ಅನಮಯ ಯೋಗೇಶ್ ದಿವಾಕರ್ ಎಂಬ 7ನೇ ತರಗತಿ ವಿದ್ಯಾರ್ಥಿ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಬರೋಬ್ಬರಿ 50 ಲಕ್ಷ ಗೆದ್ದಿದ್ದಾರೆ. ಕರ್ನಾಟಕದ ಕರಾವಳಿ ಜಿಲ್ಲೆ ಉಡುಪಿಯ ವಿದ್ಯೋದಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗೆ ಈ ಅದೃಷ್ಟ ಒದಗಿದೆ.

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಡೆಸಿಕೊಡೋ ಕೆಬಿಸಿ ಸ್ಟೂಡೆಂಡ್ ವೀಕ್‌ನಲ್ಲಿ ಅನಮಯ ಭಾಗವಹಿಸಿದ್ದಾರೆ. ಅಕ್ಟೋಬರ್ 5ರಿಂದ 25ರ ತನಕ ಆನ್‌ಲೈನ್ ಎಪ್ಲಿಕೇಷನ್ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. 10ರಿಂದ 14 ವರ್ಷ ವಯಸ್ಸಿನ ನಡುವಿನ 1.5 ಲಕ್ಷ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.

ಕೋಟ್ಯಾಧಿಪತಿಯಾದ ಮಹಿಳಾ IPS ಅಧಿಕಾರಿ

ಮೊದಲ ರೌಂಡ್‌ನಲ್ಲಿ 1 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ನಂತರ 200 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಕೊನೆಯ ಹಂತದಲ್ಲಿ ಆಯ್ಕೆಯಾದ 8 ವಿದ್ಯಾರ್ಥಿಗಳಲ್ಲಿ ಅನಮಯ ಕೂಡಾ ಒಬ್ಬರು.

ಅನಮಯ 14 ಪ್ರಶ್ನೆಗಳಿಗೆ ಸರಿ ಉತ್ತರ ಕೊಟ್ಟಿದ್ದರು. 15ರಲ್ಲಿ ಭಾಗವಹಿಸಿ 1 ಕೋಟಿ ಪಡೆಯಬಹುದಾಗಿತ್ತು. ಉತ್ತರದಲ್ಲಿ ಗೊಂದಲವಿದ್ದ ಕಾರಣ ಉತ್ತರ ಬಿಟ್ಟು 50 ಲಕ್ಷ ಪಡೆದಿದ್ದಾರೆ.