ಶೂಟ್‌ ದಿನ ಮೇಕಪ್ ಹಾಗೂ ಡ್ರೆಸ್ ಲುಕ್ ಹೇಗಿರುತ್ತದೆ ಎಂದು ಬ್ಲಾಗ್ ಮಾಡಿದ ನಿರೂಪಕಿ ಅನುಪಮಾ ಗೌಡ. ಮಾಲಾಶ್ರೀ ಲುಕ್‌ಗೆ ನೆಟ್ಟಿಗರು ಫಿದಾ.  

ರಿಯಲ್ ಕಪಲ್‌ಗಳ ರಿಯಾಲಿಟಿ ಶೋ 'ರಾಜಾ ರಾಣಿ' ನಿರೂಪಣೆ ಮಾಡುತ್ತಿರುವ ಅನುಪಮಾ ಗೌಡ ಇದೀಗ ತಮ್ಮದೇ ಯುಟ್ಯೂಬ್ ಚಾನೆಲ್ ತೆರೆದು ತಮ್ಮ ದಿನಚರಿ, ಮೇಕಪ್, ಸ್ಕಿನ್‌ ಕೇರ್, ಹೇರ್ ಕೇರ್ ಹಾಗೂ ಫ್ಯಾಷನ್‌ ಬಗ್ಗೆ ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದಾರೆ. ಇದೀಗ ಮಾಲಾಶ್ರೀ ಅವರ ಲುಕ್‌ ಕ್ರಿಯೇಟ್‌ ಮಾಡಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ. 

ಈ ವಾರದ ಎಪಿಸೋಡ್‌ನಲ್ಲಿ ಜನರಿಗೆ ಹಳ್ಳಿ ಸೊಗಡನ್ನು ಪರಿಚಯಿಸಿ ಕೊಟ್ಟಿದ್ದಾರೆ. ಪ್ರತಿ ಜೋಡಿಯೂ ತಮಗಿಷ್ಟದ ಹಳ್ಳಿ ಶೈಲಿಯಲ್ಲಿ ರೆಡಿಯಾಗಿ ಬಂದಿದ್ದಾರೆ. ಹಳ್ಳಿ ಜನರ ಜೀವನ ಶೈಲಿಯಲ್ಲಿ ಏನೆಲ್ಲಾ ಕೆಲಸಗಳು ಇರುತ್ತವೆ, ಅವನ್ನು ಇಲ್ಲಿ ತೋರಿಸಲಾಗಿದೆ. ಈ ವೇಳೆ ನಿರೂಪಕಿ ಅನುಪಮಾ ಗೌಡ ಥೇಟ್ ಮಾಲಾಶ್ರೀ ಅವರ ಲುಕ್ ರೀ-ಕ್ರಿಯೇಟ್ ಮಾಡಿದ್ದಾರೆ. 

ಹೌದು! ರಾಮಚಾರಿ ಚಿತ್ರದ ಹಾಡೊಂದರಲ್ಲಿ ಮಾಲಾಶ್ರೀ ಹಳದಿ- ಪರ್ಪಲ್‌ ಲುಕ್‌ನಲ್ಲಿ ಕಂಗೊಳ್ಳಿಸಿದ್ದಾರೆ. ಇದೇ ಲುಕ್‌ನಲ್ಲಿ ಅನುಪಮಾ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಅಂಗಡಿ ಒಂದರಲ್ಲಿ ಮೀಟರ್‌ ಲೆಕ್ಕದಲ್ಲಿ ಬಟ್ಟೆ, ಅದಕ್ಕೆ ತಕ್ಕಂತೆ ಆಭರಣ ಖರೀದಿಸಿರುವ ವಿಡಿಯೋ ಮಾಡಿದ್ದಾರೆ. ಈ ಉಡುಪಿನ ಮತ್ತೊಂದು ವಿಶೇಷತೆ ಏನೆಂದರೆ ಅನುಪಮಾ ಗೌಡ ಅವರ ತಾಯಿ ಅವರೇ ಇದನ್ನು ಹೊಲಿದು ಕೊಟ್ಟಿದ್ದಾರೆ. ಬ್ಲಾಗ್ ವಿಡಿಯೋದಲ್ಲಿ ಅನುಪಮಾ ಗೌಡ ತಾಯಿಗೆ ಕಾಲ್ ಮಾಡಿ ತಮ್ಮ ಔಟ್‌ಫಿಟ್‌ ತೋರಿಸಿದ್ದಾರೆ. ಅಲ್ಲದೆ ಶೂಟ್‌ ನಡುವೆ ಮಾಲಾಶ್ರೀ ಅವರ ಸ್ಟೈಲ್‌ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. 

ಅಕ್ಕ ನಟಿ‌ ಅನುಪಮಾ ಸೀರಿಯಲ್ ಬಿಟ್ರು, ಸಿನಿಮಾ ಸಿಕ್ತಿಲ್ಲ!

ಮಾಲಾಶ್ರೀ ಅವರು ಉಡುಪು ಇಷ್ಟೊಂದು ಆಕರ್ಷಕವಾಗಿತ್ತು ಎಂದು ಈಗಲೇ ಗೊತ್ತಾಗುತ್ತಿರುವುದು. ನಾನು ಇದೇ ಲುಕ್ ಕ್ರಿಯೆ ಮಾಡುತ್ತೇವೆ, ಎಂದು ನೆಟ್ಟಿಗರು ಅನುಪಮಾ ಅವರ ಪೋಸ್ಟ್‌ ಕಾಮೆಂಟ್ ಮಾಡುವ ಮೂಲಕ ಹಿಂದಿನ ಕಾಲದಲ್ಲಿ ಸಿನಿಮಾಗಳಿಗೆ ವಸ್ತ್ರ ವಿನ್ಯಾಸ ಮಾಡುತ್ತಿದ್ದವರಿಗೆ ಭೇಷ್ ಎಂದಿದ್ದಾರೆ.

YouTube video player