ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದ ವಿನಯ್ ಗೌಡ!
ಬಿಗ್ ಬಾಸ್ ಮನೆಯಲ್ಲಿ ಯಾವಾಗಲು ಜಗಳಗಳು ಕಾಮನ್. ಡ್ರೋನ್ ಪ್ರತಾಪ್ ಹಾಗೂ ವಿನಯ್ ಗೌಡ ಮಧ್ಯೆ ಈ ವಾರ ಕಿರಿಕ್ ಆಗಿತ್ತು. ವಿನಯ್ ಗೌಡ ಗುಂಪಿನಲ್ಲಿ ಇದ್ದವರೇ ಎಲ್ಲರೂ ಎಲಿಮಿನೇಟ್ ಆಗಿದ್ದಾರೆ. ‘ವಿನಯ್ ಗೌಡ ಅವರು ಗೆಳೆಯರ ತಪ್ಪನ್ನು ತಿದ್ದಲಿಲ್ಲ’ ಎನ್ನುವ ಅಭಿಪ್ರಾಯವನ್ನು ಪ್ರತಾಪ್ ವ್ಯಕ್ತಪಡಿಸಿದರು.
ಬಿಗ್ ಬಾಸ್ ಮನೆಯಲ್ಲಿ ಯಾವಾಗಲು ಜಗಳಗಳು ಕಾಮನ್. ಡ್ರೋನ್ ಪ್ರತಾಪ್ ಹಾಗೂ ವಿನಯ್ ಗೌಡ ಮಧ್ಯೆ ಈ ವಾರ ಕಿರಿಕ್ ಆಗಿತ್ತು. ವಿನಯ್ ಗೌಡ ಗುಂಪಿನಲ್ಲಿ ಇದ್ದವರೇ ಎಲ್ಲರೂ ಎಲಿಮಿನೇಟ್ ಆಗಿದ್ದಾರೆ. ‘ವಿನಯ್ ಗೌಡ ಅವರು ಗೆಳೆಯರ ತಪ್ಪನ್ನು ತಿದ್ದಲಿಲ್ಲ’ ಎನ್ನುವ ಅಭಿಪ್ರಾಯವನ್ನು ಪ್ರತಾಪ್ ವ್ಯಕ್ತಪಡಿಸಿದರು. ಇದರಿಂದ ಸಿಟ್ಟಾದ ವಿನಯ್ ಅವರು ಪ್ರತಾಪ್ಗೆ ಬಾಯಿಗೆ ಬಂದಂತೆ ಬೈದಿದ್ದರು. ‘ತಿ* ಮುಚ್ಕೊಂಡು ಇರು. ನೀನು ಹೆದರಿಲ್ಲ ಅಂದ್ರೆ ** ಏನೂ ಹೋಗಲ್ಲ’ ಎಂಬಿತ್ಯಾದಿ ಶಬ್ದ ಬಳಕೆ ಮಾಡಿದ್ದರು. ಇದನ್ನು ಮನೆಯವರು ವಿರೋಧಿಸಿದ್ದರು.
ಈಗ ವಿನಯ್ಗೆ ತಪ್ಪಿನ ಅರಿವಾಗಿದೆ. ಡ್ರೋನ್ ಬಳಿ ಕ್ಷಮೆ ಕೇಳಿದ್ದಾರೆ. ‘ಫಿನಾಲೆಗೆ ಹೋಗೋಕೆ ಯಾರು ಅರ್ಹರು’ ಎನ್ನುವ ಆಯ್ಕೆಯನ್ನು ಮಾಡಬೇಕಿತ್ತು. ವಿನಯ್ ಗೌಡ ಅವರು ಕಾರ್ತಿಕ್ ಹೆಸರನ್ನು ತೆಗೆದುಕೊಂಡರು. ಆ ಬಳಿಕ ಅವರು ಎಲ್ಲರ ಬಳಿ ಕ್ಷಮೆ ಕೇಳಿದರು. ‘ನನಗೆ ಕೋಪ ಬಂದಾಗ ಕೂಗಾಡುತ್ತೇನೆ. ಇದರಿಂದ ಯಾರಿಗಾದರೂ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದರು ವಿನಯ್. ಆ ಬಳಿಕ ಪ್ರತಾಪ್ ಬಳಿ ತೆರಳಿ ಅವರಿಗೆ ಹಗ್ ಕೊಟ್ಟು, ‘ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಇರಲಿ. ನೀನು ಗೆದ್ದರೆ ನನಗೆ ಖುಷಿ ಆಗುತ್ತದೆ’ ಎಂದರು.
ವಿನಯ್ ಕ್ಷಮೆ ಕೇಳಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದರು. ವರ್ತೂರು ಸಂತೋಷ್ ಅವರು ಬಿಗ್ ಬಾಸ್ನಲ್ಲಿ ಉತ್ತಮ ಆಟ ಪ್ರದರ್ಶನ ನೀಡುತ್ತಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ‘ಟಿಕೆಟ್ ಟು ಫಿನಾಲೆ’ ಟಾಸ್ಕ್ ಆರಂಭ ಆಗಿದೆ. ಅತಿ ಹೆಚ್ಚು ವೋಟ್ ಪಡೆದ ಸ್ಪರ್ಧಿಗಳು ಫಿನಾಲೆ ಟಿಕೆಟ್ ಪಡೆಯುತ್ತಾರೆ. ಸದ್ಯದ ಅಂಕಪಟ್ಟಿ ಪ್ರಕಾರ ವರ್ತೂರು ಸಂತೋಷ್ ಅವರು 100 ಅಂಕ ಪಡೆದು ಟಾಪ್ನಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಪ್ರತಾಪ್, ಮೂರನೇ ಸ್ಥಾನದಲ್ಲಿ ತುಕಾಲಿ ಸಂತೋಷ್ ಹಾಗೂ ನಾಲ್ಕನೇ ಸ್ಥಾನದಲ್ಲಿ ಸಂಗೀತಾ ಶೃಂಗೇರಿ ಇದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ. ಒಟ್ಟಾರೆ bigboss ದಿನದಿಂದ ದಿನಕ್ಕೆ ಕುತೂಹಲದ ಘಟ್ಟ ತಲುಪಿದೆ.