ವಾರದ ಏಳು ದಿನ ಯಾವುದು ಎಂದ್ರೆ ಹೀಗೆ ಹೇಳೋದಾ ಅಮೃತಧಾರೆ ಮಲ್ಲಿ! ಮಕ್ಕಳು ಕೇಳಿಸಿಕೊಂಡ್ರೆ ಅಷ್ಟೆ...

ಅಮೃತಧಾರೆಯ ಅಪರ್ಣಾ ವಾರದಲ್ಲಿ ಎಷ್ಟು ದಿನ ಎಂದು ಮಲ್ಲಿಯನ್ನು ಕೇಳಿದ್ರೆ ಮಲ್ಲಿ ಹೀಗೆ ಹೇಳೋದಾ? 
 

Amrutadhare Aparna and Malli made reels about seven days week name fans reacts suc

ಸೀರಿಯಲ್​ ನಟ-ನಟಿಯರು ತಮ್ಮ ಬಿಡುವಿನ ಸಂದರ್ಭಗಳಲ್ಲಿ ಸೋಷಿಯಲ್​ ಮೀಡಿಯಾಗಳಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ. ತಮ್ಮದೇ ಸೀರಿಯಲ್​ಗ ಸಹ ನಟ-ನಟಿಯರ ಜೊತೆ ಒಂದಿಷ್ಟು ರೀಲ್ಸ್​ ಮಾಡಿ ಖುಷಿ ಪಡುತ್ತಾರೆ. ಇದೀಗ ಅಮೃತಧಾರೆಯ ಮಲ್ಲಿ ಮತ್ತು ಅಪರ್ಣಾ. ಮಲ್ಲಿಯ ರಿಯಲ್​ ಹೆಸರು ರಾಧಾ ಭಗವತಿ ಹಾಗೂ ಅಪರ್ಣಾ ಅವರ ರಿಯಲ್​ ಹೆಸರು ಸ್ವಾತಿ ರಾಯಲ್​. ಇದರಲ್ಲಿ ಸ್ವಾತಿ ಅವರು, ಮಲ್ಲಿ ಅರ್ಥಾತ್​ ರಾಧಾ ಅವರಿಗೆ, ವಾರದಲ್ಲಿ ಎಷ್ಟು ದಿನ ಎಂದು ಕೇಳಿದ್ದಾರೆ. ಅದಕ್ಕೆ ಮಲ್ಲಿ ಏಳು ದಿನ ಎಂದಿದ್ದಾರೆ. ಹಾಗಿದ್ದರೆ ಅದನ್ನು ಹೆಸರಿಸು ಎಂದಾಗ ನಿನ್ನೆ, ಮೊನ್ನೆ, ಆಚೆಮೊನ್ನೆ, ನಾಳೆ, ನಾಡಿದ್ದು ಮತ್ತು ಆಚೆನಾಡಿದ್ದು ಎಂದಿದ್ದಾರೆ. ಆರೇ ಆಯ್ತಲ್ಲ ಎಂದು ಸ್ವಾತಿ ಕೇಳಿದಾಗ ಏಳನೆಯದ್ದು ಇವತ್ತು ಎಂದಿದ್ದಾರೆ. ಈ ರೀಲ್ಸ್​ಗೆ ಅಭಿಮಾನಿಗಳು ಭಲೆ ಭಲೆ ಎನ್ನುತ್ತಿದ್ದಾರೆ. ಮಕ್ಕಳು ಇದನ್ನು ಕೇಳಿದ್ರೆ ಅಷ್ಟೇ ಕಥೆ ಎಂದು ಕೆಲವರು ನಟಿಯರ ಕಾಲೆಳೆಯುತ್ತಿದ್ದಾರೆ. 

ನಟಿ ಸ್ವಾತಿ ರಾಯಲ್​ ಕುರಿತು ಹೇಳುವುದಾದರೆ, ಇವರು ಅಮೃತಧಾರೆಯ ಅಪರ್ಣಾ ಅನ್ನುವುದಕ್ಕಿಂತ ಹೆಚ್ಚಾಗಿ  ‘ಅಮೃತವರ್ಷಿಣಿ’ಯ ವರ್ಷ ಆಗಿ ಸಕತ್​ ಫೇಮಸ್​ ಆದವರು. ಈ ಸೀರಿಯಲ್​  1700 ಕಂತುಗಳನ್ನು ಪೂರೈಸಿತ್ತು.  ಇದೀಗ ಭೂಮಿಕಾ ಸ್ನೇಹಿತೆಯಾಗಿ, ಆನಂದ್​ ಪತ್ನಿಯಾಗಿ ಇವರ ಪಾತ್ರವನ್ನು ಅಮೃತಧಾರೆ ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. 2012ರಲ್ಲಿ ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಸ್ವಾತಿ ಅವರು, ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ಎಂಬಿಎ ಮಾಡಿ ನಾನು ಬಿಪಿಒ ಕಂಪೆನಿಯಲ್ಲಿ ಕೆಲಸ ಮಾಡಿದವರು. ಅಲ್ಲಿ ಮಾರ್ನಿಂಗ್​ ಶಿಫ್ಟ್​ ಸಂಜೆ ಆ್ಯಂಕರಿಂಗ್​ ಮಾಡುತ್ತಿದ್ದರು. ಅಲ್ಲಿಂದಲೇ ಕಿರುತೆರೆಯ ಪರಿಚಯವಾದದ್ದು. ಇವರ ರೀಲ್​ ಪತಿಯ ಹೆಸರು ಆನಂದ್​ ಆದ್ರೆ, ರಿಯಲ್​ ಪತಿಯ ಹೆಸರು  ಅನಿಲ್. 

ಅಮೃತಧಾರೆ ಮಲ್ಲಿ 'ಸಾರಿ' ಕೇಳಿದ್ರೆ ಪತಿ ಜೈದೇವ್​ ಹೀಗ್​ ಹೇಳೋದಾ? ನಕ್ಕೂ ನಕ್ಕು ಸುಸ್ತಾದ ಫ್ಯಾನ್ಸ್​!

ಆರಂಭದಲ್ಲಿ ಇವರ ಮದುವೆಗೆ ಮನೆಯವರು ಒಪ್ಪಿರಲಿಲ್ಲವಂತೆ. ಕೊನೆಗೆ ಅನಾರೋಗ್ಯದಿಂದ ಸ್ವಾತಿ ಅವರು  ಕೋಮಾಕ್ಕೆ ಹೋಗುವ ಸ್ಥಿತಿ ಬಂದಾಗ ಅನಿಲ್​ ಅವರು ನೋಡಿಕೊಂಡ ಪರಿ ಕಂಡು ಮದುವೆಗೆ ಒಪ್ಪಿದ್ದರು ಎಂದು ಸ್ವಾತಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.  ಇವರ ಮದುವೆಯ ಸಂಪೂರ್ಣ ಖರ್ಚು ದಂಪತಿಯೇ ಮಾಡಿರುವುದು ಒಂದು ವಿಶೇಷವಾದರೆ, ಸ್ವಾತಿ ಅವರು ತಮ್ಮ  ತಂಗಿಯನ್ನು ಓದಿಸಿ ವಿದೇಶಕ್ಕೆ ಕಳುಹಿಸಿರುವುದು ಇನ್ನೊಂದು ವಿಶೇಷ.  

ಇನ್ನು ಮಲ್ಲಿ ಪಾತ್ರಧಾರಿ ರಾಧಾ ಕುರಿತು ಹೇಳುವುದಾದರೆ, ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ.  ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಬೆಂಗಳೂರಲ್ಲಿ ಆಟೋ, ಕ್ಯಾಬ್​ ಏನೂ ಸಿಕ್ಕಲ್ವಾ? ಇದ್ಯಾಕೋ ಅತಿಯಾಯ್ತು ಅನ್ನಿಸ್ತಿಲ್ವಾ? ನೆಟ್ಟಿಗರ ಕ್ಲಾಸ್​

 

Latest Videos
Follow Us:
Download App:
  • android
  • ios