ರೆಡ್ ಹ್ಯಾಂಡ್ ಆಗಿ ಗಂಡನನ್ನು ಹಿಡಿದು ಬಾಯಿಗೆ ಬಂದಂತೆ ಬೈಯ್ದಳು ಭಾಗ್ಯಲಕ್ಷ್ಮೀ; ಮುಂದೇನು ತಾಂಡವ್ ಕಥೆ?
ಹೌದು, ಭಾಗ್ಯಾ ಬದಲಾಗಿದ್ದಾಳೆ. ಗಂಡ ತಾಂಡವ್ ಹೇಳುತ್ತಿರುವ ಸುಳ್ಳು, ಮಾಡಿರುವ ಮೋಸ ಯಾವುದೂ ಗೊತ್ತಿಲ್ಲದ ಭಾಗ್ಯಾ ಮಹಾನ್ ಮುಗ್ಧೆಯಂತೆ ಗಂಡನನ್ನೇ ನಂಬಿದ ಹೆಂಡತಿ ಎಂಬಂತೆ ಇದ್ದಳು. ಆದರೆ, ಗಂಡ ತಾಂಡವ್ ತನ್ನ ಹೆಂಡತಿ ಲೋಕಜ್ಞಾನ ಇಲ್ಲದವಳು ಎಂದು ಭಾವಿಸಿ ತನ್ನ ಇಷ್ಟದಂತೆ ಶ್ರೇಷ್ಠಾಳನ್ನು ತನ್ನ ಲವರ್ ಮಾಡಿಕೊಂಡ.
ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಭಾಗ್ಯಲಕ್ಷ್ಮೀ' ಸೀರಿಯಲ್ ಭಾರೀ ಕುತೂಹಲ ಸೃಷ್ಟಿಸುತ್ತಿದೆ. ಇಂದು ಬಿಡುಗಡೆಯಾಗಿರುವ ಪ್ರೊಮೋ, ಭಾಗ್ಯಾಳ ಹೊಸ ವರಸೆಯನ್ನು ತೋರಿಸುತ್ತಿದೆ. ಸೀರಿಯಲ್‌ನಲ್ಲಿ ಇಷ್ಟೂ ದಿನ ಮುಗ್ಧೆಯಂತಿದ್ದ ಭಾಗ್ಯಾ ಇದೀಗ ಫುಲ್ ರೆಬೆಲ್ ಆಗಿದ್ದಾಳೆ. ತಾಂಡವ್ ಹೆಂಡತಿ ಎಂದರೆ ಮುಗ್ಧೆ, ತುಂಬಾ ಒಳ್ಳೆಯವಳು ಎಂಬೆಲ್ಲ ಬಿರುದು ಹೊಂದಿದ್ದ ಭಾಗ್ಯಾ, ಗಂಡನ ಮೋಸದಾಟದಿಂದ ಫುಲ್ ಚೇಂಜ್ ಆಗಿದ್ದಾಳೆ. ಭಾಗ್ಯಾಳ ಈಗಿನ ಅವತಾರವನ್ನು ನೋಡಿ ಸ್ವತಃ ತಾಂಡವ್ ಕೂಡ ಕಂಗಾಲ್ ಆಗುವಂತಾಗಿದೆ.
ಹೌದು, ಭಾಗ್ಯಾ ಬದಲಾಗಿದ್ದಾಳೆ. ಗಂಡ ತಾಂಡವ್ ಹೇಳುತ್ತಿರುವ ಸುಳ್ಳು, ಮಾಡಿರುವ ಮೋಸ ಯಾವುದೂ ಗೊತ್ತಿಲ್ಲದ ಭಾಗ್ಯಾ ಮಹಾನ್ ಮುಗ್ಧೆಯಂತೆ ಗಂಡನನ್ನೇ ನಂಬಿದ ಹೆಂಡತಿ ಎಂಬಂತೆ ಇದ್ದಳು. ಆದರೆ, ಗಂಡ ತಾಂಡವ್ ತನ್ನ ಹೆಂಡತಿ ಲೋಕಜ್ಞಾನ ಇಲ್ಲದವಳು ಎಂದು ಭಾವಿಸಿ ತನ್ನ ಇಷ್ಟದಂತೆ ಶ್ರೇಷ್ಠಾಳನ್ನು ತನ್ನ ಲವರ್ ಮಾಡಿಕೊಂಡ ಅವಳ ಜತೆ ಸಂಬಂಧ ಇಟ್ಟುಕೊಂಡು ಮಜಾ ಉಡಾಯಿಸುತ್ತಿದ್ದ. ಆದರೆ, ಇತ್ತೀಚೆಗೆ ಭಾಗ್ಯಲಕ್ಷ್ಮೀ ಮನೆಗೆ ಬಂದು ಹೇಗೋಗೋ ಆಡಿ ಕೊನೆಗೆ ಕುಸಮಾಳ ವಾರ್ನಿಂಗ್ ಕಾರಣಕ್ಕೆ ಶ್ರೇಷ್ಠಾ ತಾಂಡವ್ ಮನೆ ಬಿಟ್ಟು ತೊಲಗಿದ್ದಳು.
ಬಿಗ್ ಬಾಸ್ ಮನೆಯಿಂದ ಹೊರಹೋಗ್ಬಿಟ್ರಾ ಸಂಗೀತಾ ಶೃಂಗೇರಿ; ಕಾರ್ತಿಕ್ ಮಾತಿಗೆ ಡೋಂಟ್ ಕೇರ್ ಅಂದಿದ್ದು ಯಾಕೆ?
ಆದರೆ, ಶ್ರೇಷ್ಠಾ ಫ್ರೆಂಡ್‌ಶಿಪ್ ಕಾರಣಕ್ಕೆ ತಾಂಡವ್ ಮನೆಯವರಿಗೆ, ತಾಯಿ ಕುಸುಮಾಗೆ, ಹೆಂಡತಿ ಭಾಗ್ಯಾಗೆ ಎಲ್ಲರಿಗೂ ಸುಳ್ಳು ಹೇಳಿ ಮೋಸದಾಟ ಆಡಿದ್ದ. ಆದರೆ, ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗಿತ್ತು. ಅದು ಭಾಗ್ಯಾಳಿಗೆ ಸಿಕ್ಕಿದೆ, ಕ್ಯಾಮರಾದಲ್ಲಿ ನೋಡಿ ಎಲ್ಲವನ್ನೂ ತಿಳಿದುಕೊಂಡ ಭಾಗ್ಯಾಗೆ ಈಗ ತನ್ನ ಗಂಡ ಸುಳ್ಳುಗಾರ, ಮಹಾ ಕಪಟಿ, ವಂಚಕ ಎಂಬುದು ಗೊತ್ತಾಗುತ್ತಿದ್ದಂತೆ ಇಷ್ಟು ದಿನ ತಾನು ಆತನನ್ನು ನಂಬಿದ್ದಕ್ಕೆ ಮನದಲ್ಲಿ ನೋವು ಉಕ್ಕಿ ಬಂದಿದೆ. ಅದು ಕೋಪಕ್ಕೆ ಟರ್ನ್ ಆಗಿ ಭಾಗ್ಯಾ ಬದಲಾಗಿದ್ದಾಳೆ. ಗಂಡನ ಎದುರು ನಿಂತು ಜೋರಾಗಿ ಮಾತನಾಡುವಷ್ಟು ಗಟ್ಟಿತನ ತಂದುಕೊಂಡಿದ್ದಾಳೆ.
ರಚಿತಾ ರಾಮ್ 'ಮದುವೆ ವಾರ್ಷಿಕೋತ್ಸವ'ಕ್ಕೆ ಸಿಕ್ತು ರೋಲ್ಸ್ ರಾಯ್ ಕಾರ್ ಗಿಫ್ಟ್, ಹೊರಬಿತ್ತು ಈಗ ಮದುವೆ ಸೀಕ್ರೆಟ್!
ಭಾಗ್ಯಾ ತನ್ನ ಗಂಡನ ಎದುರು ನಿಂತು ಜೋರಾಗಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿದ್ದಂತೆ, ತಾಂಡವ್ ಶಾಕ್ ಆಗಿದ್ದಾನೆ. ಮೊದಮೊದಲು ಹೆಂಡತಿ ಭಾಗ್ಯಾ ಎದುದು ಗಟ್ಟಿಯಾಗಿಯೇ ಮಾತನಾಡಿದ ತಾಂಡವ್‌ಗೆ ಆಮೇಲೆ ಅದು ಸಾಧ್ಯವಾಗಲಿಲ್ಲ. ಕಾರಣ, ಭಾಗ್ಯಾಗೆ ಎಲ್ಲವೂ ತಿಳಿದಿದೆ, ತಾನಿನ್ನು ಅವಳೆದುರು ಮೊದಲಿನಂತೆ ಸುಳ್ಳು ಹೇಳಲಾರೆ ಎಂಬುದು ತಾಂಡವ್‌ಗೆ ಈಗ ಮನದಟ್ಟಾಗಿದೆ. ಹೀಗಾಗಿ ಭಾಗ್ಯಾ ಎದುರು ಶುರುವಿನಲ್ಲಿ ಕೂಗಾಡಿದರೂ ಸೈಲೆಂಟ್ ಆಗುವ ಹಂತಕ್ಕೆ ಬಂದಿದ್ದಾನೆ. ಭಾಗ್ಯಾ ಅವನೆದುರು ಕ್ಯಾಮರಾ ಹಿಡಿದ ಮೇಲಂತೂ ತಾಂಡವ್ ಅಕ್ಷರಶಃ ಗರ ಬಡಿದಂತಾಗಿದೆ. ಭಾಗ್ಯಲಕ್ಷ್ಮೀ ಕಥೆಯಲ್ಲಿ ಇನ್ನೇನು ಆಗಿದೆ ಎಂದು ನೋಡಲು ಇಂದಿನ ಸಂಚಿಕೆ ನೋಡಬೇಕು. ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್ ಸೋಮವಾರದಿಂದ ಶನಿವಾರ ಸಂಜೆ 7.00ಕ್ಕೆ ಪ್ರಸಾರವಾಗುತ್ತಿದೆ.