Asianet Suvarna News Asianet Suvarna News

BIGG BOSS 17: ನಟಿ ಅಂಕಿತಾ ಲೋಖಂಡೆಗೆ ಪತಿಯಿಂದ ಇನ್​ಸಲ್ಟ್​- ಸಲ್ಮಾನ್​ ಜೊತೆ ಪ್ರೇಕ್ಷಕರೂ ಗರಂ

 ಬಿಗ್​ಬಾಸ್​ 17 ಮನೆಯಲ್ಲಿ ನಟಿ ಅಂಕಿತಾ ಲೋಖಂಡೆಗೆ ಪತಿ ಇನ್​ಸಲ್ಟ್​ ಮಾಡಿದ್ದು ಸಲ್ಮಾನ್​ ಜೊತೆ ಪ್ರೇಕ್ಷಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 

BB 17 Internet and Salman Khan slam slam Ankita Lokhande hubby Vicky Jain suc
Author
First Published Oct 28, 2023, 4:16 PM IST

ಟಿವಿ ತಾರೆ ಮತ್ತು ನಟಿ ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕ್ಕಿ ಜೈನ್  ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17ನಿಂದ ಸಕತ್​ ಸುದ್ದಿಯಲ್ಲಿದ್ದಾರೆ. ಈ ಸಲದ  ಬಿಗ್ ಬಾಸ್‌  ಉಳಿದ ಸೀಸನ್​ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ. ಅದರಲ್ಲಿ ಈ ಬಾರಿ ಹೆಚ್ಚು ಸುದ್ದಿಯಾಗುತ್ತಿರುವುದು ಈ ಜೋಡಿ. ಇದಕ್ಕೆ  ಕಾರಣ ಇವರಿಬ್ಬರ ಕಚ್ಚಾಟ.   ಕಾರ್ಯಕ್ರಮದ ಮೊದಲು ಅವರು ಇನ್ಸ್ಟಾ-ಪರ್ಫೆಕ್ಟ್ ಜೋಡಿಯಾಗಿದ್ದರೂ, ಅವರು ಬಿಗ್ ಬಾಸ್ 17 ನಲ್ಲಿ ಜಗಳವಾಡಿ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.  ವಿಕ್ಕಿ ಸಾಮಾನ್ಯವಾಗಿ ಅಂಕಿತಾ ಅವರನ್ನು ಇತರ ಸ್ಪರ್ಧಿಗಳ ಮುಂದೆ ಕೀಳಾಗಿ ಕಾಣುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.  ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ವಿಕ್ಕಿ ಜೈನ್​ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರೆ, ಅತ್ತ  ಇಂಟರ್ನೆಟ್ ಬಳಕೆದಾರರು ಕಿಡಿ ಕಾರುತ್ತಿದ್ದಾರೆ. ವೀಕ್ಷಕರು ನಟಿ ಅಂಕಿತಾಗೆ ಬೆಂಬಲ ನೀಡುತ್ತಿದ್ದಾರೆ.

ಈ ಬಗ್ಗೆ ಇದಾಗಲೇ ಹಲವರು ಪ್ರತಿಕ್ರಿಯಿಡಿದ್ದು ಅಂಕಿತಾ ಪರವಾಗಿ ನಿಂತಿದ್ದಾರೆ. ಅದೇ ಇನ್ನೊಂದೆಡೆ,  ನಟಿ ದೇವೋಲೀನಾ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಈ ವಿಷಯವನ್ನು ಶೇರ್​ ಮಾಡಿದ್ದು, ಅಂಕಿತಾ ಪರ ಇದ್ದಾರೆ.  ಗಂಡ ಹೆಂಡತಿಯ ನಡುವೆ ಜಗಳಗಳು ನಡೆಯುತ್ತಲೇ ಇರುತ್ತವೆ. ಆದರೆ ಹೆಂಡತಿಯನ್ನು ಪ್ರತಿದಿನ ಅವಮಾನಿಸುವ, ನಿರ್ಲಕ್ಷಿಸುವುದು ಮನರಂಜನೆ ನೀಡುವುದಿಲ್ಲ. ಅದು ಆಟದ ಭಾಗವಾಗಿರಲು ಸಾಧ್ಯವಿಲ್ಲ" ಎಂದು ನಟಿ ಹೇಳಿದ್ದಾರೆ.  ಭಿನ್ನಾಭಿಪ್ರಾಯ ಮತ್ತು ತಮಾಷೆ ವೈವಾಹಿಕ ಜೀವನದ ಭಾಗವಾಗಿದೆ. ಆದರೆ, ಹೆಂಡತಿಯನ್ನು ಅವಮಾನಿಸುವುದು ಆಟದ ಭಾಗವಾಗಬಾರದು ಎಂದಿದ್ದಾರೆ.  

ಹಾಟ್​ ವಿಡಿಯೋ ಶೇರ್​ ಮಾಡಿ ಬಿಗ್​ಬಾಸ್​ ಮನೆಯೊಳಕ್ಕೆ ಕಾಲಿಡ್ತಿದ್ದಾರೆ ಮಾಜಿ ಮಿಸ್ ಇಂಡಿಯಾ!

ಈ ಹಿಂದೆ,  ವಿಕ್ಕಿ ಅವರು ತಮ್ಮ ಸಂಬಂಧದ ಮೇಲೆ ಪರಿಣಾಮ ಬೀರದಿದ್ದರೆ ಅಂಕಿತಾ ಅವರ ಜಗಳಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯುವುದಾಗಿ ಬಿಗ್ ಬಾಸ್ 17 ರ ಮನೆಗೆ ಪ್ರವೇಶಿಸುವ ಮೊದಲು, ETimes ಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಅದೇ ಇನ್ನೊಂದೆಡೆ, ಅಂಕಿತಾ ಲೋಖಂಡೆ ಪತಿ ವಿಕ್ಕಿ ಜೈನ್ ಮೇಲೆ ಅಸಮಾಧಾನಗೊಂಡಿದ್ದರು. ಜೊತೆಗೆ ನಾನಿಲ್ಲಿ ಒಂಟಿತನ ಅನುಭವಿಸುತ್ತಿದ್ದೇನೆ ಎಂದು ಹೇಳಿದ್ದರು. ತಾವು ಬಿಗ್ ಬಾಸ್ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತೇವೆ ಎಂದು ಅಂದುಕೊಂಡಿದ್ದು, ಇಲ್ಲಿ ಹಾಗೆ ಇಲ್ಲದೆ ಇರುವುದರ ಕುರಿತು ಅಂಕಿತಾ ಕಣ್ಣೀರು ಹಾಕಿದ್ದರು. ನಾನು ಯಾಕೆ ಇಲ್ಲಿ ಒಂಟಿತನ ಅನುಭವಿಸುತ್ತಿದ್ದೇನೆ ಎಂದು ನನಗೆ ಗೊತ್ತಾಗುತ್ತಿಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಕಡೆ ಇದ್ದಿಯ. ಆದರೆ ನನ್ನ ಜೊತೆ ಮಾತ್ರ ಇಲ್ಲ. ಅದನ್ನು ನಾನು ಫೀಲ್ ಮಾಡುತ್ತಿದ್ದೇನೆ" ಎಂದು ಆರೋಪಿಸಿದ್ದರು. ಈಗ ಅದು ಮತ್ತಷ್ಟು ಹೆಚ್ಚಾಗಿದೆ. 

ಪತಿಯನ್ನು ಕುರಿತು ಅಂಕಿತಾ, ಜನರು ನನ್ನನ್ನು ನೋಯಿಸಲು ಸಾಧ್ಯವಿಲ್ಲ, ನೀನು ಮಾತ್ರ ನನ್ನನ್ನು ನೋಯಿಸಬಹುದು. ಈಗ ಅದೇ ಮಾಡುತ್ತಿದ್ದಿಯ. ನಂಗೆ ಹರ್ಟ್ ಆಗುತ್ತಿದೆ " ಎಂದು ಅಂಕಿತಾ ಅತ್ತಿದ್ದರು.  ನಾನು ಯಾಕೆ ಒಂಟಿತನ ಅನುಭವಿಸುತ್ತಿದ್ದೇನೆ ಎಂದು ನನಗೆ ಗೊತ್ತಾಗುತ್ತಿಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಕಡೆ ಇದ್ದಿಯ. ಆದರೆ ನನ್ನೊಂದಿಗೆ ಮಾತ್ರ ಇಲ್ಲ. ಅದನ್ನು ನಾನು ಫೀಲ್ ಮಾಡುತ್ತಿದ್ದೇನೆ ಎಂದು ಆರೋಪಿಸಿದ್ದಾರೆ. 

ಬಿಗ್​ಬಾಸ್​ನಲ್ಲಿ ಮೊದಲ ಸ್ಪರ್ಧಿಯೇ ಮಿಸ್ಸಿಂಗ್​! ಉಫ್​... ನಿಮ್​ ಸಹವಾಸವೇ ಬೇಡ ಅಂದಳಾ ಚಾರ್ಲಿ?
 

 

Follow Us:
Download App:
  • android
  • ios