'ಕಾಮಿಡಿ ಕಿಲಾಡಿಗಳು' ಕೊನೆಯ ಸಂಚಿಕೆ ಚಿತ್ರೀಕರಣದಲ್ಲಿ ಭಾವುಕರಾದ ನಟಿ ರಕ್ಷಿತಾ!
ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಅಂತಿಮ ಸಂಚಿಕೆ ಚಿತ್ರೀಕರಣದ ಬಗ್ಗೆ ಭಾವುಕ ಪೋಸ್ಟ್ ಬರೆದ ನಟಿ ರಕ್ಷಿತಾ ಪ್ರೇಮ್.
ಸ್ಯಾಂಡಲ್‌ವುಡ್ ಕ್ರೇಜಿ ಕ್ವೀನ್ ರಕ್ಷಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಬಣ್ಣದ ಲೋಕದಿಂದ ದೂರ ಉಳಿದ್ದರು. ಆನಂತರ ಕಿರುತೆರೆ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಅನೇಕ ಕಿರುತೆರೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ರಕ್ಷಿತಾ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದು ಕಾಮಿಡಿ ಕಿಲಾಡಿಗಳು ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಟಿ ಶೋ ಮೂಲಕ.
ಕೊರೋನಾ ಎರಡನೇ ಅಲೆ ಲಾಕ್‌ಡೌನ್‌ನಿಂದ ಚಿತ್ರೀಕರಣ ಅರ್ಧಕ್ಕೇ ನಿಂತಿತ್ತು. ಆದರೆ ಮತ್ತೆ ಚಿತ್ರೀಕರಣ ಆರಂಭಿಸಿ ಜೀ ವಾಹಿನಿ, ಕೊನೆ ಸಂಚಿಕೆ ಚಿತ್ರೀಕರಣ ಮಾಡುತ್ತಿದೆ. ಗೊಂಬೆಯಂತೆ ಅಲಂಕಾರ ಮಾಡಿಕೊಂಡಿರುವ ರಕ್ಷಿತಾ ಇಡೀ ಕಾಮಿಡಿ ಕಿಲಾಡಿಗಳು ತಂಡದ ಜೊತೆ ಫೋಟೋ ಹಂಚಿಕೊಂಡಿದ್ದಾರೆ. ಜಗ್ಗೇಶ್ ಮತ್ತು ಯೋಗರಾಜ್ ಭಟ್ರು ಕೂಡ ಇದ್ದಾರೆ.
ರಾಮೋಜಿ ಫಿಲಂ ಸಿಟಿಯಲ್ಲಿ ಮೂರು ಹೊತ್ತೂ ಶೂಟಿಂಗ್ ಮೋಡ್ : ಅನಿರುದ್ಧ ಜತ್ಕರ್
'ಸೆಟ್‌ನಲ್ಲಿ ಕೊನೆಯ ದಿನ. ಈ ಸೀಸನ್ ಕಾಮಿಡಿ ಕಿಲಾಡಿಗಳು 36 ವಾರಗಳ ಕಾಲ ಮಾಡಲಾಗಿತ್ತು. ಎಂಥಾ ಬ್ಯೂಟಿಫುಲ್ ಜರ್ನಿ ಇದಾಗಿತ್ತು. ಈ ಪ್ಯಾಂಡಮಿಕ್‌ನಲ್ಲಿ ಮತ್ತೆ ಕಾಮಿಡಿ ಕಿಲಾಡಿಗಳು ಚಿತ್ರೀಕರಣ ಮಾಡಿದ್ದು, ಸಖತ್ ತಮಾಷೆಯಾಗಿತ್ತು. ವಾರದಲ್ಲಿ 6 ಗಂಟೆಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು. ಈ ಸೆಟ್ ಮತ್ತು ನನ್ನ ಕೋ-ಜಡ್ಜ್‌ಗಳನ್ನು ಮಿಸ್ ಮಾಡಿಕೊಳ್ಳುವೆ,' ಎಂದು ರಕ್ಷಿತಾ ಬರೆದುಕೊಂಡಿದ್ದಾರೆ.