Asianet Suvarna News Asianet Suvarna News

ಅವಿಯ ಬೆನ್ನಲ್ಲೇ ಅಭಿಯೂ ಅಮ್ಮಾ ಹೇಳುವ ಟೈಮ್​ ಬಂದೇ ಬಿಡ್ತಾ? ಏನಿದು ಶ್ರೀರಸ್ತು ಶುಭಮಸ್ತು ಟ್ವಿಸ್ಟ್​?

ತುಳಸಿಯನ್ನು ಅವಿ ಅಮ್ಮಾ ಎಂದು ಈಗಾಗಲೇ ಒಪ್ಪಿಕೊಂಡಾಗಿದೆ. ಅಭಿಯೂ ಹೇಳುವ ಟೈಂ ಬಂದೇ ಬಿಡ್ತಾ? ಏನಿದು ಶ್ರೀರಸ್ತು ಶುಭಮಸ್ತು ಟ್ವಿಸ್ಟ್​?
 

Avi  already accepted Tulsi as mother Now it time for Abhi Srirastu Shubhamastu twist suc
Author
First Published Apr 13, 2024, 1:11 PM IST

ಅಮೃತಧಾರೆ ಸೀರಿಯಲ್​ ಪ್ರೇಮಿಗಳಿಗೆ ಹಬ್ಬವೋ ಹಬ್ಬ. ಇಷ್ಟು ಬೇಗ ಬೇಗ ಎಲ್ಲವೂ ಆಗ್ತಿದ್ಯಾ ಎನ್ನುವ ಖುಷಿ. ಅದಕ್ಕೆ ಕಾರಣ, ಇದಾಗಲೇ ಅವಿ ತುಳಸಿಯನ್ನು ಅಮ್ಮಾ ಎಂದು ಹೇಳಿ ಆಗಿದೆ. ಇದೀಗ ಮುಂಗೋಪಿ ಅವಿ ಒಬ್ಬ ಬಾಕಿ ಉಳಿದಿದ್ದಾನೆ. ಈತ ಏನಾದ್ರೂ ಅಮ್ಮಾ ಎಂದು ಹೇಳಿದರೆ ಅಲ್ಲಿಗೆ ಬಹುತೇಕ ಕಥೆ ಮುಗಿದಂತೆಯೇ ಸರಿ. ಆದರೆ ಅದು ಇಷ್ಟು ಬೇಗ ಸಾಧ್ಯವಿಲ್ಲ ಎಂದುಕೊಂಡೇ ಇದ್ದರು ಸೀರಿಯಲ್​ ಪ್ರೇಮಿಗಳು. ಆದರೆ ಇದೀಗ ಭಾರಿ ಟ್ವಿಸ್ಟ್​ ಸಿಕ್ಕಿದೆ. ಹೇಗಾದರೂ ಮಾಡಿ ಅವಿ ಮತ್ತು ಅಭಿಯ ಬಾಯಲ್ಲಿ ಅಮ್ಮ ಎಂದು ಕೇಳಿಸಿಕೊಳ್ಳೋ ಆಸೆ ತುಳಸಿದೆ. ಆದರೆ ಕುತೂಹಲದ ಟ್ವಿಸ್ಟ್​ನಲ್ಲಿ ಯುಗಾದಿ ಸಂಭ್ರಮದ ಸಮಯದಲ್ಲಿಯೇ ಅವಿಯ ಬಾಯಲ್ಲಿ ತುಳಸಿ ಅಮ್ಮಾ ಎನಿಸಿಕೊಂಡಿದ್ದಾಳೆ. ಯುಗಾದಿ ಹಬ್ಬದಂದು ಮನೆಯ ಹಿರಿಯ ಸೊಸೆಯಾಗಿರೋ ತುಳಸಿ ಮತ್ತು ಪೂರ್ಣಿ ಪೂಜೆ ಮಾಡುತ್ತಿರುವ ಸಂದರ್ಭದಲ್ಲಿ ಶಾರ್ವರಿ ಮತ್ತು ದೀಪಿಕಾ ಅಲ್ಲಿಗೆ ಬಂದಿದ್ದಾರೆ. ಪ್ರತಿ ಬಾರಿಯೂ ನಾನೇ ಪೂಜೆ ಮಾಡುತ್ತಿದ್ದೆ, ಈಗ ತುಳಸಿ ಮಾಡುತ್ತಿದ್ದಾಳೆ ಎಂದು ಹೊಟ್ಟೆ ಉರಿಸಿಕೊಂಡಿದ್ದಾಳೆ ಶಾರ್ವರಿ.  ಆ ಸಮಯದಲ್ಲಿ ಬಂದ ಅಭಿ, ಅಲ್ಲಿಂದ ಏಳಿ, ಪೂಜೆ ಚಿಕ್ಕಮ್ಮ ಮಾಡುತ್ತಾರೆ, ನೀವು ಮಾಡ್ಬೇಡಿ ಎಂದು ಕೂಗಿದ್ದಾನೆ.

ಅಷ್ಟರಲ್ಲಿ ಎಂಟ್ರಿ ಕೊಡೋ ಅವಿ, ಅಮ್ಮಾ ನೀವೇ ಪೂಜೆ ಮಾಡಿ ಎಂದಿದ್ದ. ಅವಿಯ ಬಾಯಲ್ಲಿ ಅಮ್ಮಾ ಎನ್ನುವ ಮಾತು ಕೇಳಿ ತುಳಸಿ ಕಣ್ಣೀರಾದರೆ ಶಾರ್ವರಿ, ದೀಪಿಕಾ ಶಾಕ್​ ಆಗಿದ್ದರು. ಆಗ ತುಳಸಿ, ಏನೆಂದೆ? ಅಮ್ಮಾ ಅಂದಿಯಾ ಎಂದು ಕೇಳಿದಾಗ ಅವಿ, ಹೌದು ಅಮ್ಮನಿಗೆ ಅಮ್ಮ ಎನ್ನದೇ ಇನ್ನೇನು ಹೇಳಬೇಕು ಎಂದಿದ್ದ. ಒಟ್ಟಿನಲ್ಲಿ ಒಬ್ಬ ಮಗನ ಕೈಯಲ್ಲಿ ಅಮ್ಮಾ ಎನಿಸಿಕೊಂಡಾಗಿದೆ. ಈಗ ಏನಿದ್ದರೂ ಅಭಿಯ ಬಾಯಲ್ಲಿ ಅಮ್ಮಾ ಎನಿಸಿಕೊಳ್ಳಬೇಕಿದೆ ತುಳಸಿ. ಆದರೆ ಆ ಟೈಮ್​ ಕೂಡ ಬಂದ ಹಾಗೆ ಕಾಣಿಸ್ತಿದೆ. ಇದಕ್ಕೆ  ಕಾರಣ, ನಿಧಿ ಮಾಮೂಲಿನಂತೆ ಕುಡಿದು ಮನೆಗೆ ಬರುತ್ತಿದ್ದಾಳೆ. ಆ ಸಮಯದಲ್ಲಿ ಕೆಲವು ಗೂಂಡಾಗಳು ಅವಳನ್ನು ಸುತ್ತುವರೆದಿದ್ದಾರೆ. ಈ ಸಮಯದಲ್ಲಿ ಅಲ್ಲಿಗೆ ಬಂದ ಅಭಿ ಗೂಂಡಾಗಳನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾಗ ಒಬ್ಬಾತ ಆತನ ತಲೆ ಮೇಲೆ ಹೊಡೆದಿದ್ದಾನೆ. ಅಷ್ಟರಲ್ಲಿ ಆತ ತಲೆತಿರುಗಿ ಬಿದ್ದಿದ್ದಾನೆ.

ದೇವರೇನು ಹೂವಿನ ಸುರಿಮಳೆ ಸುರಿಸ್ತಾನಾ ಎಂದು ಚಾಂದನಿ ಕೇಳ್ತಿದ್ದಂತೆಯೇ ನಡೆದೇ ಹೋಯ್ತು ಪವಾಡ!

ಅಷ್ಟೊತ್ತಿಗಾಗಲೇ ತುಳಸಿ ಅಲ್ಲಿ  ಆಟೋದಲ್ಲಿ ಬಂದಿದ್ದಾಳೆ. ದಾರಿಯಲ್ಲಿ ಅಭಿ ಮತ್ತು ನಿಧಿ ಬಿದ್ದಿರುವುದನ್ನು ನೋಡಿರುವ ಆಕೆ, ಇಬ್ಬರನ್ನೂ ಅಭಿ ತಂದಿರುವ ಕಾರಿನಲ್ಲಿ ಕುಳ್ಳರಿಸಿದ್ದಾಳೆ. ಅಭಿಗೆ ಅರೆಬರೆ ಎಚ್ಚರ. ಕಾರಿನ ಡ್ರೈವಿಂಗ್​ ಸೀಟಿನಲ್ಲಿ ತುಳಸಿ ಇರುವುದನ್ನು ನೋಡಿದ ಆತ ಶಾಕ್​ ಆಗಿದ್ದಾನೆ. ಸರಿಯಾಗಿ ಬೆಲ್ಟ್​ ಹಾಕಿಕೊಳ್ಳಲು ಬರದಾಕೆ ಕಾರನ್ನು ಏನು ಓಡಿಸ್ತೀರಿ ಎಂದು ಬೈದಿದ್ದಾನೆ. ಆಗ ತುಳಸಿ ಬೆಲ್ಟ್​ ಕೂಡ ಹಾಕಿಕೊಂಡು, ಕಾರನ್ನು ಚಲಾಯಿಸಿದ್ದಾಳೆ. ಅಷ್ಟಕ್ಕೂ ಅಭಿಯ ಸಲುವಾಗಿ ಈಕೆ ಬದಲಾಗಿದ್ದಾಳೆ. ಕಾರಿನ ಚಾಲನೆಯನ್ನೂ ಕಲಿತಿದ್ದಾಳಲ್ಲ. ತುಳಸಿಯನ್ನು ನೋಡಿ ಅಭಿ ಕಂಗಾಲಾಗಿದ್ದಾನೆ. ತನ್ನ ಮತ್ತು ತಂಗಿ ನಿಧಿಯ ಪ್ರಾಣವನ್ನು ಕಾಪಾಡಿದ ಹಾಗೂ ತುಳಸಿಯಲ್ಲಾದ ಈ ಪರಿವರ್ತನೆ ಕಂಡು ಅಮ್ಮಾ ಅಂತ ಹೇಳುತ್ತಾನಾ ಎನ್ನುವುದು ಈಗಿರುವ ಕುತೂಹಲ.

ಅಷ್ಟಕ್ಕೂ ತುಳಸಿಗೆ ಅವಿ ಮತ್ತು ಅಭಿಯನ್ನು ಮಗ ಎಂದುಕೊಂಡಿರೋ ತುಳಸಿಗೆ ತನ್ನ ಹೆತ್ತ ಮಕ್ಕಳಂತೆಯೇ ಇವರ ಪ್ರೀತಿಯೂ ಮುಖ್ಯ. ಇದೇ ಕಾರಣಕ್ಕೆ ಅವರ ಖುಷಿಯಾಗಿ ತುಳಸಿ ಏನು ಬೇಕಾದರೂ ಮಾಡಲು ರೆಡಿ ಇರುತ್ತಾಳೆ. ಅವಿ ಇದಾಗಲೇ ತುಳಸಿಯ ಮೇಲೆ ಅಕ್ಕರೆ ತೋರಿ ಅಮ್ಮ ಎಂದಿದ್ದಾನೆ. ಅದರೆ  ಅಭಿಗೋ ಮುಂಗೋಪ ಜಾಸ್ತಿ. ಅಪ್ಪನನ್ನು ಮದುವೆಯಾಗಿರುವ ಈ ಹೆಂಗಸು ತನ್ನ ಅಮ್ಮನಾಗಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾನೆ. ಇದನ್ನೇ ಶಾರ್ವರಿ ಮತ್ತು ದೀಪಿಕಾ ಮಿಸ್​ಯೂಸ್​ ಮಾಡಿಕೊಂಡದ್ದೂ ಇದೆ. ಇದಾಗಲೇ ಅಭಿಯ ಖುಷಿಯಾಗಿ ತುಳಸಿ  ಮನೆಯ ಕೀ ಗೊಂಚಲನ್ನು ಅಭಿಯ ಕೈಗೆ ಇತ್ತು, ಇದು ನನಗೆ ಬೇಡ, ನೀನೇ ಇಟ್ಟುಕೋ. ನಾನು ನಿನ್ನ ಅಮ್ಮ ಎಂದು ಒಪ್ಪಿಕೊಂಡ ದಿನ ಇದನ್ನು ನನಗೆ ವಾಪಸ್​ ಕೊಡು ಎಂದಿದ್ದಾಳೆ.  ಅದೇ ರೀತಿ ಮಗ ಅವಿಗಾಗಿ ತುಳಸಿ ಏನು ಬೇಕೋ ಹಾಗೆ ಬದಲಾಗಲು ರೆಡಿಯಾಗುತ್ತಿದ್ದಾಳೆ.  ಹೊಸದಾಗಿ ಅಮ್ಮನ ಸ್ಥಾನ ­­ಪಡೆದಿರೋ ತುಳಸಿಯನ್ನು ಕಂಡರೆ ಆಗ ಅವಿ ಮಾತಿನ ಭರದಲ್ಲಿ ನನ್ನ ಅಮ್ಮನ ಜೊತೆ ನಿಮ್ಮನ್ನು ಕಂಪೇರ್​ ಮಾಡಿಕೊಳ್ಳಬೇಡಿ. ಅವರು ಡ್ಯಾನ್ಸರ್​ ಆಗಿದ್ರು, ಇಂಗ್ಲಿಷ್​ ಚೆನ್ನಾಗಿ ಮಾತಾಡ್ತಿದ್ರು... ಎಂದೆಲ್ಲಾ ಹೇಳಿದ್ದಾನೆ. ಅವನಿಗಾಗಿ ಬದಲಾಗಿ ಅವನ ಪ್ರೀತಿ ಗಳಿಸಬೇಕು ಎನ್ನುವ ತಯಾರಿಯಲ್ಲಿ ಇದ್ದಾಳೆ ತುಳಸಿ. ಮುದ್ದಿನ ಸೊಸೆ, ಅವಿಯ ಪತ್ನಿ ಪೂರ್ಣಿಯ ನೆರವು ಪಡೆದು ಯೂಟ್ಯೂಬ್​ನಲ್ಲಿ ತಮಗೆ ಬೇಕಾಗಿರುವುದನ್ನು ಸರ್ಚ್​ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಂಡಿದ್ದಾಳೆ. ಇದೀಗ ಡ್ಯಾನ್ಸ್​ ಮತ್ತು ಇಂಗ್ಲಿಷ್​ ಕಲಿಕೆಯನ್ನು ಶುರುವಿಟ್ಟುಕೊಂಡಿದ್ದಾಳೆ. 

ಜಗಳ ಮಾಡದೆಯೂ ಕುತಂತ್ರಿ ಅತ್ತೆ-ನಾದಿನಿಯರನ್ನು ಮಟ್ಟ ಹಾಕ್ಬೋದಾ? ಭೇಷ್​ ಭೇಷ್ ಎಂದ ಫ್ಯಾನ್ಸ್​

Follow Us:
Download App:
  • android
  • ios