ನಟಿ ಯಶಸ್ವಿನಿ ಸ್ವಾಮಿ ತಾಯಿಯ ಹುಟ್ಟುಹಬ್ಬದಂದು ವಿಶೇಷ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕೆಂಪು ಸೀರೆಯುಟ್ಟು ದೇವಸ್ಥಾನದಲ್ಲಿ ಚಿತ್ರೀಕರಿಸಿದ ಈ ವೀಡಿಯೋದಲ್ಲಿ ತಾಯಿ-ಮಗಳ ಬಾಂಧವ್ಯ ಸುಂದರವಾಗಿ ಮೂಡಿಬಂದಿದೆ. "ನನ್ನ ಅಮ್ಮ ನನ್ನ ಗೆಳತಿ" ಎಂದು ಯಶಸ್ವಿನಿ ಬರೆದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರೀಲ್ಸ್ ಗಾಗಿ ವಿಡಿಯೋ ಶೂಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಹೆಚ್ಚಾಗಿ ಹುಡುಗ-ಹುಡುಗಿ, ಗಂಡ- ಹೆಂಡತಿ, ಫ್ರೆಂಡ್ಸ್ ಜೊತೆಯಾಗಿ ಸ್ಪೆಷಲ್ ವಿಡೀಯೋ ಶೂಟ್ ಮಾಡಿರೋದನ್ನು ನೋಡಿರುತ್ತೀರಿ. ಇದೀಗ ನಟಿ ಯಶಸ್ವಿನಿ ಸ್ವಾಮಿ (Yashaswini Swamy) ವಿಶೇಷ ದಿನದಂದು ತಮ್ಮ ತಾಯಿ ಜೊತೆ ವಿಡಿಯೋ ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ವಿಡಿಯೋ ವೈರಲ್ ಆಗುತ್ತಿದೆ, ಅಲ್ಲದೇ ಭಾರಿ ಮೆಚ್ಚುಗೆಯನ್ನೂ ಕೂಡ ಪಡೆಯುತ್ತಿದೆ.
ಗಗನಾಗೆ ಕೈಕೊಟ್ಟು ಯಶು ಜೊತೆ ಪ್ಯಾನ್ ಇಂಡಿಯಾ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡ್ಕೊಂಡ ಗಿಲ್ಲಿ ನಟ: ಅಂತದ್ದೇನಾಯ್ತು?
ಹೌದು ಯಶಸ್ವಿನಿ ಅವರ ತಾಯಿಯ ಹುಟ್ಟುಹಬ್ಬದ (mothers birthday) ಹಿನ್ನೆಲೆಯಲ್ಲಿ ನಟಿ, ಅಮ್ಮನ ಜೊತೆಗೆ ಮುದ್ದಾದ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಅಮ್ಮ ಮತ್ತು ಮಗಳು ಇಬ್ಬರೂ ಕಪ್ಪು ಬಾರ್ಡರ್ ಇರುವ ಕೆಂಪು ಸೀರೆಯನ್ನು ಧರಿಸಿದ್ದು, ದೇವಸ್ಥಾನದ ಸುತ್ತಮುತ್ತಲು ವಿಡಿಯೋ ಶೂಟ್ ಮಾಡಲಾಗಿದೆ. ನಗು ಎಂದಿದೆ ಮಂಜಿನ ಬಿಂದು ಎನ್ನುವ ಹಾಡು ಹಿನ್ನೆಲೆಯಲ್ಲಿ ಬಿತ್ತರವಾಗುತ್ತಿದ್ದು, ಅಮ್ಮ-ಮಗಳ ಬಾಂಧವ್ಯ ತುಂಬಾನೆ ಸುಂದರವಾಗಿ ಮೂಡಿ ಬಂದಿದೆ. ಈ ವಿಡಿಯೋ ಜೊತೆಗೆ ಯಶಸ್ವಿನಿ ನನ್ನ ಅಮ್ಮ ನನ್ನ Bestfriend , ಹುಟ್ಟುಹಬ್ಬದ ಶುಶುಭಾಶಯಗಳು ಅಮ್ಮಎಂದು ಬರೆದುಕೊಂಡಿದ್ದಾರೆ. ಅಂದ್ರೆ ಯಶಸ್ವಿನಿ ತಮ್ಮ ಅಮ್ಮನಲ್ಲೇ ತಮ್ಮ ಗೆಳತಿಯನ್ನು ಕಾಣುತ್ತಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅಮ್ಮ, ಮಗಳ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ.
ರೆಡ್ ಲೆಹಂಗಾದಲ್ಲಿ ಮಿಂಚಿದ 'ಲಕ್ಷ್ಮೀ ನಿವಾಸ' ಸೀರಿಯಲ್‌ನ ವಿಲನ್ ಯಶಸ್ವಿನಿ ಸ್ವಾಮಿ
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ವಿಲನ್ ಸೌಪರ್ಣಿಕಾ ಪಾತ್ರದಲ್ಲಿ ಸದ್ಯ ಯಶಸ್ವಿನಿ ಸ್ವಾಮಿಯವರು ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಭಾವನಾ ಪಾಲಿಗೆ ಮುಳ್ಳಾಗಿರುವ,ಆಸ್ತಿಗಾಗಿ ಅಣ್ಣನ ಮಗಳು ಖುಷಿಯನ್ನು ತನ್ನ ವಶದಲ್ಲಿ ಇಟ್ಟುಕೊಳ್ಳುವ ಅತ್ತೆಯಾಗಿ ಯಶಸ್ವಿನಿ ನಟಿಸುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಓದುವಾಗಲೇ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಪಡೆದಿದ್ದ ಯಶಸ್ವಿನಿ ಸ್ಟಾರ್ ಸುವರ್ಣ (Star Suvarna) ವಾಹಿನಿಯ ಅನುರೂಪ ಸೀರಿಯಲ್‌ನಲ್ಲಿ ನಟಿಸಿದ್ದರು. ಅದಾದ ಬಳಿಕ ರಾಜಾ ರಾಣಿ, ಅಸಾಧ್ಯ ಅಳಿಯಂದಿರು, ಮಂಗಳ ಗೌರಿಯ ಮದುವೆ ಸೀರಿಯಲ್ ಗಳಲ್ಲೂ ಇವರು ನಟಿಸಿದ್ದಾರೆ. ಅಷ್ಟೇ ಅಲ್ಲ ಡಿಕೆಡಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ಭರ್ಜರಿ ಸ್ಪರ್ಧೆ ನೀಡಿದ್ದರು. ಅಷ್ಟೇ ಅಲ್ಲ ತೆಲುಗು , ತಮಿಳು ಸೀರಿಯಲ್ ಗಳಲ್ಲೂ, ಫಾರ್ಚುನರ್ ಎನ್ನುವ ಸಿನಿಮಾದಲ್ಲಿ ಯಶಸ್ವಿನಿ ನಟಿಸಿ ಸೈ ಎನಿಸಿಕೊಂಡಿದ್ದರು.
