ಅಂತರಪಟ ಆರಾಧನಾಗೆ ಖುಷಿ ಪಾತ್ರ ಕೊಡದ ನಿರ್ದೇಶಕರ ವಿರುದ್ಧ ವೀಕ್ಷಕರು ಗರಂ!

ಅಂತರಪಟ ಆರಾಧನಾಗೆ ಒಂದು ದಿನವೂ ಸಂತಸದಿಂದ ಇರುವ ಪಾತ್ರವನ್ನು ಕೊಡದ ನಿರ್ದೇಶಕನ ವಿರುದ್ಧ ಧಾರಾವಾಹಿ ವೀಕ್ಷಕರು ಗರಂ ಆಗಿದ್ದಾರೆ.

Antarapata serial director only given sad character for aradhana sat

ಅಂತರಪಟ ಆರಾಧನಾಗೆ ಒಂದು ದಿನವೂ ಸಂತಸವನ್ನೇ ಕೊಡದ ನಿರ್ದೇಶಕನ ವಿರುದ್ಧ ಧಾರಾವಾಹಿ ವೀಕ್ಷಕರು ಗರಂ ಆಗಿದ್ದಾರೆ. ಪ್ರಧಾನ್ ಕುಟುಂಬಕ್ಕೆ ಸೊಸೆಯಾಗಿ ಬಂದ ಮಧ್ಯಮ ವರ್ಗದ ಹುಡುಗಿ ಆರಾಧನಾಗೆ ಈಗ ಅತ್ತೆ ಪ್ರೀತಿ ಕೊಡುತ್ತಿದ್ದಾಳೆ. ಇದರಿಂದ ಖುಷಿ ಪಡಬೇಕು ಎನ್ನುವಷ್ಟರಲ್ಲಿ ಆರಾಧನಾಳ ಗಂಡ ಸುಶಾಂತ್ ಕುಂತಂತ್ರಕ್ಕೆ ಬಲಿಯಾಗಿ ಹೆಂಡತಿಯಿಂದ ದೂರವಾಗುತ್ತಿದ್ದಾನೆ. ಒಟ್ಟಾರೆ ಆರಾಧನಾ ಒಂದು ದಿನವೂ ಖುಷಿಯಾಗಿರುವುದು ನಿರ್ದೇಶಕರಿಗೆ ಇಷ್ಟವಿಲ್ಲ ಎಂದು ಧಾರಾವಾಹಿ ವೀಕ್ಷಕರು ಕಿಡಿಕಾರಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ಅವರ ಅರಸು ಸಿನಿಮಾದ ಶೈಲಿಯಲ್ಲಿ ಶ್ರೀಮಂತ ಕುಟುಂಬದ ಸುಶಾಂತ್ ಪ್ರಧಾನ್ ಸ್ವಂತ ದುಡಿಮೆಯಿಂದ ಹಣ ಗಳಿಸಲು ಮನೆಯಿಂದ ಹೊರಗೆ ಹೋಗಿ ಸಣ್ಣ ವಠಾರದಲ್ಲಿದ್ದು, ಆರಾಧನಾಳೊಂದಿಗೆ ಕೆಲಸ ಮಾಡಿ ಹಣ ಸಂಪಾದನೆ ಮಾಡುತ್ತಾನೆ. ದುಡಿಮೆ, ಉದ್ಯೋಗ, ಕಷ್ಟದ ಜೀವನದ ಪರಿಚಯ ಮಾಡಿಕೊಟ್ಟ ಆರಾಧನಾಳನ್ನು ಪ್ರೀತಿಸಿ ಮದುವೆ ಆಗುತ್ತಾನೆ. ಆದರೆ, ಸುಶಾಂತ್ ತಾಯಿ ಸಾವಿತ್ರಿ ಯಾವುದೇ ಕಾರಣಕ್ಕೂ ಆರಾಧನಾಳನ್ನು ಸೊಸೆ ಎಂದು ಒಪ್ಪೊಕೊಳ್ಳಲ್ಲ ಎಂದು ಹೇಳಿದ್ದರೂ, ಆಕೆಯ ಒಳ್ಳಯತನ ನೋಡಿ ಸೊಸೆ ಎಂದು ಒಪ್ಪಿಕೊಂಡು ಪ್ರೀತಿ ತೋರಿಸುತ್ತಿದ್ದಾಳೆ. ಈಗ ಅತ್ತೆಯ ಪ್ರೀತಿ ಸಿಕ್ಕಿತು ಎಂದು ಖುಷಿ ಪಡುತ್ತಿರುವಾಗಲೇ ಗಂಡ ಸುಶಾಂತ್ ಪ್ರಧಾನ್ ಆಕೆಯಿಂದ ದೂರವಾಗುತ್ತಿದ್ದಾನೆ.

ಶ್ರಾವಣ ಮಾಸದಲ್ಲಿ ನಟಿ ನಿವೇದಿತಾ ಗೌಡ ಅಕೌಂಟ್ ಅನ್‌ಫಾಲೋ ಮಾಡಿದ ಅಭಿಮಾನಿಗಳು!

ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಆರಾಧನಾ ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು, 2ನೇ ತಂದೆಯ ಆಶ್ರಯದಲ್ಲಿ ಕಿರಿಕುಳ ಅನುಭವಿಸಿಕೊಂಡೇ ಕಣ್ಣೀರಿನಲ್ಲಿ ಜೀವನ ಸವೆಸಿದ್ದಾಳೆ. ಆದರೆ, ತಾನು ಸ್ವಂತ ಉದ್ಯಮವನ್ನು ಕಟ್ಟಿ ಅದರ ಮುಖ್ಯಸ್ಥರಾಗಿ ಆಡಳಿತ ಮಾಡಬೇಕು ಎನ್ನುವ ದೊಡ್ಡ ಕನಸನ್ನು ಇಟ್ಟುಕೊಂಡು ಬೆಳೆದಿದ್ದಾಳೆ. ಇದೇ ವೇಳೆ ಉದ್ಯೋಗ ಹುಡುಕುತ್ತಿದ್ದ ಸುಶಾಂತ್ ಪ್ರಧಾನ್ ಆರಾಧನಾಗೆ ಸಿಕ್ಕಿದ್ದಾನೆ. ಇಬ್ಬರೂ ಹೊಸ ಹೊಸ ಆಲೋಚನೆಗಳು, ದೊಡ್ಡ ಕಂಪನಿ ಕಟ್ಟುವ ಗುರಿಯನ್ನು ಹೊಂದಿದ್ದು, ಒಬ್ಬರಿಗೊಬ್ಬರು ಹೆಗಲಾಗಿ ಕಂಪನಿ ಕಟ್ಟಲು ಮುಂದಾಗುತ್ತಾರೆ.

ಇನ್ನೇನು ದೊಡ್ಡ ಕಂಪನಿ ಸ್ಥಾಪಿಸಬೇಕು ಎನ್ನುವಷ್ಟರಲ್ಲೇ ಸುಶಾಂತ್ ಶ್ರೀಮಂತರ ಮನೆಯ ಹುಡುಗ ಎನ್ನುವುದು ತಿಳಿಯುತ್ತದೆ. ಅಷ್ಟರಲ್ಲಾಗಲೇ ಸುಶಾಂತ್ ಮತ್ತು ಆರಾಧನಾ ಸ್ನೇಹ ಪ್ರೀತಿಯಾಗಿ ಪರಿವರ್ತನೆ ಆಗಿತ್ತು. ಇಬ್ಬರೂ ಪ್ರೀತಿ ಹೇಳಿಕೊಳ್ಳದೇ ಒದ್ದಾಡುವಾಗ ಸುಶಾಂತ್ ತಾನು ಸ್ವಂತವಾಗಿ ದುಡಿದು ಸಂಪಾದನೆ ಮಾಡಿದ ಹಣ ತೆಗೆದುಕೊಂಡು ತನ್ನ ಮನೆಗೆ ಹೋಗುತ್ತಾನೆ. ನಂತರ, ಇಬ್ಬರೂ ಕಂಪನಿ ಕೆಲಸಕ್ಕೆಂದು ಹೋದಾಗ ಒಂದೇ ರೂಮಿನಲ್ಲಿ ಸಿಕ್ಕಿಹಾಕಿಕೊಂಡು ಪರಿಸ್ಥಿತಿಯ ಕೈಗೊಂಬೆಯಾಗಿ ತಾನು ಪ್ರೀತಿಸಿದ ಆರಾಧನಾಳನ್ನು ವಠಾರದ ಜನರ ಮುಂದೆ ಮದುವೆ ಆಗುತ್ತಾನೆ.

ಆಗರ್ಭ ಶ್ರೀಮಂತರ ಸುಶಾಂತ್‌ನ ಹೆಂಡತಿಯಾಗಿ ಪ್ರಧಾನ್ ಕುಟುಂಬ ಸೇರಿದ ಆರಾಧನಾಗೆ ಅತ್ತೆ ಸಾವಿತ್ರಿ ನಿನ್ನನ್ನು ಸೊಸೆ ಎಂದು ಒಪ್ಪಿಕೊಳ್ಳಲ್ಲ ಎಂದು ಶಪಥ ಮಾಡುತ್ತಾಳೆ. ಇದಾದ ನಂತರ ಸೊಸೆಯ ಒಳ್ಲೆಯತನಕ್ಕೆ ಮರುಳಾಗಿ ಈಗ ಪ್ರೀತಿ ತೋರಿಸಲು ಮುಂದಾಗಿದ್ದಾಳೆ. ಆದರೆ, ಈಗ ಅತ್ತೆ ಪ್ರೀತಿ ಪಡೆದ ಖುಷಿ ಅನುಭವಿಸಲೂ ಅವಕಾಶ ಕೊಡದ ನಿರ್ದೇಶಕರು ಆಕೆಯ ಗಂಡ ಸುಶಾಂತ್‌ನಲ್ಲಿ ದೂರ ಮಾಡಿ ದುಃಖದ ಪಾತ್ರಗಳನ್ನು ನೀಡುತ್ತಿದ್ದಾರೆ. ಒಟ್ಟಾರೆ ಆರಾಧನಾ ಅಳುಮುಂಜಿ ಪಾತ್ರಗಳನ್ನೇ ಮಾಡಿಕೊಂಡು ಇರಬೇಕಾ ಎಂದು ಧಾರಾವಾಹಿ ವೀಕ್ಷಕರಿ ನಿರ್ದೇಶಕರಿಗೆ ಪ್ರಶ್ನೆ ಮಾಡಿದ್ದಾರೆ.

ನಿವೇದಿತಾ ಗೌಡ ಅತ್ಯಂತ ಚಿಕ್ಕ ಉಡುಪು ಇದೇನಾ.? ನೀನು ಬಾರ್ಬಿಡಾಲ್ ಅಲ್ಲ, ಪಾತರಗಿತ್ತಿ ಎಂದ ಫ್ಯಾನ್ಸ್!

ಸುಶಾಂತ್ ಜೀವನದಲ್ಲಿ ಬಿರುಗಾಳಿಯಾಗಿ ಬಂದ ರೇಷ್ಮಾ: ಶ್ರೀಮಂತ ಕುಟುಂಬದ ಸುಶಾಂತ್‌ನಿಂದ ಹಣ ಪೀಕುವ ಉದ್ದೇಶದಿಂದ ಪ್ರೀತಿಸುವ ನಾಟಕವಾಡುತ್ತಿದ್ದ ರೇಷ್ಮಾ, ಚಿನ್ನದ ಮೊಟ್ಟೆ ಇಡುವ ಕೋಳಿ ಕೈತಪ್ಪಿ ಹೋಯಿತಲ್ಲಾ ಎಂದು ಹತಾಶಳಾಗಿದ್ದಾಳೆ. ನಂತರ ಕುತಂತ್ರ ಹಾಗೂ ಬ್ಲಾಕ್‌ಮೇಲ್ ಮಾಡುತ್ತಾ ಸುಶಾಂತನನ್ನು ತಾನಿದ್ದ ಜಾಗಕ್ಕೆ ಕರೆಸಿಕೊಂಡು ಮಲಗಿದ್ದಾಗಿ, ಅವನಿಂದ ಗರ್ಭಿಣಿ ಆಗಿದ್ದಾಗಿ ಹೇಳಿದ್ದಾಳೆ. ಈಗ ಸುಶಾಂತ ತನ್ನನ್ನು ಗರ್ಭಿಣಿ ಮಾಡಿದ್ದಾಗಿ ಸುಳ್ಳು ಹೇಳಿಕೊಂಡು ಪ್ರಧಾನ್ ಕುಟುಂಬದ ಮನೆ ಸೇರಿಕೊಂಡಿದ್ದಾಳೆ.

Latest Videos
Follow Us:
Download App:
  • android
  • ios