ಹಿಂದಿನ ವಾರಾಂತ್ಯದಲ್ಲಿ ನಮ್ರತಾ ಒಬ್ಬರು ಸದಸ್ಯರನ್ನು ಕಳೆದುಕೊಂಡ ಬಿಗ್‌ಬಾಸ್ ಮನೆಯ ಇನ್ನಷ್ಟು ಖಾಲಿಯಾಗಿದೆ. ಆದರೆ ಇರುವ ಆರು ಜನ ಸದಸ್ಯರ ನಡುವಿನ ತುರುಸಿನ ಸ್ಪರ್ಧೆಗೆ ಕಿಡಿ ಮತ್ತಷ್ಟು ಜೋರಾಗಿ ಉರಿಯುತ್ತಿದೆ. 

ಹಿಂದಿನ ವಾರಾಂತ್ಯದಲ್ಲಿ ನಮ್ರತಾ ಒಬ್ಬರು ಸದಸ್ಯರನ್ನು ಕಳೆದುಕೊಂಡ ಬಿಗ್‌ಬಾಸ್ ಮನೆಯ ಇನ್ನಷ್ಟು ಖಾಲಿಯಾಗಿದೆ. ಆದರೆ ಇರುವ ಆರು ಜನ ಸದಸ್ಯರ ನಡುವಿನ ತುರುಸಿನ ಸ್ಪರ್ಧೆಗೆ ಕಿಡಿ ಮತ್ತಷ್ಟು ಜೋರಾಗಿ ಉರಿಯುತ್ತಿದೆ. ಬಿಗ್‌ಬಾಸ್‌ ಮನೆಯಲ್ಲಿ ಈ ಸೀಸನ್‌ ಕೊನೆಯ ವಾರ ಹೇಗಿರುತ್ತದೆ? ಈ ಪ್ರಶ್ನೆ ಅಸಂಖ್ಯಾತ ಪ್ರೇಕ್ಷಕರ ಮನದಲ್ಲಿ ಕುತೂಹಲಹುಟ್ಟಿಸಿದೆ. ಆ ಕುತೂಹಲ ತಣಿಸುವಂಥ ಸುಳಿವೊಂದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ. 

ಈ ವಾರದ ಆರಂಭ ಹರಿತವಾದ ಪ್ರಶ್ನೊತ್ತರಗಳಿಂದ ಆರಂಭವಾಗಿದೆ. ಆ ಪ್ರಶ್ನೋತ್ತರ ಕಲಾಪವನ್ನು ನಡೆಸಿಕೊಡಲು ಬಿಗ್‌ಬಾಸ್ ಹಿಂದಿನ ಸ್ಪರ್ಧಿಯಾದ ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಎದುರಿಗೆ ಮನೆಯ ಆರೂ ಸದಸ್ಯರು ಸಾಲಾಗಿ ಕೂತಿದ್ದಾರೆ. ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಒಂದೊಂದಾಗಿ ಪ್ರಶ್ನೆಗಳ ಬಾಣವನ್ನು ಒಬ್ಬೊಬ್ಬ ಸ್ಪರ್ಧಿಯ ಮೇಲೂ ಗುರಿಯಿಟ್ಟು ಎಸೆಯುತ್ತಿದ್ದ ಹಾಗೆ ಅವರ ಮುಖದ ಬಣ್ಣ ಭಾವ ಬದಲಾಗುತ್ತಿದೆ. 

View post on Instagram


‘ವಿನಯ್ ನಿಮಗೆ ಜೈ ಜೈ ಎನ್ನುವವರೆಲ್ಲ ಹೊರಗಡೆ ಇದ್ದಾರೆ. ಯಾಕೆ ಏನಾಯ್ತು?’‘ಕಾರ್ತಿಕ್, ಮಡಕೆ ಒಡೆದು, ಅವರಿಲ್ದೆ ನಾನು ಝೀರೊ ಅಲ್ಲ ಅಂತ ಪ್ರೂವ್ ಮಾಡ್ತೀನಿ ಅಂತ ಹೇಳಿದ್ರಿ… ಪ್ರೂವ್ ಮಾಡಿದ್ರಾ?’ ‘ಸಂಗೀತಾ ಅವ್ರೆ, ಪ್ರತಾಪ್‌ಗೆ ಇರುವ ಜನಬೆಂಬಲ ನೋಡಿ, ನೀವು ಅವ್ರಿಗೆ ಪ್ರತು… ತಮ್ಮ ಅಂತ ಬಾಂಡಿಂಗ್ ಕ್ರಿಯೇಟ್ ಮಾಡಿದ್ರಾ? ಅಂದ್ರೆ ಇದು ಸ್ಟಾರ್ಟರ್ಜಿನಾ?’ ಇವು ಕೇವಲ ಎಕ್ಸಾಂಪಲ್‌ಗಳಷ್ಟೆ. ಇಂಥ ಇನ್ನೂ ಹತ್ತು ಹಲವು ನೇರ, ಹರಿತ ಪ್ರಶ್ನೆಗಳು ಬಿಗ್‌ಬಾಸ್‌ ಟಾಪ್ ಸಿಕ್ಸ್ ಸ್ಪರ್ಧಿಗಳ ಮುಖಕ್ಕೆ ರಾಚಿವೆ. 

ಜೋರಾಗಿ ಮಾತಾಡಿದ ತಕ್ಷಣ ಏನೂ ಕಿತ್ಕೊಳಕ್ಕಾಗಲ್ಲ ಇಲ್ಲಿ: ವಿನಯ್ ಅವಾಜ್, ತುಕಾಲಿ ಜವಾಬ್!

ಅದಕ್ಕೆ ಅವರು ಯಾವ ರೀತಿ ಉತ್ತರಿಸುತ್ತಾರೆ? ತಮ್ಮನ್ನು ತಾವು ಹೇಗೆ ಸಮರ್ಥಿಸಿಕೊಳ್ಳುತ್ತಾರಾ? ಅಥವಾ ಸಹನೆ ಕಳೆದುಕೊಳ್ಳುತ್ತಾರಾ? ಈ ಎಲ್ಲವೂ ಇಂದಿನ ಸಂಚಿಕೆಯಲ್ಲಿ ಅನಾವರಣಗೊಳ್ಳಲಿದೆ. ಬಿಗ್‌ಬಾಸ್‌ ಫೈನಲ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಮನೆಯಿಂದ ಮತ್ತೊಬ್ಬರು ಸ್ಪರ್ಧಿಯನ್ನು ಹೊರಗೆ ಕಳಿಸುವ ಸನ್ನಿವೇಶವೂ ಯಾವುದೇ ಕ್ಷಣದದಲ್ಲಿಯೂ ಎರಗಬಹುದಾಗಿದೆ. ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿರುವ ಬಿಗ್‌ಬಾಸ್‌ ಮನೆಯ ಲೈವ್ ಅಪ್‌ಡೇಟ್‌ಗಳಿಗಾಗಿ ಜಿಯೊ ಸಿನಿಮಾ ನೋಡಿ.