Asianet Suvarna News Asianet Suvarna News

ಮೈ ಚಳಿ ಬಿಟ್ಟು ಸ್ವಾತಿ ಮುತ್ತಿನ ಹಾಡಿಗೆ ಸಕತ್​ ಸ್ಟೆಪ್​ ಹಾಕಿದ 'ಹಿಟ್ಲರ್​ ಕಲ್ಯಾಣ'ದ ಅಂತರಾ

ಹಿಟ್ಲರ್​ ಕಲ್ಯಾಣ್ ಧಾರಾವಾಹಿಯಲ್ಲಿ ಅಂತರಾ  ಮತ್ತು ಪ್ರಾರ್ಥನಾ ಪಾತ್ರದ ಮೂಲಕ ಜನಪ್ರಿಯಗೊಂಡಿರುವ ನಟಿ ರಜನಿ ಅವರು ಸ್ವಾತಿ ಮುತ್ತಿನ ಮಳೆಹನಿಗೆ ಡ್ಯಾನ್ಸ್​ ಮಾಡಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ.
 

Actress Rajani of  Hitler Kalyan serial danced to Swati Muttina Malehaniye suc
Author
First Published Sep 10, 2023, 12:34 PM IST

ಈಗ ಕಿರುತೆರೆ ಜನರಿಗೆ ಅದರಲ್ಲಿಯೂ ಮಹಿಳೆಯರಿಗೆ ಸಿಕ್ಕಾಪಟ್ಟೆ ಹತ್ತಿರವಾಗುತ್ತಿದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ಧಾರಾವಾಹಿಗಳಲ್ಲಿ ಮಹಿಳೆಯರೇ ನಾಯಕಿ, ಮಹಿಳೆಯೇ ವಿಲನ್​. ಒಂದು ಕುಟುಂಬದ ಸುತ್ತಲೂ ನಡೆಯುವ ಕಥೆಯೇ ಎಲ್ಲಾ ಧಾರಾವಾಹಿಗಳ ಕಥಾವಸ್ತುವಾಗಿರುತ್ತದೆ. ಒಬ್ಬಾಕೆ ಅತಿ ಎನ್ನುವಷ್ಟು ಮುಗ್ಧೆಯಾಗಿದ್ದರೆ ಇನ್ನೊಬ್ಬಳು ಅತಿ ಎನ್ನುವಷ್ಟು ಕ್ರೂರಿ. ಪ್ರತಿಯೊಂದು ಪಾತ್ರದಲ್ಲಿಯೂ ತಮ್ಮನ್ನೇ ಮಹಿಳೆಯರು ಆಹ್ವಾನಿಸಿಕೊಳ್ಳುವ ಕಾರಣ, ಧಾರಾವಾಹಿಗಳು ಇಂದು ಇಷ್ಟರಮಟ್ಟಿಗೆ ಜನಪ್ರಿಯವಾಗುತ್ತಿದೆ. ಇದೀಗ ಟಿಆರ್​ಪಿಗಾಗಿ ವಿಭಿನ್ನ ಕಥಾವಸ್ತು ಇರುವ ಧಾರಾವಾಹಿಗಳತ್ತ ನಿರ್ಮಾಪಕರು ಮುಂದಾಗುತ್ತಿದ್ದಾರೆ. ಕಥಾವಸ್ತುಗಳಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಕೊಡುತ್ತಾ ಧಾರಾವಾಹಿ ಪ್ರಿಯರನ್ನು ಹಿಡಿದಿಟ್ಟುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಂದು ಧಾರಾವಾಹಿ ಕೆಲ ದಿನ ಚೆನ್ನಾಗಿ ಓಡಿಲ್ಲ ಎಂದರೆ ಅದನ್ನು ಬಿಟ್ಟು ಬೇರೆ ಧಾರಾವಾಹಿಗಳತ್ತ (TV Serials) ಗಮನ ಹರಿಸುವುದು ಮಾಮೂಲು.  ಆದ್ದರಿಂದ ಚ್ಯೂಯಿಂಗ್​ ಗಮ್​ನಂತೆ ಧಾರಾವಾಹಿಗಳನ್ನು ಎಳೆಯುವುದರ ಜೊತೆಜೊತೆಗೇ ಪ್ರತಿಯೊಂದು ಕಂತಿನಲ್ಲಿಯೂ ಕುತೂಹಲ ತಣಿಸುವಂತೆ  ಮಾಡಲೇಬೇಕಾದ ಅನಿವಾರ್ಯತೆಯೂ ಇದೆ.‘

ಅಂಥದ್ದೇ ಒಂದು ಕುತೂಹಲ ಕೆರಳಿಸುತ್ತಿರುವ ಧಾರಾವಾಹಿಗಳಲ್ಲಿ ಒಂದು ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರೋ ಹಿಟ್ಲರ್​ ಕಲ್ಯಾಣ (Hitler Kalyana). ಈ ಧಾರಾವಾಹಿಯಲ್ಲಿ ಹೈಲೈಟ್​ ಆಗ್ತಿರೋದು ಪಾತ್ರಗಳಲ್ಲಿ ಒಂದು ಲೀಲಾದ್ದಾದರೆ, ಇನ್ನೊಂದು ಅಂತರಾ.  ಲೀಲಾ ಪಾತ್ರಧಾರಿ ಮಾಡುವುದೆಲ್ಲವೂ ಎಡವಟ್ಟೇ ಆಗಿದ್ದರೂ ಅದೆಲ್ಲವೂ ಪ್ಲಸ್​ ಪಾಯಿಂಟೇ ಆಗಿ ಈಕೆಯ ಮನೆಗೆ ನೆರವಾಗುತ್ತಿರುವುದು ಕೂಡ ಇಂಟರೆಸ್ಟಿಂಗ್​ ವಿಷಯ. ಯಾವುದೋ ಒಂದು ಸಂದರ್ಭದಲ್ಲಿ ವಯಸ್ಸಿನಲ್ಲಿ ತೀರಾ ದೊಡ್ಡವನಾಗಿರುವ ಎಜೆಗೆ ಮದುವೆಯಾಗಿ ತನಗಿಂತಲೂ ದೊಡ್ಡವರಾಗಿರುವ ಸೊಸೆಯಂದಿರಿಗೆ ಅತ್ತೆಯಾಗಿರುವ ಪಾತ್ರ ಲೀಲಂದು.   ಈ ಮೊದಲು ಗಂಡನ ಮನೆಯಲ್ಲಿ ಬಹುತೇಕ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗಿದ್ದ ಲೀಲಾ ಈಗ ಎಲ್ಲರಿಗೂ ಹತ್ತಿರ. ಆಕೆಯನ್ನು ಬಿಟ್ಟು ಇರುವುದು ಕಷ್ಟ ಎನ್ನುವ ಸ್ಥಿತಿ. ಅದೇ ಇನ್ನೊಂದೆಡೆ ಎಜೆಯ ಮೊದಲ ಪತ್ನಿಯಾಗಿದ್ದ ಅಂತರಾ ಸತ್ತು ಹೋಗಿದ್ದಾಳೆ. ಆದರೆ ಅವಳದ್ದೇ ರೂಪ ಇರುವ ಪ್ರಾರ್ಥನಾ ಅಂತರಾ ಎಂದು ಹೇಳಿಕೊಂಡು ಎ.ಜೆ ಮನೆ ಸೇರಿದ್ದಾಳೆ.

ಶೇಕ್​ ಇಟ್​ ಪುಷ್ಪವತಿಗೆ ಭರ್ಜರಿಯಾಗಿ ಸೊಂಟ ಬಳುಕಿಸಿದ ಹಿಟ್ಲರ್​ ಕಲ್ಯಾಣದ 'ಎಡವಟ್ಟು ಲೀಲಾ'

ಮೊದಲಿಗೆ ಸೌಮ್ಯ ರೂಪದ ಅಂತರಾಳ ರೂಪವನ್ನೇ ಪಡೆದಿರುವ ವಿಲನ್​ ಪ್ರಾರ್ಥನಾ ತಾನೇ ಅಂತರಾ ಎಂದುಕೊಂಡು ಮನೆಯವರನ್ನು ನಂಬಿಸುತ್ತಿದ್ದಾಳೆ. ಈಕೆಯ ಬಂಡವಾಳ ಬಯಲಾಗುವುದೇ ಎನ್ನುವುದು ಈಗಿರುವ ಕುತೂಹಲ. ಅದೇನೆ ಇದ್ದರೂ ಅಂತರಾ ಹಾಗೂ ಪ್ರಾರ್ಥನಾ ಪಾತ್ರಕ್ಕೆ ಜೀವ ತುಂಬಿರುವ ನಟಿ ರಜಿನಿ. ಪ್ರತಿಬಾರಿಯೂ ವಿಭಿನ್ನ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದ ರಂಜಿನಿ, ಇದೀಗ ವಿಲನ್ ಆಗಿ ನಟಿಸುತ್ತಿದ್ದು, ಉತ್ತಮವಾಗಿ ನಟಿಸುತ್ತಿದ್ದಾರೆ. ಹೆಚ್ಚಿನ ಜನರು ರಜನಿ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಸದಾ ಸೀರೆಯಲ್ಲಿಯೇ ಹಿಟ್ಲರ್​ ಕಲ್ಯಾಣದಲ್ಲಿ ಮಿಂಚುತ್ತಿರೋ ನಟಿ, ಇದೀಗ ಸ್ವಾತಿ ಮುತ್ತಿನ ಮಳೆಹನಿಯೇ ಹಾಡಿಗೆ ಸಕತ್​ ಸ್ಟೆಪ್​ ಹಾಕಿದ್ದಾರೆ.

ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದ ರಂಜಿನಿ, ನಂತರ ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮತ್ತು ಹಿರಿತೆರೆಯಲ್ಲಿ ಮಿಂಚಿದ್ದರು. ಸೋಶಿಯಲ್ ಮೀಡಿಯಾದಲ್ಲೂ ನಟಿ ಸದಾ ಆಕ್ಟೀವ್ ಆಗಿರುತ್ತಾರೆ. ಯಾವಾಗಲೂ ರೀಲ್ಸ್ ಮಾಡುತ್ತಾ, ಅಥವಾ ಫೋಟೋ ಶೂಟ್ ಮಾಡಿಸಿ  ಶೇರ್ ಮಾಡುತ್ತಿರುತ್ತಾರೆ. ಮೈಚಳಿ ಬಿಟ್ಟು ಇದೀಗ ಸ್ವಾತಿ ಮುತ್ತಿನ ಮಳೆ ಹನಿಯೇಗೆ ಡ್ಯಾನ್ಸ್​ ಮಾಡಿದ್ದು, ಅದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಈಕೆಯ ಫ್ಯಾನ್ಸ್​ ಫಿದಾ ಆಗಿದ್ದಾರೆ. 

ಪಾಕಿಸ್ತಾನದಲ್ಲಿ ನಟಿ ಐಶ್ವರ್ಯ ರೈ! ಹಲ್​ಚಲ್​ ಸೃಷ್ಟಿಸಿದ ವೈರಲ್ ಫೋಟೋ

 
 
 
 
 
 
 
 
 
 
 
 
 
 
 

A post shared by Rajini (@rajiniiofficial)

Follow Us:
Download App:
  • android
  • ios