Asianet Suvarna News Asianet Suvarna News

ರಾಮೋಜಿ ಫಿಲಂ ಸಿಟಿಯಲ್ಲಿ ಮೂರು ಹೊತ್ತೂ ಶೂಟಿಂಗ್ ಮೋಡ್ : ಅನಿರುದ್ಧ ಜತ್ಕರ್

‘ಅಬ್ಬಬ್ಬಾ, ಎದುರಿದ್ದ ಚಾಲೆಂಜ್‌ಗಳು ಒಂದಾ.. ಎರಡಾ, ಅವನ್ನೆಲ್ಲ ಫೇಸ್ ಮಾಡಿ ಕೊನೆಗೂ ಜಯಿಸಿದೆವಲ್ಲಾ.. ನೆನೆಸಿಕೊಂಡರೆ ಗ್ರೇಟ್ ಅನಿಸುತ್ತೆ’ ಹೀಗೆಂದು ಉದ್ಗರಿಸಿದ್ದು ಅನಿರುದ್ಧ. ಜೀ ಕನ್ನಡದ ಜೊತೆ ಜೊತೆಯಲಿ ಸೀರಿಯಲ್‌ನ ಆರ್ಯವರ್ಧನ್ ಪಾತ್ರ  ಇವರ  ಇಮೇಜನ್ನೇ ಬದಲಿಸಿದೆ. ಇದೀಗ ದೊಡ್ಡ ಟಾಸ್‌ಕ್ ಮುಗಿಸಿದ ನಿರುಮ್ಮಳತೆ ಅವರ ಧ್ವನಿಯಲ್ಲಿತ್ತು. ಅವರೀಗ ಹೈದರಾಬಾದ್‌ನಿಂದ ಬೆಂಗಳೂರಿಗೆ ಮರಳಿದ್ದಾರೆ. ರಾಮೋಜಿರಾವ್ ಫಿಲ್ಮಂ ಸಿಟಿಯ ಶೂಟಿಂಗ್ ಅನುಭವಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.

Zee Kannada Jothe Jotheyalli Aniruddha Jatkar exclusive interview about lockdown shooting vcs
Author
Bangalore, First Published Jun 14, 2021, 11:46 AM IST

ಪ್ರಿಯಾ ಕೆರ್ವಾಶೆ

ಎದುರು ಬಂಡೆಯಂಥಾ ಸವಾಲಿತ್ತು!

ಕೊರೋನಾದ ಸಾವು ನೋವುಗಳು ಒಂದು ಕಡೆ. ಹಲವಾರು ಮಂದಿಯ ಜೀವನಾಧಾರವಾಗಿದ್ದ ಶೂಟಿಂಗ್ ಸ್ಥಗಿತದ ಭೀತಿ ಇನ್ನೊಂದು ಕಡೆ. ಕಳೆದ ಸಲದಂತೆ ಈ ಬಾರಿಯೂ ಹಳೇ ಎಪಿಸೋಡ್‌ಗಳೇ ಗತಿಯಾ ಅನ್ನುವ ಗೊಂದಲ, ಬೇಸರ. ಒಮ್ಮೆ ಸೀರಿಯಲ್ ನಿಂತರೆ ಆಗುವ ಸಮಸ್ಯೆ ನಿಮ್ಮೆಲ್ಲರಿಗೂ ಗೊತ್ತು. ಇವಕ್ಕೆಲ್ಲ ಉತ್ತರವೇನೋ ಅನ್ನೋ ಹಾಗೆ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಶೂಟಿಂಗ್ ಮುಂದುವರಿಸುವ ಮಾತು ಕೇಳಿಬಂತು. ಅಲ್ಲಿಯವರೆಗಿನದು ಒಂದು ಕಥೆಯಾದರೆ ಆಮೇಲಿನದು ಮತ್ತೊಂದು ಕತೆ. ಇಂಥಾ ಟೈಮ್‌ನಲ್ಲಿ ಶೂಟಿಂಗ್‌ಗೆ ಬರೋದಕ್ಕೆ ಹಲವು ಮಂದಿ ಕಲಾವಿದರು ನಿರಾಕರಿಸಿದರು. ಪರಿಸ್ಥಿತಿ ಹೀಗಿರುವ ಕಾರಣ ಅವರನ್ನು ಹೆಚ್ಚು ಒತ್ತಾಯಿಸಿ ಕರೆತರುವ ಹಾಗಿಲ್ಲ. ಹೊಸ ಕಲಾವಿದರನ್ನು ಹುಡುಕೋದೂ ಕಷ್ಟ. ಈ ಸಂದರ್ಭ ಇರುವ ಕಲಾವಿದರನ್ನೇ ಮ್ಯಾನೇಜ್ ಮಾಡಿ, ಕೆಲವು ಮಂದಿ ಹೊಸ ಕಲಾವಿದರನ್ನೂ ಸೇರಿಸಿಕೊಂಡು ಶೂಟಿಂಗ್‌ಗೆ ಹೊರಟೆವು. ಎಲ್ಲರಿಗೂ ಒಂದು ಡೋಸ್ ವ್ಯಾಕ್ಸಿನೇಶನ್ ಆಗಿತ್ತು. ನನಗೆ ಎರಡು ಡೋಸ್ ಕಂಪ್ಲೀಟ್ ಆಗಿತ್ತು. ಎಲ್ಲರ ಕೋವಿಡ್ ಟೆಸ್‌ಟ್ ಮಾಡಿಸಲಾಗಿತ್ತು.

Zee Kannada Jothe Jotheyalli Aniruddha Jatkar exclusive interview about lockdown shooting vcs

ಹೊಸ ಕತೆ, ಹೊಸ ಲೊಕೇಶನ್

ಇದರಲ್ಲಿ ಬಹಳ ಕಷ್ಟ ಆದದ್ದು ಈ ಸೀರಿಯಲ್‌ನ ಸ್ಕ್ರಿಪ್‌ಟ್ ರೈಟರ್ಸ್‌ಗೆ. ಒಂದು ಮುಖ್ಯ ಘಟ್ಟಕ್ಕೆ ಬಂದು ನಿಂತಿದ್ದ ಸೀರಿಯಲ್‌ನಲ್ಲಿ ಅವರು ಮತ್ತೊಂದು ಹೊಸ ಎಳೆ ತರಬೇಕಿತ್ತು, ಎಷ್ಟು ಜನ ಕಲಾವಿದರಿದ್ದಾರೆ ಅಂತ ನೋಡಿಕೊಂಡು ಸ್ಟೋರಿ ಬಿಲ್‌ಡ್ ಮಾಡಬೇಕಿತ್ತು. ಜೊತೆಗೆ ನಮಗೆ ಆ ಹೊತ್ತಿಗೆ ಲಭ್ಯವಿದ್ದ ಲೊಕೇಶನ್‌ಗೆ ತಕ್ಕ ಹಾಗೆ ಬರೆಯಬೇಕಿತ್ತು. ಈ ಎಲ್ಲ ಚಾಲೆಂಜ್‌ಗಳನ್ನೂ ಅವರು ಎದುರಿಸಿದ ಬಗೆಯ ನಿಜಕ್ಕೂ ಗ್ರೇಟ್.

ಅಷ್ಟು ತಂಡಗಳಿದ್ದರೂ ಮುಖಾಮುಖಿಯೇ ಇಲ್ಲ

ರಾಮೋಜಿ ರಾವ್ ಫಿಲಂ ಸಿಟಿಗೆ ನಾನು ಬಹಳಷ್ಟು ಸಲ ಹೋಗಿದ್ದೀನಿ. ಆದರೆ ಈ ಥರದ ಸೀರಿಯಲ್ ಶೂಟಿಂಗ್ ಅನುಭವ ನನಗೆ ಹೊಸತು. ಬಹಳ ಸುರಕ್ಷತೆ ಇತ್ತು. ಬಯೋ ಬಬಲ್ ವಾತಾವರಣದಲ್ಲಿ ನಾವೆಲ್ಲ ಇದ್ವಿ. ಅಷ್ಟೊಂದು ಸೀರಿಯಲ್ ತಂಡಗಳ ಶೂಟಿಂಗ್ ನಡೆಯುತ್ತಿತ್ತಲ್ವಾ, ಆದರೆ ನಾವ್ಯಾರೂ ಮುಖಾಮುಖಿ ಆದದ್ದೇ ಇಲ್ಲ. ಇದಕ್ಕೆ ಕಾರಣ ರಾಮೋಜಿ ರಾವ್ ಫಿಲಂ ಸಿಟಿಯ ಅಗಾಧ ವಿಸ್ತಾರ. ಅದು ಎಷ್ಟು ದೊಡ್ಡದು ಅಂದರೆ ಅಲ್ಲಿ ಎಷ್ಟೇ ತಂಡಗಳು ಶೂಟಿಂಗ್ ಮಾಡುತ್ತಿದ್ದರೂ, ಪ್ರತೀ ತಂಡವೂ ಪ್ರತ್ಯೇಕವಾಗಿ ಇರಬಹುದು. ಸುರಕ್ಷತೆ ಬಹಳ ಮುಖ್ಯವಾಗಿರುವ ಈ ಕಾಲಕ್ಕೆ ಹೇಳಿ ಮಾಡಿಸಿದಂಥಾ ಜಾಗ.

Zee Kannada Jothe Jotheyalli Aniruddha Jatkar exclusive interview about lockdown shooting vcs

ಮೂರು ಹೊತ್ತೂ ವರ್ಕಿಂಗ್ ಮೋಡ್

ರಾಮೋಜಿ ರಾವ್ ಫಿಲಂ ಸಿಟಿಗೆ ಕಾಲಿಟ್ಟ ಕೂಡಲೇ ಒಂದು ಪಾಸಿಟಿವ್ ವೈಬ್. ಅದು ಎಲ್ಲ ಕಡೆ ಇರೋದಿಲ್ಲ. ಆ ಅನುಭೂತಿ ನಮ್ಮನ್ನು ಕೆಲಸ ಮಾಡುವಂತೆ ಸದಾ ಪ್ರೇರೇಪಿಸುತ್ತಿರುತ್ತದೆ. ಆ ಕಾರಣಕ್ಕೋ ಏನೂ, ಅಲ್ಲಿ ಅತೀ ಹೆಚ್ಚಿನ ಸಮಯ ಶೂಟಿಂಗ್‌ನಲ್ಲಿ ಕಳೆದು ಹೋಗ್ತಿತ್ತು. ಶೂಟಿಂಗ್ ಮುಗಿದ ಕೂಡಲೇ ನಮ್ಮ ರೂಮ್‌ಗೆ ಹೋಗಲು ಬಸ್ ವ್ಯವಸ್ಥೆ ಇರುತ್ತಿತ್ತು. ನಾವೆಲ್ಲ ಮೂರು ಹೊತ್ತೂ ಆ ಶೂಟಿಂಗ್ ಮೋಡ್‌ನಲ್ಲೇ ಇರುತ್ತಿದ್ದೆವು. ಈ ಥರದ ಮಗ್ನತೆ ಕೆಲಸದಲ್ಲಿ ತೀವ್ರವಾಗಿ ತೊಡಗಿಸಿಕೊಳ್ಳುವ ಹಾಗೆ ಮಾಡುತ್ತದೆ. ಈ ಅನುಭವ ನನಗೆ ಬಹಳ ಖುಷಿ ಕೊಟ್ಟಿತು.

ಆ ಲೊಕೇಶನ್ ಅದ್ಭುತ

ರಾಮೋಜಿ ರಾವ್ ಫಿಲಂ ಸಿಟಿಯ ಲೊಕೇಶನ್ ಬಹಳ ಅದ್ಭುತ. ಅಲ್ಲಿ ವಿಭಿನ್ನ ಮಾದರಿಯ ಕಟ್ಟಡಗಳ ಜೊತೆಗೆ ಅದಕ್ಕೆ ಪೂರಕವಾದ ಪರಿಸರವನ್ನೂ ನಿರ್ಮಿಸಿದ್ದಾರೆ. ಹಿಂದೆ ಹೋಗಿದ್ದರೂ ಪ್ರತೀ ಬಾರಿ ಹೊಸತಾಗಿ ಕಾಣುವುದು ಅದರ ಮತ್ತೊಂದು ವಿಶೇಷತೆ.

ಆರ್ಯವರ್ಧನ್ ಪಾತ್ರ ಕೊಟ್ಟ ಖುಷಿಬಹುಶಃ ನನ್ನ ನಟನೆಗೆ ಹೊಸ ದಿಕ್ಕು ಸಿಕ್ಕಿದ್ದು ‘ಜೊತೆ ಜೊತೆಯಲಿ’ ಸೀರಿಯಲ್‌ನ ಆರ್ಯವರ್ಧನ ಪಾತ್ರದಿಂದ. ಅದರಲ್ಲಿ ನನ್ನ ಸಾಲ್‌ಟ್ ಪೆಪ್ಪರ್ ಲುಕ್‌ಅನ್ನೂ ಜನ ಮೆಚ್ಚಿಕೊಂಡಿದರು. ಅದನ್ನೇ ಟ್ರೆಂಡ್ ಮಾಡಿ ಫಾಲೋ ಮಾಡಿದರು. ಇದೆಲ್ಲ ಅವರ ಪ್ರೀತಿ. ಅವರ ಬೆಂಬಲದಿಂದಾಗಿಯೇ ನಾನು ಆ ಪಾತ್ರಕ್ಕೆ ಜೀವ ತುಂಬೋದು ಸಾಧ್ಯವಾಯ್ತು. ಅವರು ನಮ್ಮನ್ನು ಬೆಳೆಸದೇ ನಾವೆಲ್ಲಿ.. ಆದರೂ ಈ ಜನಮೆಚ್ಚಿದ ಪಾತ್ರವನ್ನು ನಿರ್ವಹಿಸೋದಕ್ಕೆ ಬಹಳ ಖುಷಿ ಅನಿಸುತ್ತೆ.

ನಮ್ಮನ್ನು ಪೊರೆದದ್ದು ಜನರ ಪ್ರೀತಿ

ಜನರಿಗೆ ರೊಮ್ಯಾಂಟಿಕ್ ಸೀನ್‌ಗಳಲ್ಲಿ ಆಸಕ್ತಿ ಜಾಸ್ತಿ. ಹೀಗಾಗಿ ಕಥೆಗಳಲ್ಲಿ ಕೊಂಚ ಬದಲಾವಣೆ ಆದರೆ ಅವರಿಗೆ ಆ ಕ್ಷಣಕ್ಕೆ ಅರಗಿಸಿಕೊಳ್ಳೋಕೆ ಕಷ್ಟ ಆಗುತ್ತೆ. ಆದರೆ ಮುಂದೆಲ್ಲೂ ಕಥೆ ಸಾಗಿದಾಗ ಈ ಘಟನೆಗಳ ಮಹತ್ವ ರಿವೀಲ್ ಆಗುತ್ತೆ. ಆದರೂ ಈ ಬಾರಿ ಕಥೆಯಲ್ಲಿ ಬದಲಾವಣೆ ಆದರೂ, ಹೊಸ ನಟರು ಬಂದರೂ ಅವನ್ನೆಲ್ಲ ಮುಕ್ತ ಮನಸ್ಸಿಂದ ಒಪ್ಪಿಕೊಂಡು ನಮ್ಮನ್ನು ಪೊರೆದದ್ದು ಜನರ ಪ್ರೀತಿ.

Follow Us:
Download App:
  • android
  • ios