Armaan Malik wife Payal Malik Controversy: ಬಿಗ್ ಬಾಸ್ ಸ್ಪರ್ಧಿ ಪಾಯಲ್ ಮಲಿಕ್ ಅವರು ಕಾಳಿಮಾತೆ ವೇಷ ಹಾಕಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಹೀಗಾಗಿ ದೇವಸ್ಥಾನಕ್ಕೆ ಬಂದು ಅವರು ಕ್ಷಮೆ ಕೇಳಿದ್ದಾರೆ.
ಇಂದು ಸೋಶಿಯಲ್ ಮೀಡಿಯಾವನ್ನು ಹೇಗೆ ಬೇಕಿದ್ರೂ ಬಳಸಿಕೊಳ್ಳಬಹುದು, ಅದೆಲ್ಲವೂ ನಮ್ಮ ಕೈಯಲ್ಲಿರುತ್ತದೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಬಿಗ್ ಬಾಸ್ ಹಿಂದಿ ಒಟಿಟಿ 3 ಸ್ಪರ್ಧಿ ಪಾಯಲ್ ಮಲಿಕ್ ( Payal Malik ), ಇತ್ತೀಚೆಗೆ ಕಾಳಿ ಮಾತೆಯ ವೇಷ ಧರಿಸಿದ್ದ ವಿಡಿಯೋಗೆ ತೀವ್ರ ಟೀಕೆ ಕೇಳಿಬಂದಿತ್ತು. ಆಮೇಲೆ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಕಾಳಿಮಾತೆ ವಿಡಿಯೋ ವಿವಾದ!
ಈಗ ಪಾಯಲ್ ಅಕೌಂಟ್‌ನಿಂದ ಈ ವಿಡಿಯೋ ಡಿಲೀಟ್ ಆಗಿದೆ. ಆದರೆ ಕೆಲ ಪೇಜ್‌ಗಳು ಆ ವಿಡಿಯೋವನ್ನು ಶೇರ್ ಮಾಡಿದ್ದರಿಂದ, ಇದು ದೊಡ್ಡ ವಿವಾದ ಆಗಿದೆ. ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ ಮಾಡಲಾಗಿದೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.
ದೇವಸ್ಥಾನದಲ್ಲಿ ಸೇವೆ ಮಾಡಿದ ದಂಪತಿ!
ಜುಲೈ 22, 2025 ರಂದು, ಪಾಯಲ್ ತನ್ನ ಪತಿ ಯೂಟ್ಯೂಬರ್ ಅರ್ಮಾನ್ ಮಲಿಕ್ ( Armaan Malik ) ಮತ್ತು ಮಗಳು ತುಬಾ ಜೊತೆಗೆ ಪಟಿಯಾಲಾದ ಕಾಳಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಭಾವುಕರಾಗಿ ಅತ್ತರು, ಭಕ್ತರು ಮತ್ತು ಸಾರ್ವಜನಿಕರ ಮುಂದೆಯೇ ತನ್ನ ತಪ್ಪಾಗಿದೆ ಎಂದು ಕ್ಷಮೆಯಾಚಿಸಿದ್ದಾರೆ. ಪಾಪಪರಿಹಾರಕ್ಕಾಗಿ ಈ ಕುಟುಂಬವು ದೇವಸ್ಥಾನದಲ್ಲಿ ಪಾತ್ರೆಗಳನ್ನು ತೊಳೆದು ಮತ್ತು ಭಕ್ತರಿಗೆ ಆಹಾರ ಬಡಿಸಿ ತನ್ನ ಸೇವೆಯನ್ನು ಮಾಡಿದೆ.
ಕ್ಷಮೆ ಕೇಳಿದ ಪಾಯಲ್ ಮಲಿಕ್!
ಪಾಯಲ್ ಮಾಧ್ಯಮಗಳ ಮುಂದೆ ಮಾತನಾಡಿ, ಮೂರು ತಿಂಗಳ ಹಿಂದೆ ಆ ವಿಡಿಯೋ ಮಾಡಿದೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ನಮಗೆ ಇರಲಿಲ್ಲ. ನನ್ನ ಮಗಳು ಕಾಳಿ ಮಾತೆಯ ಭಕ್ತೆ, ಆದ್ದರಿಂದ ಅವಳಿಗಾಗಿ ಈ ವೇಷ ಹಾಕಿದೆ. ಇದು ದೊಡ್ಡ ತಪ್ಪಾಗಿದೆ, ನನಗೆ ಅರ್ಥ ಆಗಿದೆ. ಎಲ್ಲರಿಗೂ ಕೈಮುಗಿದು ಕ್ಷಮೆ ಕೇಳುವೆ. ಯಾರೂ ಇಂತಹ ತಪ್ಪನ್ನು ಮಾಡಬೇಡಿ ಎಂದು ಹೇಳಿದ್ದಾರೆ.
“ನಾನು ಆ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ ತಕ್ಷಣ ನೆಗೆಟಿವ್ ಕಾಮೆಂಟ್‌ಗಳು ಬಂತು. ಹೀಗಾಗಿ ಆ ವಿಡಿಯೋ ಡಿಲಿಟ್ ಮಾಡಿದೆ. ಆದರೆ, ಕೆಲವು ಪೇಜ್‌ಗಳು ಆ ವಿಡಿಯೋವನ್ನು ರೀಪೋಸ್ಟ್ ಮಾಡಿದ್ದರಿಂದ ಅದು ಇತ್ತೀಚೆಗೆ ಮತ್ತೆ ಎಲ್ಲ ಕಡೆ ವೈರಲ್ ಆಯ್ತು" ಎಂದು ಅವರು ಹೇಳಿದ್ದಾರೆ. ಆ ವಿಡಿಯೋದಲ್ಲಿ ಆರಂಭದಲ್ಲಿ ಪಾಯಲ್ ಅವರು ವೆಸ್ಟರ್ನ್ ಡ್ರೆಸ್ ಹಾಕಿದ್ದರು. ಆ ಬಳಿ ತ್ರಿಶೂಲ ಮತ್ತು ಕಿರೀಟದಂತಹ ಸಾಂಪ್ರದಾಯಿಕ ವೇಷ ಭೂಷಣದ ಜೊತೆಗೆ ಒಂದಷ್ಟು ಕಾಳಿಮಾತೆ ಆಭರಣ ಧರಿಸಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಆಯ್ತು.
ಇಬ್ಬರು ಪತ್ನಿಯರ ಮುದ್ದಿನ ಗಂಡ ಅರ್ಮಾನ್ ಮಲಿಕ್!
ಬಿಗ್ ಬಾಸ್ ಶೋನಲ್ಲಿ ಅರ್ಮಾನ್ ಮಲಿಕ್ ಅವರು ಇಬ್ಬರು ಪತ್ನಿಯರ ಜೊತೆ ಭಾಗಿಯಾಗಿದ್ದರು. ಇದು ದೊಡ್ಡ ಚರ್ಚೆಯಾಯ್ತು. ಆರಂಭದಲ್ಲಿ ಅರ್ಮಾನ್ ಅವರು ಪಾಯಲ್‌ರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಚಿರಾಗ್ ಎಂಬ ಮಗನಿದ್ದಾಳೆ. ಆ ಬಳಿಕ ಅರ್ಮಾನ್ ಅವರು ಪಾಯಲ್ ಸ್ನೇಹಿತೆ ಕೃತಿಕಾರನ್ನು ಮದುವೆಯಾದರು. ಅರ್ಮಾನ್, ಕೃತಿಕಾ ಪ್ರೀತಿಸಿ ಏಳು ದಿನಕ್ಕೆ ಮದುವೆಯಾದ್ದರಿಂದ ಇವರ ಲವ್‌ಸ್ಟೋರಿ ಪಾಯಲ್‌ಗೆ ಗೊತ್ತೇ ಇರಲಿಲ್ಲ. ಆ ಬಳಿಕ ಪಾಯಲ್ ಮನೆ ಬಿಟ್ಟು ಹೋದರು. ಇದಾಗಿ ಒಂದು ವರ್ಷದ ಬಳಿಕ ಅರ್ಮಾನ್, ಕೃತಿಕಾ, ಪಾಯಲ್ ಎಲ್ಲರೂ ಒಟ್ಟಿಗೆ ಬದುಕಲು ಆರಂಭಿಸಿದರು.
2023ರಲ್ಲಿ ಕೃತಿಕಾ, ಪಾಯಲ್ ಒಟ್ಟಿಗೆ ಗರ್ಭಿಣಿಯಾದರು. ಪಾಯಲ್ ಐವಿಎಫ್ ಮೂಲಕ, ಕೃತಿಕಾ ಸಹಜವಾಗಿ ಗರ್ಭ ಧರಿಸಿದ್ದಾರೆ. ಪಾಯಲ್‌ಗೆ ತುಬಾ, ಅಯಾನ್ ಎಂಬ ಅವಳಿ ಮಕ್ಕಳು ಜನಿಸಿದ್ದರೆ, ಕೃತಿಕಾಗೆ ಜೈದ್ ಎಂಬ ಮಗ ಜನಿಸಿದ್ದಾನೆ. ಒಟ್ಟಿನಲ್ಲಿ ನಾಲ್ವರು ಮಕ್ಕಳು, ಇಬ್ಬರು ಪತ್ನಿಯೆ ಜೊತೆ ಅರ್ಮಾನ್ ಒಂದೇ ಸೂರಿನಡಿ ಬದುಕುತ್ತಿದ್ದಾರೆ.
