ವೀಕೆಂಡ್‌ನಲ್ಲಿ ಸುದೀಪ್ ಸರ್ ಬಂದ್ರು ನೋಡಿ, ನನ್ನ ಲೈಫ್ ಕಂಪ್ಲೀಟ್ ಬದಲಾಗಿಹೋಯ್ತು: ಡ್ರೋನ್ ಪ್ರತಾಪ್

ಕಿಚ್ಚ ಸುದೀಪ್ ಈ ಮಾತು ಹೇಳಿದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಮಾತನಾಡುವುದು, ಟೀಕೆ ಮಾಡುವುದು ಎಲ್ಲವೂ ನಿಂತಿದೆ. ಪ್ರತಾಪ್ ಬಗ್ಗೆ ದೊಡ್ಮನೆಯ ಹೊರಗೆ ಅಂದರೆ, ಕರ್ನಾಟಕದ ತುಂಬಾ ಒಂದು ಮಟ್ಟದ ಅನುಕಂಪದ ಅಲೆ ಎದ್ದಿದೆ. ಈಗ ಪ್ರತಾಪ್ ಮೊದಲಿನಂತೆ ಬಿಗ್ ಬಾಸ್ ಮನೆಯಲ್ಲಿ ಡಲ್ ಆಗಿ ಇರುವುದಿಲ್ಲ.

BBK10 contestant Drone Prathap says Kichcha Sudeep talk changes My Life srb

"ಎದೆಯೊಳಗೆ ಗಿಟ್ಟಾರು ಡಿಂಗ್ ಡಿಂಗ್ ಡಿಂಗ್ ಅನ್ನುತ್ತೆ.. " ಈ ಹಾಡು ಬಿಗ್ ಬಾಸ್ ಮನೆಯಲ್ಲಿ ಕೇಳಿ ಬಂತು. ಈ ಹಾಡಿಗೆ ಡ್ರೋನ್ ಪ್ರತಾಪ್ ಹೆಜ್ಜೆ ಹಾಕುತ್ತಿದ್ದರೆ ಬಿಗ್ ಬಾಸ್ ಮನೆ ಸದಸ್ಯರಿಂದ ಚಪ್ಪಾಳೆ, ಶಿಳ್ಳೆಗಳ ಸುರಿಮಳೆ. ಡ್ರೋನ್ ಪ್ರತಾಪ್ ಭಾಗ್ಯಶ್ರೀ ಮೇಡಂ ಕೈ ಹಿಡಿದೆಳೆದು ಅವರೊಂದಿಗೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿ ಪ್ರತಾಪ್ ಸುತ್ತ ಹುಡುಗಿಯರ ಹಿಂಡು ಆತನ ಜತೆ ಡಾನ್ಸ್ ಮಾಡುವುದರಲ್ಲಿ ತಲ್ಲೀನವಾಗಿತ್ತು. ಸ್ನೇಹಿತ್ ಸೇರಿದಂತೆ, ಹುಡುಗರ ಗುಂಪು ಚಪ್ಪಾಳೆ ಮೂಲಕ ಡ್ರೋನ್ ಪ್ರತಾಪ್‌ಗೆ ಫುಶ್ ಕೊಡುತ್ತಿದ್ದರು. 

ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದಲ್ಲಿ ತುಂಬಾ ಡಲ್ ಎನಿಸಿದ್ದ ಡ್ರೋನ್ ಪ್ರತಾಪ್ ಇದೀಗ ಮನೆಯಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಈ ಬಗ್ಗೆ ಸ್ವತಃ ದ್ರೋಣ್ ಪ್ರತಾಪ್ ಏನು ಹೇಳಿದ್ದಾರೆ ಗೊತ್ತೇ? "ಮೊದಲ ವಾರದಲ್ಲಿ ನನಗೆ ತುಂಬಾ ಏನೇನೋ ಯೋಚನೆ ಬರುತ್ತಿತ್ತು. ತುಂಬಾ ಡಲ್ ಆಗಿದ್ದೆ. ಆದರೆ, ವೀಕೆಂಡ್‌ನಲ್ಲಿ ಸುದೀಪ್ ಸರ್ ಬಂದು ನನಗೆ ಧೈರ್ಯ ತುಂಬಿದರು. ನನ್ನ ಜೀವನವೇ ಬದಲಾಗಿ ಹೋಯ್ತು. ಕಂಪ್ಲೀಟ್ ಚೇಂಜ್ ಆಗೋಯ್ತು" ಎಂದಿದ್ದಾರೆ ಡ್ರೋನ್ ಪ್ರತಾಪ್. 

ಹಾಗಿದ್ದರೆ ಏನು ನಡೆಯಿತು ಮ್ಯಾಜಿಕ್? ಹೌದು, ಕಳೆದ ವಾರ ವೀಕೆಂಡ್‌ನಲ್ಲಿ ಸುದೀಪ್ ಡ್ರೋನ್ ಪ್ರತಾಪ್ ಪರವಾಗಿ ಮಾತನಾಡಿದ್ದರು. ಅಂದರೆ, ಡ್ರೋನ ಪ್ರತಾಪ್ ಸುಳ್ಳು ಹೇಳಿದ್ದರೆ ಅಥವಾ ತಪ್ಪು ಮಾಡಿದ್ದರೆ ಅವನನ್ನು ವಿಚಾರಿಸಿಕೊಳ್ಳಲು ದೇವರಿದ್ದಾನೆ. ಕಾನೂನಿನ ಪ್ರಕಾರ ಅಪರಾಧ ಎಸಗಿದ್ದರೆ ನೋಡಿಕೊಳ್ಳಲು ಸರ್ಕಾರ ಮತ್ತು ಕಾನೂನು ಇದೆ. ಆದರೆ ಡ್ರೋನ್ ಸಂಗತಿ ತೆಗೆದು ಬಿಗ್ ಬಾಸ್ ಮನೆಯಲ್ಲಿ ಅವನ ಮನಸ್ಸಿಗೆ ಹಿಂಸೆ ಕೊಡಲು ತುಕಾಲಿ ಸಂತೋಷ್ ಪ್ರಯತ್ನಪಟ್ಟಿದ್ದು ತಪ್ಪು. ತುಕಾಲಿಯೊಂದಿಗೆ ಬೇರೆಯವರು ಕೂಡ ಡ್ರೋನ್ ಪ್ರತಾಪ್ ವಿರುದ್ಧ ಕೈ ಜೋಡಿಸಿದ್ದು ತಪ್ಪು" ಎಂದು ಹೇಳಿದ್ದರು. 

ಕಿಚ್ಚ ಸುದೀಪ್ ಈ ಮಾತು ಹೇಳಿದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಮಾತನಾಡುವುದು, ಟೀಕೆ ಮಾಡುವುದು ಎಲ್ಲವೂ ನಿಂತಿದೆ. ಪ್ರತಾಪ್ ಬಗ್ಗೆ ದೊಡ್ಮನೆಯ ಹೊರಗೆ ಅಂದರೆ, ಕರ್ನಾಟಕದ ತುಂಬಾ ಒಂದು ಮಟ್ಟದ ಅನುಕಂಪದ ಅಲೆ ಎದ್ದಿದೆ. ಈಗ ಪ್ರತಾಪ್ ಮೊದಲಿನಂತೆ ಬಿಗ್ ಬಾಸ್ ಮನೆಯಲ್ಲಿ ಡಲ್ ಆಗಿ ಇರುವುದಿಲ್ಲ. ಎಲ್ಲ ಟಾಸ್ಕ್‌ನಲ್ಲಿಯೂ ಚೆನ್ನಾಗಿ ಭಾಗವಹಿಸುತ್ತಾನೆ. ಡಾನ್ಸ್‌, ಹಾಡು ಎಂದು ಹೆಜ್ಜೆ ಹಾಕುತ್ತ ಎಂಜಾಯ್ ಮಾಡುತ್ತಿದ್ದಾನೆ. 
ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯಲಿದೆ, ಅಂತಿಮವಾಗಿ ಗೆಲ್ಲೋರು ಯಾರು? ಎಂಬುದೆಲ್ಲವೂ ಒಂದೊಂದು ವಾರ ಕಳೆದಂತೇ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತ ಹೋಗಲಿದೆ.

ಬಿಗ್ ಬಾಸ್ ಏನೇ ತಿಳಿಯಬೇಕಾದರೆ 'JioCinema'ದಲ್ಲಿ ಬಿಗ್‌ಬಾಸ್‌ ಕನ್ನಡ ನೇರಪ್ರಸಾರ ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು 'Colors Kannada'ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

Latest Videos
Follow Us:
Download App:
  • android
  • ios