Asianet Suvarna News Asianet Suvarna News

ಸೀರೆ ಉಟ್ರೂ ಶೋಕಿ ಬಿಟ್ಟಿಲ್ಲ, ನೀನೊಬ್ಳು ಹೆಣ್ಣಾ ಅಂತ ನಿವೇದಿತಾ ವಿರುದ್ಧ ಫ್ಯಾನ್ಸ್​ ತಿರುಗಿ ಬೀಳೋದಾ?

ನಟಿ ನಿವೇದಿತಾ ಗೌಡ, ಸೀರೆಯುಟ್ಟು ಕ್ಯೂಟ್​ ವಿಡಿಯೋ ಶೇರ್​ ಮಾಡಿದ್ದಾರೆ. ಆದರೆ ಫ್ಯಾನ್ಸ್​ ಗರಂ ಆಗಿದ್ದಾರೆ. ಇದಕ್ಕೆ  ಕಾರಣವೇನು?
 

Actress Nivedita Gowda shared a cute video in saree But the fans  angry suc
Author
First Published Nov 5, 2023, 11:41 AM IST

 ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ, ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 


ಈಗ ಸೀರೆಯುಟ್ಟು ಕ್ಯೂಟ್​ ವಿಡಿಯೋ ಒಂದನ್ನು ಶೇರ್​ ಮಾಡಿದ್ದಾರೆ ನಿವೇದಿತಾ. ಅದರಲ್ಲಿ ಅವರು, ತಮ್ಮ ರೆಪ್ಪೆಯನ್ನು ಉದ್ದಕ್ಕೆ ಬೆಳೆಸಿರುವ ಬಗ್ಗೆ ತೋರಿಸಿದ್ದಾರೆ. ತಾವು ರೆಪ್ಪೆ ಉದ್ದ ಬೆಳೆಸುವ ತರಬೇತಿ ಪಡೆದು ಹೀಗೆ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಹಾಡಿಗೆ ತಕ್ಕಂತೆ ಕಣ್ಣನ್ನು ಹಾಗೂ ರೆಪ್ಪೆ ಬಡಿಯುತ್ತಾ ಕ್ಯೂಟ್​ ಆಗಿ ಕಾಣಿಸುತ್ತಿದ್ದಾರೆ. ಅವರ ಸುಂದರವಾದ ಕಣ್ಣುಗಳಿಗೆ ಈ ಉದ್ದನೆಯ ರೆಪ್ಪೆಗಳು ಸಕತ್​ ಕ್ಯೂಟ್​ ಕಾಣಿಸುತ್ತಿದೆ. ಯಾವಾಗಲೂ ಮಿನಿ, ಚೆಡ್ಡಿ, ಷಾರ್ಟ್ಸ್ ಹಾಕಿಕೊಂಡು ರೀಲ್ಸ್​ ಮಾಡುತ್ತಿದ್ದ ನಟಿ ಈಗ ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ಇಷ್ಟಾದರೂ ಫ್ಯಾನ್ಸ್​ ಗರಂ ಆಗಿದ್ದಾರೆ. ಈ ವಿಡಿಯೋಗೆ ನೂರಾರು ಮಂದಿ ಹಾರ್ಟ್​ ಇಮೋಜಿ ಹಾಕಿದ್ದರೂ, ಇನ್ನೂ ಹಲವರು ಗರಂ ಆಗಲು ಎರಡು ಮುಖ್ಯ ಕಾರಣಗಳು ಇವೆ.

ಪದೇ ಪದೇ ಚಡ್ಡಿ ಯಾಕೆ ತೋರಿಸ್ತಿಯಾ? ಪ್ಯಾಂಟ್​ ಕೊಳ್ಳೋಕೂ ದುಡ್​ ಇಲ್ವಾ? ನಿವೇದಿತಾಗೆ ನೆಟ್ಟಿಗರ ಕ್ಲಾಸ್​!

ಅವೆಂದರೆ, ನಿವೇದಿತಾ ಸದಾ ಇಂಗ್ಲಿಷ್​ ಹಾಡಿಗೆ ರೀಲ್ಸ್​ ಮಾಡುತ್ತಾರೆ ಎಂದು ಟ್ರೋಲ್​ ಆಗುತ್ತಲೇ ಇರುತ್ತಾರೆ. ಇದೀಗ ಸೀರೆಯುಟ್ಟರೂ ಇಂಗ್ಲಿಷ್​ ಹಾಡಿಗೆ ಕಣ್ಣು ಮಿಟುಕಿಸಿದ್ದನ್ನು ಕೆಲವರು ಸಹಿಸುತ್ತಿಲ್ಲ. ಸೀರೆ ಹಾಕಿದ್ರೂ ಇಂಗ್ಲೀಷ್ ಶೋಕಿ ಬಿಟ್ಟಿಲ್ಲ ಅಲ್ಲಮ್ಮ ತಾಯಿ..ನಿಂಗೆ ಯೇನ್ ತೊಗೊಂಡು ಹೊಡಿಬೇಕು ಹೇಳು..ದುಡ್ಡು ಮಾಡೋದು ಇಲ್ಲೆ ಹುಟ್ಟಿರೋದು ಇಲ್ಲೆ ಆದ್ರೆ ಬೇರೆ ಭಾಷೆ ಶೋಕಿ ಮಾಡ್ತಿಯ ನಚ್ಕೆ ಆಗೋಲ್ವಾ ನಿಂಗೆ ಎಂದು ನೆಟ್ಟಿಗರೊಬ್ಬರು ನಟಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಇನ್ನು ಎರಡನೆಯದಾಗಿ ಈಗೀಗ ತಾಳಿ, ಮಂಗಳ ಸೂತ್ರ ಎನ್ನುವುದು ಕೆಲವು ಹೆಣ್ಣುಮಕ್ಕಳಿಗೆ ಫ್ಯಾಷನ್​ ಆಗಿಬಿಟ್ಟಿದೆ. ಇದು ಷೋಗೆ ಮಾತ್ರ ಎನ್ನುವಂತಾಗಿದೆ. ಸಾಮಾನ್ಯ ಯುವತಿಯರಿಗೇ ಹೀಗೆ ಮಾಡುತ್ತಿರುವಾಗ ಇನ್ನು ನಟಿಯರಿಗೆ ಇದೊಂದು ಫ್ಯಾಷನ್​ ಅಷ್ಟೇ. ಆದರೆ  ಹಿಂದೂ ಸಂಪ್ರದಾಯದಲ್ಲಿ ಮಂಗಳಸೂತ್ರಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇರುವ ಕಾರಣ, ನಟಿಯ ಬೋಳು ಕುತ್ತಿಗೆ ನೋಡಿ ಅದನ್ನು ಕೆಲವರು ಸಹಿಸುತ್ತಿಲ್ಲ. ನೀನೊಬ್ಬಳು ಹೆಣ್ಣಾ ಎಂದು ಪ್ರಶ್ನಿಸುತ್ತಿದ್ದಾರೆ. ಮದುವೆಯಾಗಿರುವ ನಿನಗೆ ಮಂಗಳಸೂತ್ರ ಎನ್ನುವುದು ಫ್ಯಾಷನ್ನಾ ಛೇ ಎನ್ನುತ್ತಿದ್ದಾರೆ. ಇನ್ನುಕೆಲವರು ನಿಮ್ಮಂಥ ನಟಿಯರಿಂದಲೇ ಇಂದಿನ ಯುವತಿಯರು ತಪ್ಪು ಹಾದಿ ಹಿಡಿಯುತ್ತಿರುವುದು ಎಂದು ಕಮೆಂಟ್​  ಮಾಡುತ್ತಿದ್ದಾರೆ. 

ಕೆಲ ದಿನಗಳ ಹಿಂದೆ ನಟಿ  ಚಡ್ಡಿ ಧರಿಸಿ ರೀಲ್ಸ್​ ಮಾಡಿದ್ದರು. ಇದಕ್ಕೆ ಸಕತ್​ ಟ್ರೋಲ್​ಗೆ ಒಳಗಾಗಿದ್ದರು.  ಪದೇ ಪದೇ ಈ ರೀತಿಯ ರೀಲ್ಸ್​ ಮಾಡುತ್ತಿರುವುದಕ್ಕೆ ಹಲವು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದರು. ಮದುವೆಯಾಗಿ ಮೂರು ವರ್ಷವಾದರೂ ಇಂದಿಗೂ ನಮ್ಮ ಸಂಸ್ಕೃತಿಯನ್ನು ಕಲಿಯದೇ ವಿದೇಶಿಗರಂತೆ ಚಿಕ್ಕ ಚಿಕ್ಕ ಡ್ರೆಸ್​ ಹಾಕುತ್ತಾ ಕುಣಿಯುವುದನ್ನು ಬಿಡು ಎಂದು ಕೆಲವರು ಹೇಳುತ್ತಿದ್ದರೆ, ಸಂಪ್ರದಾಯ, ಸಂಸ್ಕೃತಿಯ ಅರಿವು ಇಲ್ಲದಿದ್ದರೆ ಭಾರತದಲ್ಲಿ ಇರಬೇಡ ಎಂದು ಹಲವರು ಸಿಟ್ಟಿನಿಂದ ಹೇಳಿದ್ದರು. ಇನ್ನು ಕೆಲವರು, ಚಡ್ಡಿ ತೋರಿಸೋ ಕೆಲಸ ಪತಿಯ ಬಳಿ ಇಟ್ಟುಕೋ. ಸಿಕ್ಕಾಪಟ್ಟೆ ದುಡಿಯುವ ನಿನಗೆ ಒಂದು ಪ್ಯಾಂಟ್​ ಖರೀದಿ ಮಾಡಲು ಆಗಲ್ವಾ ಎಂದು ಪ್ರಶ್ನಿಸಿದ್ದರು. 

ರಾಖಿ ಪತಿ ಆದಿಲ್‌ ಜೊತೆ ಶೆರ್ಲಿನ್‌ ಚೋಪ್ರಾ ಮತ್ತೆ ರೊಮ್ಯಾನ್ಸ್‌: ವಿಡಿಯೋ ನೋಡಿ ದಂಗಾದ ಫ್ಯಾನ್ಸ್‌!

 

Follow Us:
Download App:
  • android
  • ios