ಹುಲಿ ಉಗುರು ಕೇಸ್​ನಲ್ಲಿ ಜೈಲುಪಾಲಾಗಿದ್ದ ವರ್ತೂರು ಸಂತೋಷ್​ಗೆ ಮತ್ತೆ ಆಘಾತವಾಗಿದೆ. ಬಿಗ್​ಬಾಸ್ ಮನೆ​ಗೆ ಕಾಲಿಡ್ತಿದ್ದಂತೆಯೇ ಸ್ಪರ್ಧಿಗಳು ಶಾಕ್​ ನೀಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?   

ಹುಲಿ ಉಗುರು ಪ್ರಕರಣದಲ್ಲಿ, ಬಿಗ್​ಬಾಸ್​ (Bigg Boss) ಮನೆಯಿಂದಲೇ ನೇರವಾಗಿ ಬಂಧಿಸಲ್ಪಟ್ಟಿದ್ದ ವರ್ತೂರು ಸಂತೋಷ್​ ಅವರಿಗೆ ಆಗ ಆ ಶಾಕ್​ ಉಂಟಾಗಿದ್ದರೆ, ಈಗ ಬಿಗ್​ಬಾಸ್​ ಮನೆಯೊಳಗೇ ಇನ್ನೊಂದು ಶಾಕ್​ ಎದುರಾಗಿದೆ. ವರ್ತೂರು ಸಂತೋಷ್ ಹುಲಿ ಉಗುರು ಕೇಸ್‌ನಲ್ಲಿ ಹಲವು ತಿರುವುಗಳು ಸಂಭವಿಸಿದ್ದು, ಅವರು ಜೈಲಿಗೆ ಹೋದಾಗ, ಅವರ ಬಿಗ್​ಬಾಸ್​ ಪಯಣ ಅಲ್ಲಿಗೇ ಮುಗಿಯಿತು ಎಂದುಕೊಂಡವರೇ ಬಹುತೇಕ ಮಂದಿ. ನಂತರ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ವಾಪಸ್​ ಬಂದ ಮೇಲೆ 'ಅವರು ಮತ್ತೆ ಬಿಗ್ ಬಾಸ್ ಮನೆಗೆ ಹೋಗುತ್ತಾರೆಯೇ?' ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಆದರೆ ನಿನ್ನೆ ಎಲ್ಲರ ಪ್ರಶ್ನೆಗಳಿಗೆ ಸಿಕ್ಕಿದ್ದು, ಅವರು ಪುನಃ ಬಿಗ್​ಬಾಸ್​ ಮನೆಯೊಳಕ್ಕೆ ಪ್ರವೇಶ ಪಡೆದರು. ಅವರು ಬಿಗ್​ಬಾಸ್​ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗೆ ಎಲ್ಲರಿಗೂ ಉತ್ತರವೇನೋ ಸಿಕ್ಕಿತು. ಆದರೆ ಅವರು ಎಂಟ್ರಿ ಕೊಡುತ್ತಿದ್ದಂತೆಯೇ ಮತ್ತೆ ಅವರು ಹೊರಕ್ಕೆ ಹೋಗುವ ಟೈಂ ಬಂದೇ ಬಿಡ್ತಾ ಎನ್ನುವ ಸಂದೇಹ ಶುರುವಾಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಸಂತೋಷ್​ ವಾಪಸ್​ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಾಗ ಅಲ್ಲಿದ್ದ ಸ್ಪರ್ಧಿಗಳು ಖುಷಿಯಿಂದ ಜೊತೆಗೆ ಅಚ್ಚರಿಯಿಂದ ಬರ ಮಾಡಿಕೊಂಡಿದ್ದೇನೋ ನಿಜ. ಆದರೆ ಈಗ ಎಲ್ಲರೂ ಸಂತೋಷ್​ ಮೇಲೆ ಮುಗಿಬಿದ್ದಿದ್ದು, ಅವರನ್ನು ನಾಮಿನೇಟ್​ ಮಾಡಬೇಕು ಎನ್ನುತ್ತಿದ್ದಾರೆ. ಇದರ ಪ್ರೊಮೋ ಬಿಡುಗಡೆಯಾಗಿದೆ. ಇದರಲ್ಲಿ ಸಂತೋಷ್​ ಹೊರಕ್ಕೆ ಹೋಗಿರುವುದಕ್ಕೆ ಸಂಬಂಧಿಸಿದಂತೆ ಸ್ಪರ್ಧಿಗಳು ಮೊದಲಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ನಂತರ ನಾಮಿನೇಷನ್ ಪ್ರಕ್ರಿಯೆ ಶುರುವಾದಾಗ ಎಲ್ಲರೂ ಸಂತೋಷ್​ ಹೆಸರೇ ಹೇಳಿದ್ದಾರೆ.

ನಾನು ನಂದಿನಿ ಖ್ಯಾತಿಯ ವಿಕ್ಕಿ 'ಬಿಗ್​ಬಾಸ್​'​ ಮನೆಯೊಳಕ್ಕೆ! ಆದ್ರೆ ಇಲ್ಲಿದೆ ಬಹು ದೊಡ್ಡ ಟ್ವಿಸ್ಟ್​...

ಇದಕ್ಕೆ ಸ್ಪರ್ಧಿಗಳು ಕಾರಣವನ್ನೂ ಕೊಟ್ಟಿದ್ದಾರೆ. ಅದೇನೆಂದರೆ. ಸಂತೋಷ್​ ವಾರಗಟ್ಟಲೆ ಏನೂ ಮಾಡಿಯೇ ಇಲ್ಲ. ಆದ್ದರಿಂದ ಅವರೇ ನಾಮಿನೇಟ್​ ಆಗಬೇಕು ಎಂದಿದ್ದಾರೆ. ಇದನ್ನು ಕೇಳಿ ಸಂತೋಷ್​ ಅವರಿಗೆ ನೋವು ಉಂಟಾಗಿರುವುದು ಮುಖದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ನಗು ಮುಖವನ್ನು ಇಟ್ಟುಕೊಂಡು ಬೇಸರ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ನೋಡಬಹುದು. ಈಗ ಬಿಗ್​ಬಾಸ್​ ಮನೆಯಿಂದ ಸಂತೋಷ್​ ಮತ್ತೆ ಹೊರಕ್ಕೆ ಬರುತ್ತಾರಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ.

ಈಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಸಂತೋಷ್​ ಬಿಗ್​ಬಾಸ್​ ಮನೆಯೊಳಕ್ಕೆ ಕಾಲಿಟ್ಟಾಗ ಮೊದಲು ಅವರನ್ನು ವಿನಯ್ ಗೌಡ ನೋಡಿ, ಮನೆ ಮಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಎಲ್ಲರೂ ಅಚ್ಚರಿಯಿಂದ ಹಾಗೂ ಖುಷಿಯಿಂದಲೇ ಸಂತೋಷ್​ ಅವರನ್ನು ಬರಮಾಡಿಕೊಂಡಿದ್ದಾರೆ. ರಕ್ಷಕ್ ಸೇರಿದಂತೆ ಮನೆಯ ಇತರ ಸದಸ್ಯರು ತಬ್ಬಿಕೊಂಡು ವರ್ತೂರು ಸಂತೋಷ್ ಅವರಿಗೆ ಸ್ವಾಗತಿಸಿದ್ದಾರೆ. ನಂತರ ಕೆಲವರು, ಮನೆಯಿಂದ ಹೊರಗಡೆ ಹೋಗಿದ್ಯಾಕೆ? ಬಿಜಿನೆಸ್ ಗಾಗಿಯೇ ಹೋಗಿದ್ದಾ? ಇಲ್ಲ ಹೆಲ್ತ್ ಪ್ರಾಬ್ಲಂ ಆಗಿತ್ತಾ, ಚಿನ್ನ ತೆಗೆದುಕೊಂಡು ಹೋದ್ರಾ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಬಳಿಕ ನಾಮಿನೇಷನ್​ ಪ್ರಕ್ರಿಯೆಯಲ್ಲಿ ಎಲ್ಲರೂ ಸಂತೋಷ್​ ಹೆಸರು ಹೇಳಿದ್ದಾರೆ.

BIGG BOSS 17: ನಟಿ ಅಂಕಿತಾ ಲೋಖಂಡೆಗೆ ಪತಿಯಿಂದ ಇನ್​ಸಲ್ಟ್​- ಸಲ್ಮಾನ್​ ಜೊತೆ ಪ್ರೇಕ್ಷಕರೂ ಗರಂ

View post on Instagram