'ಮಜಾಭಾರತ' ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರ ಕಾಮಿಡಿ  ಕಿಂಗ್ ಆಗಿದ್ದ ಮಂಜು ಪಾವಗಡ ಅಲಿಯಾಸ್ ಲ್ಯಾಗ್ ಮಂಜು ಬಿಗ್ ಬಾಸ್‌ ಸೀಸನ್ 8ರಲ್ಲಿ ಸ್ಪರ್ಧಿಸುವ ಮೂಲಕ ಮನೆಯಲ್ಲಿದ್ದ ಸ್ಪರ್ಧಿಗಳ ಪ್ರೀತಿ ಜೊತೆಗೆ ಕರ್ನಾಟಕ ಜನತೆಯ ಪ್ರೀತಿ ಸಂಪಾದಿಸಿದ್ದಾರೆ.

ಇನ್ನೆರಡು ವರ್ಷಗಳಲ್ಲಿ ಮಂಜು ಪಾವಗಡ ಸಾಧನೆ ಲಿಸ್ಟ್‌ನಲ್ಲಿ ಏನೆಲ್ಲಾ ಇವೆ ಗೊತ್ತಾ? 

ಲಾಕ್‌ಡೌನ್‌ ಕಾರಣದಿಂದ ರಿಯಾಲಿಟಿ ಶೋ ಸ್ಥಗಿತಗೊಂಡಿತ್ತು. 72 ದಿನಗಳ ಪ್ರಯಾಣ ಮುಗಿಸಿ ಹೊರ ಬಂದ ನಂತರ ಕೆಲವು ದಿನಗಳ ಕಾಲ ಮಂಜು ಬೇಸರದಲ್ಲಿದ್ದರು. ತಮ್ಮ ಆಪ್ತ ಗೆಳೆಯರನ್ನು ಕೊರೋನಾಗೆ ಕಳೆದುಕೊಂಡಿರುವುದನ್ನು ತಿಳಿಸಲು ಬೇಸರವಾಗುತತ್ದೆ. ಆದರೆ ವಾಹಿನಿ ತೆಗೆದುಕೊಂಡಿರುವ ಈ ನಿರ್ಧಾರವನ್ನು ಒಪ್ಪಿಕೊಳ್ಳುವುದು ಅನಿವಾರ್ಯವೆಂದಿದ್ದಾರೆ.

ಬಿಗ್ ಬಾಸ್‌ ಮನೆಯಲ್ಲಿ ಮಂಜು ಹೆಚ್ಚಾಗಿ ಸಮಯ ಕಳೆಯುತ್ತಿದ್ದದು, ದಿವ್ಯಾ ಸುರೇಶ್ ಜೊತೆ. ಏನೇ ವಿಚಾರವಿದ್ದರೂ ಇಬ್ಬರೂ ಮನ ಬಿಚ್ಚಿ ಹಂಚಿಕೊಳ್ಳುತ್ತಿದ್ದರು. ಅವರಿಬ್ಬರ ನಡುವೆ ಇದ್ದ ಸ್ನೇಹ ಹೊರಗಡೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ದಿವ್ಯಾಳಿಂದ ಮಂಜು ಟಾಸ್ಕ್‌ನಲ್ಲಿ ಸೋಲುತ್ತಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿ ಬಂದಿತ್ತು. 'ಶುಭಾ ಪೂಂಜಾ, ನಿಧಿ ಸುಬ್ಬಯ್ಯ ಮತ್ತು ರಾಜೀವ್‌ ತುಂಬಾನೇ ಕ್ಲೋಸ್ ಆಗಿದ್ದಾರೆ. ಶುಭಾ ಮಗು ಮನಸ್ಸಿನ ಹುಡುಗಿ. ರಾಜೀವ್‌ ನನಗೆ ಅಣ್ಣನಂತೆ. ದಿವ್ಯಾ ಸುರೇಶ್ ಒಳ್ಳೆ ಸ್ನೇಹಿತೆ. ಆದರೆ ಹೊರಗಡೆ ಜನರು ತಿಳಿದುಕೊಂಡಿರುವ ರೀತಿ ನೋಡಿ ಬೇಸರವಾಗಿದೆ. ಇಷ್ಟು ದಿನಗಳ ಕಾಲ ಬೇರೆಯವರನ್ನು ಟ್ರೋಲ್ ಮಾಡುತ್ತಿದ್ದರು. ಅವರ ಬಗ್ಗೆ ಮೀಮ್ಸ್ ನೋಡುತ್ತಿದ್ದೆ. ಈಗ ನಾನು ಅದಕ್ಕೆ ಗುರಿಯಾಗಿದ್ದೀನಿ. ಬೇಸರ ಆಗುತ್ತಿದೆ. ಸ್ನೇಹವನ್ನು ಮತ್ತೊಂದು ರೀತಿ ತಿರುವು ಹಾಕಿರುವುದನ್ನು ನೋಡಿ,' ಎಂದಿದ್ದಾರೆ.