ಪುಟ್ಟ ಮಕ್ಕಳಿಂದ ಹಿರಿಯರಿಗೆ ಸೂಪರ್ ಫೇವರಿಟ್‌, ಅಚ್ಚ ಕನ್ನಡದ ನಿರೂಪಕಿ ಅನುಶ್ರೀ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ನಮ್ಮೆಲ್ಲರ ಮನೆ ಮಗಳಾಗಿರುವ ಅನು ಇದೇ ಜನವರಿ 25ರಂದು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸುಮಾರು 10 ವರ್ಷಗಳಿಂದ ಹಿರಿಯರೊಂದಿಗೆ ಆಚರಿಸಿಕೊಳ್ಳುತ್ತಿರುವ ಈ ವಿಡಿಯೋವನ್ನು ಇಂದು ಅಪ್ಲೋಡ್ ಮಾಡಿದ್ದಾರೆ.

ಡಿಕೆಡಿ ವೇದಿಕೆಯಲ್ಲಿ ಅನುಶ್ರೀ ಬರ್ತಡೇ; ಇವನನ್ನು ನೋಡುತ್ತಿದ್ದಂತೆ ಮುದ್ದಾಡಿದ ಚೆಲುವೆ! 

ಅನುಶ್ರೀ ಪೋಸ್ಟ್:

'ಮುತ್ತಿನಂತ ಮಗಳಾಗಿ ಹೆತ್ತವರ ಸಿರಿಯಾಗಿ ದೇವರಿತ್ತ ವರವಾಗಿ ನೀ ಬಾಳಲು ಅನುಶ್ರೀ ನೀ ಬಾಳಲು ಇದಕ್ಕಿಂತ ಇನ್ನೊಂದು ಆಶೀರ್ವಾದ ಬೇಕಾ ?? ಕಳೆದ ಹತ್ತು ವರ್ಷಗಳಿಂದ ನನ್ನ ಜನುಮದಿನವನ್ನು ಈ ಹಿರಿಯರೊಂದಿಗೆ ಆಚರಿಸುವ ಅವಕಾಶ ಹಾಗೂ ಭಾಗ್ಯ ಕೊಟ್ಟ yuva bengaluru ತಂಡಕ್ಕೆ ಪ್ರಜ್ವಲ್ ಗೆ ನನ್ನ ಧನ್ಯವಾದಗಳು #hiteshimahilamaneyangala.ನನ್ನ ಕೇಕ್ ಹಂಚಿಕೊಂಡಿರುವ, ನೀವು ಮಾಡಿ ನಿಜವಾದ ಆನಂದವನ್ನು ಸವಿಯಿರಿ#sharemycake' ಎಂದು ಅನು ಬರೆದುಕೊಂಡಿದ್ದಾರೆ.

ಈ ವರ್ಷ ಅನುಶ್ರೀ ಹುಟ್ಟುಹಬ್ಬವನ್ನು ಇನ್ನೆಷ್ಟು ಸ್ಪೆಷಲ್ ಮಾಡಿದ್ದು ಜೀ ಕನ್ನಡ ಡಿಕೆಡಿ ತಂಡ ಎನ್ನಬಹುದು. ವಿಶೇಷವಾದ ಹಾಡು, ಗುಲಾಬಿ ಹೂಗಳು ಹಾಗೂ ಮೆಮೋರಬಲ್‌ ಫೋಟೋ ಫ್ರೇಮ್‌ ಎಲ್ಲವೂ ಅನು ದಿನವನ್ನು ಬೆಳಗಿತ್ತು.