Asianet Suvarna News Asianet Suvarna News

ಹೊಸ ಮನೆ ಗೃಹಪ್ರವೇಶ ಮಾಡಿದ ನಟಿ ದೀಪಾ ಭಾಸ್ಕರ್!

ಹೊಸ ಆರಂಭ ಎಂದು ಹೊಸ ಮನೆ ಗೃಹಪ್ರವೇಶ ಮಾಡಿದ ವಾಯ್ಸ್ ಓವರ್ ಆರ್ಟಿಸ್ಟ್‌ ದೀಪಾ ಭಾಸ್ಕರ್...
 

Actress voice-over artist Deepa Bhaskar new house warming ceremony  vcs
Author
Bangalore, First Published Sep 13, 2021, 10:45 AM IST
  • Facebook
  • Twitter
  • Whatsapp

ಕಿರುತೆರೆ ನಟಿ, ಜನಪ್ರಿಯ ವಾಯ್ಸ್ ಓವರ್ ಆರ್ಟಿಸ್ಟ್‌ ದೀಪಾ ಭಾಸ್ಕರ್ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮನೆ ಫೋಟೋ ಹಂಚಿಕೊಂಡು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. 

'Grateful and thankful to new beginnings. ಗೃಹಪ್ರವೇಶ,' ಎಂದು ಬರೆದುಕೊಂಡಿದ್ದಾರೆ.  ಮನೆಗೆ ಗುರುಕೃಪಾ ಎಂದು ಹೆಸರಿಟ್ಟಿದ್ದಾರೆ. ಕೊರೋನಾ ಕಾರಣದಿಂದ ಆಪ್ತರು ಮಾತ್ರ ಈ ಶುಭ ಸಮಾರಂಭದಲ್ಲಿ ಭಾಗಿಯಾಗಿದ್ದರು. 

'ಸುಬ್ಬಲಕ್ಷ್ಮೀ ಸಂಸಾರ' ದ ಸುಬ್ಬಿಯ ಹಿಂದಿನ ಕಥೆ!

ಇನ್ನು ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿ ನಂತರ ಕಾಮಿಡಿ ಶೋ ಮಜಾ ಟಾಕೀಸ್‌ನಲ್ಲಿ ಉರ್ಮಿಳಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು.  ಮಳೆ ಬಿಲ್ಲು, ಪ್ರೀತಿ ಇಲ್ಲದ ಮೇಲೆ,ಚಕ್ರವಾಕ, ಪಾರಿಜಾತ, ಅನಾವರಣ, ಪಾಪಾ ಪಾಂಡು, ನೀನೊಲು ಮೈಂಡೇಲ್, ಮದರಂಗಿ, ಸಾಕ್ಷಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ದೀಪಾ ಅಭಿನಯಿಸಿದ್ದಾರೆ. 

ಹಲವು ವರ್ಷಗಳ ಕಾಲ ದೀಪಾ ಅವರು ನಟಿ ರಮ್ಯಾಗೆ ಧ್ವನಿ ನೀಡಿದ್ದಾರೆ. ಜೋಗಿ, ಮುಂಗಾರು ಮಳೆ, ದುನಿಯಾ, ಸೂಪರ್, ಸಾರತಿ, ಗಜ ಸೇರಿದಂತೆ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಯರಿಗೆ ಧ್ವನಿ ನೀಡಿದ್ದಾರೆ.

 

Follow Us:
Download App:
  • android
  • ios