ಏನ್ ಅದು ಗರ್ಭನಾ ಇಲ್ಲಾ ಗೋಣಿ ಚೀಲನಾ?; ಅನು ಸಿರಿಮನೆ ಕಾಲೆಳೆದ ನೆಟ್ಟಿಗರು

ಅನು ಸಿರಿಮನೆ ಪ್ರೆಗ್ನೆಂಟ್ ಅಲ್ಲ ಎಂದು ಗೊತ್ತಾಗುತ್ತಿದ್ದಂತೆ ಕಾಲೆಳೆಯುವುದಕ್ಕೆ ಶುರು ಮಾಡಿದ ನೆಟ್ಟಿಗರು... 

Anu sirimane is not pregnant say doctor after accident Zee kannada jothe jotheyali vcs

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಆರಂಭದಲ್ಲಿ ಟಿಆರ್‌ಪಿಯಲ್ಲಿ ಧೂಳ್ ಎಬ್ಬಿಸುತ್ತಿತ್ತು. ಆದರೆ ಈಗ ಅನು ಸಿರಿಮನೆ ಏನು ಮಾಡುತ್ತಿದ್ದಾಳೆ? ಆರ್ಯ ಯಾರು ಸಂಜೀವ್ ಪಾಟೀಲ್ ಯಾರು? ಶಾರದ ದೇವಿ ಜೊತೆ ಮನೆಯಲ್ಲಿ ಇರುವುದು ಯಾರು? ಎನ್ ಅಂದ್ರೆ ಏನೂ ಅರ್ಥ ಆಗುತ್ತಿಲ್ಲ ಹೀಗಾಗಿ ಧಾರಾವಾಹಿ ನಿಲ್ಲಿಸಿ ಇಲ್ಲ ಅರ್ಥ ಆಗುವಂತೆ ಮಾಡಿ ಎಂದು ವೀಕ್ಷಕರು ಕಾಮೆಂಟ್ ಮಾಡಿ ಹೇಳುತ್ತಿದ್ದಾರೆ.

ಅನು ಸಿರಿಮನೆ ಮತ್ತು ಆರ್ಯಾ ತುರ್ತು ಕೆಲಸದ ಮೇಲೆ ವಿದೇಶ ಪ್ರಯಾಣ ಮಾಡಿರುತ್ತಾರೆ. ಸಂಬಂಧಿಕರು ಎಂದು ಹೇಳಿಕೊಂಡು ಬಂದಿರುವವರು ಶಾರದ ದೇವಿ ಕುಟುಂಬವನ್ನು ಹಾಳು ಮಾಡುವ ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಮನೆ ಬಿಟ್ಟು ಹೋಗಿರುವ ಮಾನಸಿ ಕೆಲಸದವಳ ವೇಶ ಧರಿಸಿ ಮನೆ ಎಂಟ್ರಿ ಕೊಟ್ಟು ಪ್ರತಿಯೊಂದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಕೈ ಮೀರಿ ಕೆಲಸ ನಡೆಯುತ್ತಿದೆ ಎಂದು ತಿಳಿಯುತ್ತಿದ್ದಂತೆ ಮೀರಾಳ ಸಹಾಯ ಪಡೆದುಕೊಂಡು ಅನು ಮಾತ್ರ ಬೆಂಗಳೂರಿಗೆ ಬರುವಂತೆ ಮಾಡುತ್ತಾಳೆ. ಅನು ಬರುತ್ತಿದ್ದಂತೆ ಕೆಲಸದ ಮೇಲೆ ಹರ್ಷ ಜೊತೆ ಪ್ರಯಾಣ ಮಾಡಲು ಶುರು ಮಾಡುತ್ತಾರೆ. ಈ ವೇಳೆ ಕಾರಿನ ಬ್ರೇಕ್ ಕಟ್ ಆಗಿ ಅಪಘಾತವಾಗುತ್ತದೆ. ಸಣ್ಣ ಪುಟ್ಟ ಪೆಟ್ಟಿನಿಂದ ಹರ್ಷ ಬಜಾವ್ ಆಗುತ್ತಾರೆ ಆದರೆ ಅನುಗೆ ಗಂಭೀರವಾಗಿ ಪೆಟ್ಟು ಬೀಳುತ್ತದೆ. 

ಹಳೆ ಚಾರು ವಾಪಸ್ ಬಂದ್ಲಾ? ರಾಮಾಚಾರಿ ಗ್ರಹಚಾರ ಕೆಟ್ಟಿದೆ ಎಂದ ನೆಟ್ಟಿಗರು

ತಕ್ಷಣವೇ ಸ್ಥಳೀಯರ ಸಹಾಯ ಪಡೆದು ಹತ್ತಿರದ ಆಸ್ಪತ್ರೆಗೆ ಅನು ಸಿರಿಮನೆಯನ್ನು ಕರೆದುಕೊಂಡು ಹೋಗುತ್ತಾರೆ. ಆಗ ತಿಳಿದು ಬರುತ್ತದೆ ಅನು ಸಿರಿಮನೆ ಪ್ರೆಗ್ನೆಂಟ್ ಅಲ್ಲ ಎಂದು. ಪ್ರಜ್ಞೆ ತಪ್ಪಿ ಮಲಗಿರುವ ಅನು ಸಿರಿಮನೆಗೆ ಈ ವಿವಾರ ಗೊತ್ತಿರುವುದಿಲ್ಲ...ಇಷ್ಟು ದಿನ ಅನು ಸ್ಕ್ಯಾನ್ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದರೂ ಮಗು ಇಲ್ಲ ಅಂತ ಹೇಳುತ್ತಿರುವುದ ಯಾಕೆ? ಯಾರಿಗೂ ತಿಳಿಯದ ಹಾಗೆ ಗರ್ಭಪಾತ ಮಾಡಿಸಿದ್ದಾಳಾ? ಅನು ಸಿರಿಮನೆ ಆರ್ಯ ಸರ್ ಎಂದು ಕನವರಿಸುತ್ತಿರುವುದು ಯಾಕೆ? ಏನಾಗುತ್ತಿದೆ ಎಂದು ಇಡೀ ಕುಟುಂಬದಲ್ಲಿ ಗೊಂದಲ ಸೃಷ್ಠಿಯಾಗುತ್ತದೆ. ಈ ಪ್ರೋಮೋ ವೈರಲ್ ಆಗುತ್ತಿದ್ದರಂತೆ ನೆಟ್ಟಿಗರು ಕಾಮೆಂಟ್ಸ್‌ನಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. 

ಬಿದಿರು ಬೊಂಬೆ ತರ ಕಾಣ್ತಿದ್ದೀರಿ; ರಶ್ಮಿಕಾ ಮಂದಣ್ಣ ಏನ್ ಮಾಡಿದ್ರೂ ಸಮಸ್ಯೆ ಗುರು

'ನನಗೆ ಗೊತ್ತಿತ್ತು ಹೀಗೆ ಮಾಡ್ತಾರೆ ಅಂತ. ನೆಕ್ಸಟ್‌ ಚಿಕ್ಕ ಮಗುವನ್ನು ಆಕ್ಟಿಂಗ್ ಮಾಡೋಕೆ ಎಲ್ಲಿಂದ ಕರೆದುಕೊಂಡು ಬರ್ತಾರೆ? ಅದಿಕ್ಕೆ ಆರಂಭದಲ್ಲಿ ಆ ಕ್ಯಾರೆಕ್ಟರೇ ಇಲ್ಲದೆ ಇರೋ ಹಾಗೆ ಮಾಡಿದ್ದಾರೆ' ಎಂದು ಪವಿ ಕಾಮೆಂಟ್ ಮಾಡಿದ್ದಾರೆ. 'ಅಯ್ಯೋ ದೇವರೆ...ಒಂದು ಸರಿ ಪ್ರೆಗ್ನೆಂಟ್ ಅಂತೀರಾ ಇವಾಗ ಇಲ್ಲ ಅಂತೀರಾ ಏನ್ರೋ ನಿಮ್ಮ ಗೋಳು? ಗರ್ಭನಾ ಅದು ಏನೋ ಗೋಣಿ ಚೀಲನಾ?' ಎಂದು ಅಭಿ ಜಾನು ಕಾಮೆಂಟ್ ಮಾಡಿದ್ದಾರೆ. 'ಅಯ್ಯೋ ದೇವರೇ ನಗಲಾದರೆ ಅಳಲಾರದೆ ಹಿಂಸೆ ಆಗುತ್ತಿದೆ. ಓಮ್ಮೆ ಗರ್ಭಿಣಿ ಅಂತಾರೆ ಮತ್ತೆ ಡಾಕ್ಟರೇ ಮಗು ಇಲ್ಲ ಅಂತಾರೆ. ಇದೇನು ಸೀರಿಯಲಾ ಅಥವಾ ಯಾವುದೋ ಕಿತ್ ಹೋಗಿರೋ ಡ್ರಾಮಾನಾ' ಎಂದು ಸುಜಾತಾ ಕಾಮೆಂಟ್ ಮಾಡಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios