Asianet Suvarna News Asianet Suvarna News

ದಿವ್ಯಾ ವಸಂತ 'ಗೌರಿ-ಗಣೇಶ' ಹಬ್ಬಕ್ಕೆ ವಿಶ್ ಮಾಡಿ, ವೀಡಿಯೋದಲ್ಲಿ ಹೇಳಿದ್ದೇನು ನೋಡಿ!

ನೀವೂ ಒಳ್ಳೇದನ್ನೇ ಬಯಸಿ, ಎಲ್ಲವೂ ಒಳ್ಳೇದೇ ಆಗುತ್ತೆ.. ಹಾಗೇ, ಕಾಮೆಂಟ್ ಬಾಕ್ಸ್‌ನಲ್ಲಿ ಕಾಮೆಂಟ್ ಮಾಡ್ತಾ ಇರೋ ಕೆಲವೊಂದಿಷ್ಟು ವಿಕೃತ ಮನಸ್ಥಿತಿಗಳಿಗೆ ನಾನು ಹೇಳೋದು ಏನು ಅಂತಂದ್ರೆ.. ನೀವು ಮಾಡ್ತಾ ಇರೋ ಕಾಮೆಂಟ್‌ಗಳಿಂದ ಬೇರೆಯವ್ರಿಗೆ..

Anchor Divya Vasantha post for Gowri Ganesha Festival in social media gets viral srb
Author
First Published Sep 6, 2024, 4:38 PM IST | Last Updated Sep 6, 2024, 4:39 PM IST

ನಿರೂಪಕಿಯಾಗಿ ಹೆಸರು ಮಾಡಿರುವ ದಿವ್ಯಾ ವಸಂತ, ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ದಿವ್ಯಾ ವಸಂತ (Divya Vasantha) 'ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು. ನಾವು ಇವತ್ತು ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಮತ್ತು ಗೌರಿ ಹಬ್ಬ ಎರಡನ್ನೂ ಆಚರಣೆ ಮಾಡ್ತಾ ಇದೀವಿ. ಎಲ್ಲರಿಗೂ ಒಳ್ಳೇದು ಆಗ್ಲಿ.. 

ನೀವೂ ಒಳ್ಳೇದನ್ನೇ ಬಯಸಿ, ಎಲ್ಲವೂ ಒಳ್ಳೇದೇ ಆಗುತ್ತೆ.. ಹಾಗೇ, ಕಾಮೆಂಟ್ ಬಾಕ್ಸ್‌ನಲ್ಲಿ ಕಾಮೆಂಟ್ ಮಾಡ್ತಾ ಇರೋ ಕೆಲವೊಂದಿಷ್ಟು ವಿಕೃತ ಮನಸ್ಥಿತಿಗಳಿಗೆ ನಾನು ಹೇಳೋದು ಏನು ಅಂತಂದ್ರೆ.. ನೀವು ಮಾಡ್ತಾ ಇರೋ ಕಾಮೆಂಟ್‌ಗಳಿಂದ ಬೇರೆಯವ್ರಿಗೆ ಎಷ್ಟು ಹರ್ಟ್ ಆಗುತ್ತೆ ಅನ್ನೋದನ್ನ ನೀವು ಯೋಚ್ನೆ ಮಾಡಿ.. ನೀವು ಆಡ್ತಾ ಇರೋ ಮಾತುಗಳನ್ನ, ಹಾಕ್ತಾ ಇರೋ ಕಾಮೆಂಟ್‌ಗಳನ್ನ ನೀವು ಬೇಗ ಮರೆತೋಗ್ಬಿಡಬಹುದು.. 

ಶ್ರೀದೇವಿ ಮೇಲಿದ್ದ ಭಯಂಕರ ಆರೋಪವೇನು? ಅದಕ್ಕೆ ಕಾರಣವಾದ ಅಂಶ ತಿಳಿದರೆ ಶಾಕ್ ಗ್ಯಾರಂಟಿ!

ಬಟ್, ಅದನ್ನ ನೋಡ್ತಿರೋರು ನಾವು, ಕೇಳ್ತಾ ಇರೋರು ನಾವು, ಅದ್ರಿಂದ ನಮಗೆ ಎಷ್ಟು ಹರ್ಟ್ ಆಗುತ್ತೆ ನಮಗಷ್ಟೇ ಗೊತ್ತು.. ಏನೂ ಗೊತ್ತಿಲ್ದೇ ಮಾತಾಡೋದು ಸರಿಯಲ್ಲ, ಅದು ತಪ್ಪಾಗುತ್ತೆ. ತಿಳ್ಕೊಂಡು ಮಾತಾಡಿ ಅಂತ ಹೇಳ್ತಾ, ಎಲ್ಲರಿಗೂ ಮತ್ತೊಮ್ಮೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು. ಒಳ್ಳೇದಾಗ್ಲಿ.. 'ಎಂದು ಹೇಳಿ ವಿಡಿಯೋ ಪೋಸ್ಟ್ ಮಾಡಿದ್ದಾರೆ ದಿವ್ಯಾ ವಸಂತ್. 

ಕೆಲವು ತಿಂಗಳುಗಳ ಹಿಂದೆ ಈ ನಿರೂಪಕಿ ದಿವ್ಯಾ ವಸಂತ್ ವಿರುದ್ಧ ಬ್ಲಾಕ್‌ಮೇಲ್ ಮಾಡಿ ಹಣ ಲಪಟಾಯಿಸಿದ್ದ ಆರೋಪ ಕೇಳಿ ಬಂದಿತ್ತು. ಈಗ ಹಳೆಯ ಸುದ್ದಿ ಆಗಿರುವ ಈ ಸಂಗತಿ ಅಂದು ಸಾಕಷ್ಟು ಹಲ್‌ಚಲ್ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಆಡಿರುವ ಮಾತುಗಳು ತುಂಬಾ ಮುಖ್ಯ ಎನಿಸುತ್ತಿವೆ. ಹಬ್ಬದ ಸಮಯದಲ್ಲಿ ಶುಭ ಹಾರೈಸುವ ಅವಕಾಶವನ್ನು ತಮ್ಮ ವೈಯಕ್ತಿಕ ಪರಿಸ್ಥಿತಿಗೂ ಅನ್ವಯಿಸಿಕೊಂಡು ಅವರು ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ. ಅವರ ಉದ್ದೇಶಕ್ಕೆ ಪೂರಕವಾಗಿ ಅದನ್ನು ಸೋಷಿಯಲ್ ಮೀಡಿಯಾ ಬಳಕೆದಾರರು ಗಮನಿಸಿ ಲೈಕ್ಸ್ ಹಾಕುತ್ತಿದ್ದಾರೆ.

ಸ್ಟಾರ್ ನಟಿಯಾಗಿದ್ದ ಸೌಂದರ್ಯ ಚುನಾವಣೆ ಪ್ರಚಾರಕ್ಕೆ ಹೊರಟು ಸಾವು ಕಂಡಿದ್ದು ಯಾಕೆ?

ಅವರ ಅಭಿಮಾನಿಗಳು ಈ ವಿಡೊಯೋ ನೋಡಿದ ಬಳಿಕ ಯಾವ ರೀತಿಯಲ್ಲಿ ಕಾಮೆಂಟ್ ಮಾಡಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದಾರೆ ಎಂಬುದನ್ನು ಮತ್ತೆ ಹೊಸದಾಗಿ ಹೇಳಬೇಕಿಲ್ಲ, ಒಟ್ಟಿನಲ್ಲಿ, ಆಂಕರ್ ದಿವ್ಯಾ ವಸಂತ್ ಇನ್‌ಸ್ಟಾಗ್ರಾಂ ಅಕೌಂಟ್ ಮೂಲಕ ಮತ್ತೆ ಆಕ್ವಿವ್ ಆಗಿದ್ದು, ಆಗಾಗ ಹಾಕುವ ಪೋಸ್ಟ್‌ಗಳ ಮೂಲಕ ಹೊರಜಗತ್ತಿನೊಂದಿಗೆ ಸಂಪರ್ಕಕ್ಕೆ ತೆರೆದುಕೊಂಡಿದ್ದಾರೆ ಎನ್ನಬಹುದು. ಅವರ ಪೋಸ್ಟ್‌ಗೆ ಹಲವು ಲೈಕ್ಸ್‌ಗಳು ಬಂದಿರುವುದನ್ನು ಕಾಣಬಹುದು!

 

 

Latest Videos
Follow Us:
Download App:
  • android
  • ios