ಸಿನಿಮಾ ನೋಡೋವಾಗ ಭಯ ಆಗ್ದೆ ಇರ್ಬಹುದು, ಒಂಟಿಯಾಗಿದ್ದಾಗ ಸಿನಿಮಾ ನೆನಪಾದ್ರೆ ಬೆವರು ಬರ್ಬೇಕು. ಆಗ್ಲೇ ಹಾರರ್ ಸಿನಿಮಾ, ಹಾರರ್ ಅನ್ನಿಸಿಕೊಳ್ಳೋದು. ಈಗ ನಾವು ಹೇಳೋಕೆ ಹೊರಟಿರೋ ಸಿನಿಮಾ ಆಮೇಲೆ ಕಾಡೋದಿರಲಿ, ಪೂರ್ತಿ ನೋಡೋದೇ ಕಷ್ಟ.
ಮಧ್ಯರಾತ್ರಿ ಇಡೀ ಊರು ಮಲಗಿದ್ದಾಗ, ಒಬ್ಬರೇ ಕತ್ತಲೆಯಲ್ಲಿ ಹಾರರ್ ಸಿನಿಮಾ (Horror movie) ನೋಡೋ ಮಜವೇ ಬೇರೆ. ಗುಂಡಿಗೆ ಗಟ್ಟಿಯಿರುವ ವ್ಯಕ್ತಿಗಳು ಮಾತ್ರ ಹಾರರ್ ಸಿನಿಮಾ ನೋಡಿ ಎಂಜಾಯ್ ಮಾಡ್ತಾರೆ. ಅದೆಷ್ಟೋ ದೆವ್ವ – ಭೂತಗಳ ಸಿನಿಮಾವನ್ನು ನಾನೊಬ್ನೇ ಕುಳಿತು ನೋಡಿದ್ದೇನೆ. ಏನೂ ಭಯ ಇಲ್ಲ, ನಂದು ಗಟ್ಟಿ ಹಾರ್ಟ್ ಅನ್ನೋರಿಗೆ ಇಲ್ಲೊಂದು ಚಾಲೆಂಜ್ ಇದೆ. ಈವರೆಗೂ ಅತಿ ಕಡಿಮೆ ಜನ ನೋಡಿರೋ, ಅತ್ಯಂತ ಭಯಾನಕ ಸಿನಿಮಾ ಬಗ್ಗೆ ನಿಮಗೆ ಗೊತ್ತಾ? ನಿಜ ಕಥೆಯೇ ಇಲ್ಲಿ ಸಿನಿಮಾ ಆಗಿದೆ. ಆ ಸಿನಿಮಾ ಯಾವ್ದು, ಅದ್ರ ಕಥೆ ಏನು? ಯಾವ ಒಟಿಟಿಯಲ್ಲಿ ಲಭ್ಯ ಇದೆ ಎಲ್ಲ ಮಾಹಿತಿ ಇಲ್ಲಿದೆ.
ವಿಶ್ವದ ಅತ್ಯಂತ ಭಯಾನಕ ಸಿನಿಮಾ ಇದು :
ವಿಶ್ವದಾದ್ಯಂತ ಪ್ರತಿ ವರ್ಷ ಅನೇಕ ಹಾರರ್ ಸಿನಿಮಾಗಳು ತೆರೆಗೆ ಬರುತ್ವೆ. ಹಾರರ್ ಸಿನಿಮಾ ಪ್ರೇಮಿಗಳು ಇದನ್ನು ಥಿಯೇಟರ್ ನಲ್ಲಿಯೇ ನೋಡಿ ಬರ್ತಾರೆ. ಇನ್ನು ಸ್ವಲ್ಪ ಪುಕ್ಕಲು ಅನ್ನೋರು ಮನೆಯಲ್ಲಿ ಓಡಿಸ್ತಾ ಓಡಿಸ್ತಾ ಸಿನಿಮಾ ನೋಡಿರ್ತಾರೆ. ಪೂರ್ತಿ ಪುಕ್ಕಲು ಮಂದಿ ಸಹವಾಸವೇ ಬೇಡ ಅಂತ ಹಾರರ್ ಸಿನಿಮಾ ಬಗ್ಗೆ ಸುಳಿಯೋದೂ ಇಲ್ಲ. ನನಗೆ ಹಾರರ್ ಓಕೆ ಅನ್ನೋರು ಮಾತ್ರ ಈ ಸಿನಿಮಾ ನೋಡಿ. ನೆಟ್ಫ್ಲಿಕ್ಸ್ ಹಾರರ್ ಸಿನಿಮಾ ಲೀಸ್ಟ್ ನಲ್ಲಿ ನಿಮಗೆ ಈ ಸಿನಿಮಾ ಸಿಗುತ್ತೆ. ನೆಟ್ಫ್ಲಿಕ್ಸ್ ಪ್ರಕಾರ ಈ ಸಿನಿಮಾವನ್ನು 100 ರಲ್ಲಿ ಒಬ್ಬರು ಮಾತ್ರ ಪೂರ್ತಿ ನೋಡಿರೋಕೆ ಸಾಧ್ಯ. ಸ್ಪ್ಯಾನಿಷ್ ಈ ಸಿನಿಮಾ ಹೆಸರು ವೆರೋನಿಕಾ (Veronica). 2017ರಲ್ಲಿ ಸಿನಿಮಾ ತೆರೆಗೆ ಬಂದಿತ್ತು. 2018ರಿಂದಲೇ ನೆಟ್ ಫ್ಲಿಕ್ಸ್ ನಲ್ಲಿ ಸಿನಿಮಾ ಲಭ್ಯ ಇದೆ. ಈ ಚಿತ್ರವನ್ನು ಪ್ಯಾಕೊ ಪ್ಲಾಜಾ ಬರೆದು ನಿರ್ದೇಶಿಸಿದ್ದಾರೆ. ಫರ್ನಾಂಡೊ ನವರೊ ಮತ್ತು ಕೋರಲ್ ಕ್ರೂಜ್ ಸಹ ಬರಹಗಾರರಾಗಿದ್ದಾರೆ. ಇದರಲ್ಲಿ ಸಾಂಡ್ರಾ ಎಸ್ಕಾಸಿನಾ, ಬ್ರೂನಾ ಗೊನ್ಜಾಲೆಜ್ ಮತ್ತು ಕ್ಲೌಡಿಯಾ ಪ್ಲೇಸರ್ ನಟಿಸಿದ್ದಾರೆ. ಈ ಚಿತ್ರ 10 ರಲ್ಲಿ 6.2 ಸ್ಟಾರ್ ರೇಟಿಂಗ್ ಹೊಂದಿದೆ.
ವೇದಿಕೆ ಮೇಲೆ ಕುಸಿದು ಬಿದ್ದ ಗಂಗ್ನಮ್ ನಟಿ, 1 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿದ್ದೇ ಮುಳುವಾಯ್ತಾ?
ಇದು ನಿಜ ಕಥೆ :
ಈ ಸಿನಿಮಾ ಪೂರ್ತಿಯಾಗಿ ನೋಡೋಕೇ ಧೈರ್ಯ ಬೇಕು. ಅನೇಕ ದಿನಗಳ ಕಾಲ ರಾತ್ರಿ ನೀವು ನಿದ್ದೆ ಬಿಡೋದು ಗ್ಯಾರಂಟಿ. ಅಷ್ಟು ಭಯಾನಕವಾಗಿರುವ ಈ ಸಿನಿಮಾ ನಿಜ ಕಥೆಯನ್ನು ಆಧರಿಸಿದೆ. 1991ರಲ್ಲಿ ನಡೆದ ನೈಜ ಘಟನೆಯಾಗಿದೆ. ಸ್ಪೇನ್ನ ವ್ಯಾಲೆಕಾಸ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಪಾಲಕರ ಜೊತೆ ವಾಸವಾಗಿದ್ದ ಮ್ಯಾಡ್ರಿಡ್ ನ 18 ವರ್ಷದ ಎಸ್ಟೆಫಾನಿಯಾ ಗುಟೈರೆಜ್ ಲಾಜಾರೊ (Estefania Gutierrez Lazaro) 18 ವರ್ಷದವರೆಗೆ ಸರಿಯಾಗಿಯೇ ಇದ್ದಳು. ಇದ್ದಕ್ಕಿದ್ದಂತೆ ಅವಳ ಜೀವನ ಬದಲಾಯ್ತು.
ನಟಿ ರಾಶಿಯನ್ನು ಅಸಭ್ಯವಾಗಿ ತೋರಿಸಿದ ನಿರ್ದೇಶಕನಿಗೆ
ವಿಚಿತ್ರವಾಗಿ ಆಡ್ತಿದ್ದ ಆಕೆ ನಂತ್ರ ಸಾವನ್ನಪ್ಪುತ್ತಾಳೆ. ಸತ್ತ ಮೇಲೆ ಮನೆಯಲ್ಲಿ ಮತ್ತಷ್ಟು ಭಯಾನಕ ಘಟನೆ ನಡೆಯುತ್ತದೆ. ಅವಳು ಸತ್ತ ಮೇಲೆ, ದೆವ್ವದ ಜೊತೆ ಅವಳು ಮಾತನಾಡ್ತಿದ್ದಳು, ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ ಸ್ನೇಹಿತನ ಜೊತೆ ಮಾತನಾಡ್ತಿದ್ದಳು ಎಂಬ ವಿಷ್ಯ ಮನೆಯವರಿಗೆ ತಿಳಿಯುತ್ತದೆ. ಅಷ್ಟೇ ಅಲ್ಲ ಅವಳ ರೂಮಿನಲ್ಲಿ ನಡೆಯುವ ಘಟನೆ, ಆಕೆಯ ಕೂಗು ಮನೆಯವರನ್ನು ಮಾತ್ರವಲ್ಲ ಇದನ್ನು ಪತ್ತೆ ಮಾಡಲು ಬಂದ ಪೊಲೀಸರ ಬೆವರಿಳಿಸುತ್ತದೆ. ಸಿನಿಮಾದಲ್ಲಿ ಕತ್ತಲ ರಾತ್ರಿಯಲ್ಲಿ, ಎಸ್ಟೆಫಾನಿಯಾ ರೂಮಿನಲ್ಲಿ ನಡೆಯುವ ಘಟನೆಯನ್ನು ಕ್ಯಾಮರಾದಲ್ಲಿ ಭಯಾನಕವಾಗಿ ಸೆರೆ ಹಿಡಿಯಲಾಗಿದೆ.
