾಗ್ತಿಲ್ಲ ಎನ್ನುವುದು ನೆಟ್ಟಿಗರ ಮಾತು. ಇದೀಗ ಭಾಗ್ಯಳಿಗೆ ಗಂಡನ ಮೇಲೆ ಡೌಟ್ ಬಂದಿದೆ. ಅಷ್ಟು ಮಾತ್ರಕ್ಕೆ ಅವಳಿಗೆ ತಲೆ ಇದೆ ಎನ್ನುವುದನ್ನು ತೋರಿಸಿದ್ದಾರೆ. ಅದೇ ಇನ್ನೊಂದೆಡೆ ಸೊಸೆಯನ್ನು ಒಂದು ತಿಂಗಳಿನಲ್ಲಿ ಬದಲಿಸ್ತೇನೆ ಎಂದಿದ್ದಾಳೆ ಕುಸುಮಾ. ಅವಳು ಸಕ್ಸಸ್ ಆಗ್ತಾಳಾ ನೋಡಬೇಕಿದೆ. ಗಂಡನ ಸಲುವಾಗಿ ಹೆಣ್ಣಾದವರ ತನ್ನ ಅಸ್ತಿತ್ವವನ್ನೇ ಬದಲಿಸಬೇಕಾ ಎನ್ನುವ ಪ್ರಶ್ನೆಯೂ ಕಾಡುತ್ತಿದೆ.
ಇನ್ನು ಭಾಗ್ಯ ಪಾತ್ರಧಾರಿ ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.
ಅನುಬಂಧ ವೇದಿಕೆ ಮೇಲೆ ಹತ್ತಾರು ಭಾಗ್ಯಲಕ್ಷ್ಮಿಯರು- 25 ವರ್ಷಗಳ ಜರ್ನಿ ನೆನೆದು ನಟಿ ಸುಷ್ಮಾ ಕಣ್ಣೀರು