Asianet Suvarna News Asianet Suvarna News

ಬಿಗ್ ಬಾಸ್ ದಿವ್ಯಾ ಉರುಡುಗ ಪರ ನಿಂತ 'ಲಕ್ಷ್ಮಿ ಬಾರಮ್ಮ' ಚಿನ್ನು ಕವಿತಾ ಗೌಡ!

BBK8 ಫಿನಾಲೆ ಸ್ಪರ್ಧಿಗಳ ಪರ ವೋಟ್ ಕೇಳುತ್ತಿರುವ ಸಿನಿ ಸ್ನೇಹಿತರು. ದಿವ್ಯಾ ಉರುಡುಗ ಪರ ಚಿನ್ನು....

Actress Kavitha gowda vote appeals for BBK8 Divya Uruduga vcs
Author
Bangalore, First Published Aug 3, 2021, 3:55 PM IST
  • Facebook
  • Twitter
  • Whatsapp

ಬಿಗ್ ಬಾಸ್‌ ಸೀಸನ್‌ 8 ಫಿನಾಲೆ ವಾರ ನಡೆಯುತ್ತಿದೆ. ಈ ವಾರ ಯಾರು ಅತಿ ಹೆಚ್ಚು ವೋಟ್ ಪಡೆಯುತ್ತಾರೋ, ಅವರು ಫಿನಾಲೆ ಹಂತ ತಲುಪುತ್ತಾರೆ. ಇಲ್ಲವಾದರೆ ಮಿಡ್‌ ವೀಕ್ ಎಲಿಮಿನೇಷನ್‌ನಿಂದ ಹೊರ ಬರುತ್ತಾರೆ. ಫಿನಾಲೆ ವೀಕ್ ಖುಷಿ ಹಾಗೂ ಮೆನಯಿಂದ ಹೊರ ಹೋಗುವ ಭಯ ಎರಡೂ ಸಮನಾಗಿ ಎಂಜಾಯ್ ಮಾಡುತ್ತಿರುವ ಸ್ಪರ್ಧಿಗಳ ಪರ ಹೊರಗಿರುವ ಸಿನಿ ಸ್ನೇಹಿತರು ವೋಟ್‌ಗಾಗಿ ಅಪೀಲ್ ಮಾಡುತ್ತಿದ್ದಾರೆ. 

ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಪಡೆದಿರುವ ದಿವ್ಯಾ ಉರುಡುಗ ಹಾಗೂ ಸ್ನೇಹಿತರು ಸೋಷಿಯಲ್ ಮೀಡಿಯಾದಲ್ಲಿ ವೋಟ್ ಅಪೀಲ್ ಮಾಡುತ್ತಿದ್ದಾರೆ. ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಿನ್ನು ಅಲಿಯಾಸ್ ಕವಿತಾ ಗೌಡ ಕೂಡ ಪೋಸ್ಟ್‌ ಹಾಕುವ ಮೂಲಕ ವೋಟ್ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಬಿಗ್ ಬಾಸ್ ಮನೆಯಲ್ಲಿದ್ದುಕೊಂಡೆ ಕೋರ್ಟ್ ಮೆಟ್ಟಿಲೇರಿದ ಬಿಗ್‌ಬಾಸ್‌ ದಿವ್ಯಾ!

'ಹಾಯ್ ಎಲ್ಲರಿಗೂ. ನನ್ನ ಆತ್ಮೀಯ ಸ್ನೇಹಿತೆ ದಿವ್ಯಾ ಉರುಡುಗ ಈಗ ಬಿಗ್ ಬಾಸ್‌ನಲ್ಲಿದ್ದಾರೆ. ಆಕೆ ತುಂಬಾ ಸ್ಟ್ರಾಂಗ್, ಔಟ್‌ ಸ್ಪೋಕನ್, ಚಾಲೆಂಜಿಂಗ್. ಪ್ರತಿ ಟಾಸ್ಕ್‌ನಲ್ಲಿಯೂ ಶ್ರಮ ಮೀರಿ ಸ್ಪರ್ಧಿಸುತ್ತಾಳೆ. ದಯವಿಟ್ಟು ಆಕೆಗೆ ಸಪೋರ್ಟ್ ಮಾಡಿ, ನಿಮ್ಮ ಪ್ರೀತಿ ತೋರಿಸಿ ವೋಟ್ ಮಾಡಿ. ಫಿನಾಲೆ ವೀಕ್‌ನಲ್ಲಿದ್ದಾಳೆ, ಫಿನಾಲೆ ತಲುಪಲು ಸಹಾಯ ಮಾಡಿ. ನನ್ನ ಕಡೆಯಿಂದ ಬೆಸ್ಟ್‌ ವಿಶ್,' ಎಂದು ಬರೆದುಕೊಂಡಿದ್ದಾರೆ.

'ತಕದಿಮಿ ತಕದಿಮಿ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕವಿತಾ ಗೌಡ ಹಾಗೂ ದಿವ್ಯಾ ಉರುಡುಗ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಬ್ಬರೂ ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದು ಉತ್ತಮ ಬಾಂಧವ್ಯ ಹೊಂದಿದ್ದಾರೆ.

Follow Us:
Download App:
  • android
  • ios