Asianet Suvarna News Asianet Suvarna News

ನಂಗೇನಾದ್ರೂ ಆದ್ರೆ ಯಾರನ್ನು ಸುಮ್ಮನೆ ಬಿಡಲ್ಲ ಬಿಗ್‌ಬಾಸ್‌ ವಿನಯ್‌ ಧಮ್ಕಿ, ಆ ಕರಾಳ ದಿನ ನೆನೆದ ನಟಿ ಇಳಾ ವಿಟ್ಲ!

ಬಿಗ್‌ಬಾಸ್‌ ಸ್ಪರ್ಧಿ ವಿನಯ್‌ ವಿರುದ್ಧ ಕಿರುತೆರೆ ನಟಿ ಇಳಾ ವಿಟ್ಲ ಬರೆದುಕೊಂಡಿದ್ದಾರೆ. 8 ವರ್ಷಗಳ ಹಿಂದೆ ರಿಯಾಲಿಟಿ ಶೋನಲ್ಲಿ ವಿನಯ್‌ ವರ್ತನೆಯಿಂದ ಗಂಡ ಆರ್ಯನ್‌ ಮತ್ತು ಅವರು ಪಟ್ಟ ಕಷ್ಟದ ಬಗ್ಗೆ ಬರೆದುಕೊಂಡಿದ್ದಾರೆ.

actress ilaa vitla opinion about vinay gowda behavior in kannada bigg boss house gow
Author
First Published Dec 11, 2023, 3:07 PM IST

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಬಿಗ್‌ಬಾಸ್‌ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಸ್ಪರ್ಧಿಗಳು ಪರಸ್ಪರ ಮಾನವೀಯತೆ ಮರೆತು ಆಡುತ್ತಿದ್ದಾರೆ. ವೈಯಕ್ತಿಕ ತೇಜೋವಧೆಗಳು ಆಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಟಾಸ್ಕ್‌ನಲ್ಲಿ ಸ್ಪರ್ಧಿಗಳಿಗೆ ಗಾಯವಾಗುವ ಮಟ್ಟಿಗೆ ಆಟ ನಡೆಯುತ್ತಿದ್ದರೂ ಬಿಗ್‌ಬಾಸ್‌ ತಡೆಯುವ ಯತ್ನ ಮಾಡಿಲ್ಲ. ಬಿಗ್‌ಬಾಸ್‌ ನವರೇ ಮಾನವೀಯತೆ ಮರೆತಿದ್ದಾರೆ. ಮಾತ್ರವಲ್ಲ ವಿನಯ್‌ ಬಹಳ ಅಗ್ರೆಶನ್‌ನಲ್ಲಿ ಆಟವಾಡುತ್ತಾರೆ. ಸ್ಪರ್ಧಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ. ಹೊರಗಡೆ ಬಂದಾಗ ನೋಡಿಕೊಳ್ಳುತ್ತೇನೆ ಎಂದೆಲ್ಲ ಹೇಳುತ್ತಿದ್ದಾರೆ. ಅವರಿಗೆ ಮಾತ್ರವೇ ಫ್ಯಾಮಿಲಿ ಕುಟುಂಬ ಇರುವುದಾ. ಮಿಕ್ಕ ಯಾವ ಸ್ಪರ್ಧಿಗಳಿಗೆ ಯಾರೂ ಇಲ್ಲವೇ? ಬಿಗ್‌ಬಾಸ್‌ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಶೋ ವಿರುದ್ಧ ಈಗಾಗಲೇ ಪೊಲೀಸ್‌ ದೂರು ಕೂಡ ದಾಖಲಾಗಿದೆ.

ಕನ್ನಡ ಬಿಗ್ ಬಾಸ್ ವಿರುದ್ಧ ಪೊಲೀಸ್‌ ದೂರು ದಾಖಲು, ಶೋನಿಂದ ಹೊರಬರುವಂತೆ ಕಿಚ್ಚನಿಗೆ ಮನವಿ

ಇದೆಲ್ಲದರ ನಡುವೆ ಈಗ ಸ್ಪರ್ಧಿ ವಿನಯ್‌ ವಿರುದ್ಧ ಕಿರುತೆರೆ ನಟಿ ಇಳಾ ವಿಟ್ಲ ಬರೆದುಕೊಂಡಿದ್ದಾರೆ. 8 ವರ್ಷಗಳ ಹಿಂದೆ ಅಂದರೆ 2015ರಲ್ಲಿ ಸ್ಟಾರ್‌ ಸುವರ್ಣವಾಹಿನಿಯಲ್ಲಿ ಸೂಪರ್‌ ಜೋಡಿ ರಿಯಾಲಿಟಿ ಶೋ ಬಂದಿತ್ತು. ಈ ಕಾರ್ಯಕ್ರಮದಲ್ಲಿ ರಿಯಲ್‌ ಜೋಡಿಗಳು ಭಾಗವಹಿಸಿದ್ದರು. ನಟಿ ಸ್ವಪ್ನ ದೀಕ್ಷಿತ್‌ ಜೋಡಿ, ನಟಿ ಇಳಾ ವಿಟ್ಲ ಆರ್ಯನ್‌ ಜೋಡಿ, ವಿನಯ್‌ ಗೌಡ-ಅಕ್ಷತಾ ಜೋಡಿ, ನಟಿ ಸ್ಫೂರ್ತಿ ವಿಶ್ವಾಸ್‌, ರಜತ್‌-ಅಕ್ಷತಾ ಹೀಗೆ ಹಲವರು ಭಾಗವಹಿಸಿದ್ದರು.

ಕಪ್ಪುಕನ್ನಡಕ ಧರಿಸಿ ಸಂಗೀತಾ, ಪ್ರತಾಪ್‌ ರೀ ಎಂಟ್ರಿ, 'ಇದೇ ನನ್ನ ಕೊನೇ ಬಿಗ್‌ಬಾಸ್‌' ಮುನ್ಸೂಚನೆ ಕೊಟ್ರಾ ಸುದೀಪ್‌?

ಅಕುಲ್‌ ಬಾಲಾಜಿ ನಿರೂಪಕರಾಗಿದ್ದ ಈ ಶೋನಲ್ಲಿ  ಕೂಡ ವಿನಯ್‌ ಆಟ ಕ್ರೂರವಾಗಿತ್ತು ಎಂದು ಇಳಾ ವಿಟ್ಲ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಬರೆದುಕೊಂಡಿದ್ದು,  "ಇದೇ ವಿನಯ್ ಸೂಪರ್ ಜೋಡಿ ಟೈಮಲ್ಲಿ ನನ್ನ ಕಣ್ಣೆದುರಿಗೆ ಪ್ಲಾನ್ ಮಾಡ್ಕೊಂಡು ಬಂದು ನಮ್ಮತ್ರ ಹೇಳ್ತಾ ಇದ್ರು, ನನಗೇನಾದ್ರೂ ಆದ್ರೆ ನಾನ್ ಯಾರನ್ನು ಸುಮ್ಮನೆ ಬಿಡಲ್ಲ ಅಂತ ಹೆದ್ರಿಸೋದು. ಆಮೇಲೆ ಅಂತ ಕೆಲಸ ಅವರೇ ಮಾಡೋದು. ಅಂದು ವಿನಯ್ ಜೊತೆ ನಮ್ಮ ಯಜಮಾನರು (ನಟ ಆರ್ಯನ್) ಆಡಿದಾಗ  ಆಟದಲ್ಲಿ ದವಡೆ ಹಲ್ಲು ಮುರಿದ್ರು ಅಷ್ಟು ಸಾಲದು ಅಂತ ರಿಬ್ಬು ಫ್ಯಾಕ್ಚರ್  ಮಾಡಿದ್ರು, ಆದ್ರೂ ಅವರಿಗೆ ನಾವು ಒಂದು ಮಾತು ಏನು ಹೇಳಿಲ್ಲ,, ಶೋ ಮುಗಿದ ಮೇಲೆ  ನೋವು ಜಾಸ್ತಿ ಆಯ್ತು,, ಆರು ತಿಂಗಳು ತಿಂಗಳು ಕಷ್ಟ ಪಟ್ಟರು ಎಂದು ಬಹಿರಂಗಪಡಿಸಿದ್ದಾರೆ.

ಇದೇ ಪೋಸ್ಟ್ ಗೆ ಕಮೆಂಟ್‌ ಮಾಡಿರುವ ನಟಿ ಸ್ವಪ್ನ ದೀಕ್ಷಿತ್ ಕೂಡ , ನಾನು ಅದೇ ಶೋ ನಲ್ಲಿ ಇದ್ದೆ. ವಿನಯ್ ಅವರ ವರ್ತನೆ ಹೇಗೆ ಅಂತ ನನಗು ಗೊತ್ತು ಎಂದು ಬರೆದುಕೊಂಡಿದ್ದಾರೆ.

ಇಳಾ ವಿಟ್ಲ ಅವರ ಪೋಸ್ಟ್‌ ನ ಸಾರಾಂಶ ಇಂತಿದೆ:
ಬಿಗ್ ಬಾಸ್ ಸೀಸನ್ 10 
 ನಾನೊಬ್ಳು ಆರ್ಟಿಸ್ಟ್ ಆಗಿ ರಿಯಾಲಿ ಟೀ ಶೋ ಗಳನ್ನ ಮಾಡಿದ್ದಕ್ಕೆ ಹಾಗೇ ಸಾಮಾನ್ಯವಾಗಿ ಬಿಗ್ ಬಾಸ್ ನೋಡ್ತಿರೋ ಕಾರಣ ವಿನಯ್ ಅವರನ್ನ ಹತ್ತಿರದಿಂದ ನೋಡಿ ಅನುಭವಿಸಿರೋದಕ್ಕೆ ಪೋಸ್ಟ್ ಮಾಡ್ತಿದೀನಿ  ನನಗೇನಾದ್ರೂ ಆದ್ರೆ ನಾನು ಸುಮ್ನೆ ಬಿಡಲ್ಲ ಸುಮ್ನೆ ಬಿಡಲ್ಲ ಅಂತಾನೆ ಇರ್ತಾರಲ್ವಾ, ಆದ್ರೆ ಏನ್ ಮಾಡ್ತಿದ್ರು ಅವರಿಂದ ಬೇರೆಯವರಿಗೆ ತೊಂದರೆ ಆದ್ರೆ ಏನ್ ಮಾಡ್ಬೇಕಿತ್ತು  ಆಟ ಅಂದ್ಮೇಲೆ ಹೆಚ್ಚು ಕಡಿಮೆ ಇದ್ದೇ ಇರುತ್ತೆ ಸ್ವಲ್ಪ ಸ್ವಲ್ಪ ಗಾಯಗಳು ಆಗುತ್ತೆ ಅದು ಸರ್ವೇಸಾಮಾನ್ಯ  ಬೇರೆಯವರು ಯಕ್ಕುಟೋದ್ರು ಪರ್ವಾಗಿಲ್ಲ  ನಾನು ಗೆಲ್ಲಲೇ ಬೇಕು ಅನ್ನೋ ಮನಸ್ಥಿತಿ ಇರೋದು ಯಾವತ್ತಿಗೂ ಉದ್ದಾರ ಆಗಿಲ್ಲ  ರಿಯಾಲಿಟಿ ಶೋ ನೇ ಹಾಗೆ ಏನು ಮಾಡಕ್ಕಾಗಲ್ಲ ಇಷ್ಟ ಇದ್ರೆ ಹೋಗ್ಬೇಕು ಇಲ್ಲ ಅಂದ್ರೆ ಸುಮ್ನಿರಬೇಕು ಬಿಗ್ ಬಾಸ್ ಅಂದ್ರೆ ನನಗೆ ಮೊದಲಿಂದಾನು ಇಷ್ಟ ನಮ್ಮ ಕಿರುತೆರೆ ಹೆಮ್ಮೆ  ಮೊದ್ಲು ಕಿರುತೆರೆ ಅಂತ ತಾತ್ಸಾರ ಮಾಡಿದವರನ್ನು ಕಿರುತೆರೆಗೆ ಕರ್ಕೊಂಡು ಬಂದಿರುವ ಹೆಮ್ಮೆಯ ಶೋ  ಕಿಚ್ಚ ಸುದೀಪ್ ಅವರು ಹೇಳುವ ಬುದ್ಧಿ ಮಾತು ನಮ್ಮ ಜೀವನಕ್ಕೂ ಅನ್ವಯಿಸುತ್ತೆ ಬಿಗ್ ಬಾಸ್ ಗೆ ಹೋಗ್ಬೇಕು ಅಂತೇನಿಲ್ಲ ಸುಮ್ನೆ ಕೇಳಿಸಿಕೊಂಡರೆ ಸಾಕಾಗುತ್ತೆ 
 ಇದೇ ವಿನಯ್ ಸೂಪರ್ ಜೋಡಿ ಟೈಮಲ್ಲಿ ನನ್ನ ಕಣ್ಣೆದುರಿಗೆ ಪ್ಲಾನ್ ಮಾಡ್ಕೊಂಡುಬಂದು ನಮ್ಮತ್ರ ಹೇಳ್ತಾ ಇದ್ರು ನನಗೇನಾದ್ರೂ ಆದ್ರೆ ನಾನ್ ಯಾರನ್ನು ಸುಮ್ಮನೆ ಬಿಡಲ್ಲ ಅಂತ ಹೆದ್ರಿಸೋದು ಆಮೇಲೆ ಅಂತ ಕೆಲಸ ಅವರೇ ಮಾಡೋದು  ಅವತ್ತು ವಿನಯ್ ಜೊತೆ ನಮ್ಮೆಜಮಾನ್ರು ಆಡಿದಾಗ  ಆಟದಲ್ಲಿ ದವಡೆ ಹಲ್ಲು ಮುರಿದ್ರು ಅಷ್ಟು ಸಾಲದು ಅಂತ ರಿಬ್ಬು ಫ್ಯಾಕ್ಚರ್  ಮಾಡಿದ್ರು, ಆದ್ರೂ ಅವರಿಗೆ ನಾವು ಒಂದು ಮಾತು ಏನು ಹೇಳಿಲ್ಲ,, ಶೋ ಮುಗಿದ್ ಮೇಲೆ  ನೋವು ಜಾಸ್ತಿ ಆಯ್ತು,, ಆರು ತಿಂಗಳು  ಸರಿಯಾಗಿ ಕೆಲಸ ಮಾಡಕ್ಕಾಗ್ದೆ ಆರ್ಯನ್ಸರು ಒದ್ದಾಡಿದ್ದಾರೆ ಡಾಕ್ಟ್ರು ಏನು ಮಾಡಬಾರದು ರೆಸ್ಟ್ ಮಾಡಿ ಅಂತ ಹೇಳಿದ್ರು ಅವತ್ತು ನಾನು ಎಷ್ಟು ಕಣ್ಣೀರು ಹಾಕ್ತ ಕೂತಿದ್ದೆ ಅನ್ನೋದು ಭಗವಂತನಿಗೆ ಮಾತ್ರ ಗೊತ್ತು   ಇದೇ ಪರಿಸ್ಥಿತಿ ಅವರಿಗೆ ಬಂದಿದ್ರೆ  ಏನ್ ಮಾಡ್ತಿದ್ರು  ನಾವು ಕಲಾವಿದರು  ಆಗಿ ಹೋಗಿರೋ ಘಟನೆಗಳಿಗೆ ರಿಯಾಕ್ಷನ್ ಕೊಡೋದು,, ದುರಹಂಕಾರದ ಮಾತುಗಳನ್ನ ಆಡೋದು ಒಬ್ಬರಿಗೊಬ್ರು ಜಗಳ ಮಾಡ್ಕೊಂಡು  ಲೈಫ್ ಹಾಳ್ ಮಾಡ್ಕೊಳೋದು ಬೇಡ ಎಲ್ಲರೂ ಚೆನ್ನಾಗಿರ್ಲಿ ಅಂತ ಸುಮ್ನೆ ಇದ್ವಿ ಅದ್ರಲ್ಲೂ ಅವರ ತಾಯಿ ತುಂಬಾ ಒಳ್ಳೆ ಮನಸ್ಸು ಇರೋರು ಯಾರ್ ಗೆದ್ರು ಪರ್ವಾಗಿಲ್ಲ ಎಲ್ಲಾ ನನ್ನ ಮಕ್ಕಳೇ ಅಂತ ಹೇಳಿರೋ ಮಾತು ಈಗಲೂ ನನಗೆ ನೆನಪಿದೆ ಸೋ ಸ್ವಲ್ಪ ದಿನ ನೋವಿರುತ್ತೆ,ಆಮೇಲೆ ಇರೋದೇ ಜೀವನ  ಅಂತ ಸುಮ್ಮನೆ ಇದ್ವಿ  ಯಾಕೆಂದ್ರೆ ನಮ್ಮಿಂದಾಗಿ  ಎಲ್ಲ ಫ್ಯಾಮಿಲಿಯವರು ಅನುಭವಿಸುವುದು ಒಳ್ಳೆ ಲಕ್ಷಣ ಅಲ್ಲ ಅವರ ಫ್ಯಾಮಿಲಿ ಮಾತ್ರ ಚೆನ್ನಾಗಿರಬೇಕು  ಉಳಿದವರು ಯಕ್ಕುಟ್ ಹೋದ್ರು ಅವರಿಗೆ ತೊಂದರೆ ಇಲ್ಲಅನ್ಸುತ್ತೆ, ಈ ತರ ಹೆದ್ರಿಸೋರಿಗೆ ನಂದೊಂದು ಮಾತು, ಒಂದು ವೇಳೆ ನೀವೇನಾದ್ರೂ ಮಾಡಿದ್ರೆ ಬೇರೆಯವರು ಕಡ್ಲೆಪುರಿ ತಿನ್ಕೊಂಡು ಕೂತಿರ್ತಾರಾ  ಗೊತ್ತಿಲ್ಲದೆ ಆಟದಲ್ಲಿ ಏನೋ ಒಂದಾದರೆ ಈ ಮನುಷ್ಯನ ಯೋಗ್ಯತೆನೆ ಇಷ್ಟು ಹಾಳಾಗೋಗ್ಲಿ ಅಂತ  ಬಿಡಬಹುದು ಆಟದಿಂದ ಹೊರಗೆ ಬಂದ ಮೇಲೆನೂ ಇವ್ರು ನಾ ನಿನ್ನ  ಹೊರಗ್ ಹೋದ್ಮೇಲೆ ಸುಮ್ನೆ ಬಿಡಲ್ಲ ನಾನು ಸುಮ್ಮನೆ ಬಿಡಲ್ಲ ಅಂದ್ರೆ ಎದುರುಗಡೆಯವರು ಕೈಕಟ್ಟಿ ಕೂತ್ಕೊಂಡಿರ್ತಾರಾ, ಐಯೋ ದೇವ್ರೇ ಅವರು ಅದಕ್ಕಿಂತ ದೊಡ್ಡ ರೌಡಿಗಳಾಗಿರುತ್ತಾರೆ ಬಿಡ್ತಾರಾ  ಇವರೆಲ್ಲ ಲೈಫ್ ಹಾಳ್ ಮಾಡ್ಕೊಳಕ್ ಬಂದಿದ್ದಾರಾ ಜೀವನ ಮಾಡ್ಕೊಳ್ಳೋಕೆ ಬಂದಿದ್ದರೋ ಒಂದು ಅರ್ಥ ಆಗ್ತಿಲ್ಲ ಫ್ಯಾಮಿಲಿ ಮುಖ್ಯ ಅಂತ 50ಸರಿ ಹೇಳ್ತಿರಲ್ಲ, ಒಂದು ವೇಳೆ ನೀವೇನಾದರೂ ಮಾಡಿದ್ರಿ ಅಂತ ಇಟ್ಕೊಳಿ ಎದ್ರುಗಡೆ ಅವ್ರು ನಿಮ್ಮನ್ ಏನೋ ಒಂದು ಮಾಡ್ತಾರೆ ಅಲ್ಲಿಗೆ ಯಾರಿಂದ ಯಾರು ಫ್ಯಾಮಿಲಿ ಹಾಳ್ ಮಾಡುದ್ರು ಅಷ್ಟು ತಲೆ ಇಲ್ವಾ ಇವರಿಗೆ ಖರ್ಮ,ಎಲ್ಲಾ ಆದ್ಮೇಲೆ ಏನು ಗೊತ್ತಿಲ್ಲದಂಗೆ ಸಾರಿ ಸರ್ ಸಾರಿ ಸರ್ ಅಂತ ಹೇಳೋದು ಅಷ್ಟೇ ನಾನು ಬದಲಾಗಿದ್ದಾರೆ ಅನ್ಕೊಂಡಿದ್ದೆ ಯಾಕೆಂದ್ರೆ ಒಬ್ಬ ಮನುಷ್ಯ ಅಂದಮೇಲೆ ತಪ್ಪು ಮಾಡೋದು ಸಹಜ  ಒಂದು ಸಲ ಮಾಡಿದ್ಮೇಲೆ ಮತ್ತೆ ಅದೇ ತಪ್ಪನ್ನು,ಇವರು ಬದಲಾಗಲ್ಲ ಯಾಕೆಂದ್ರೆ ಇಂಥ ಬಿಗ್ ಬಾಸ್ ಅಂತ ಶೋದಲ್ಲೂನು ಕಂಟ್ರೋಲ್ ಇಲ್ದೆ ಮಾತಾಡ್ತಿದ್ದಾರೆ ಅಂದ್ರೆ ಹೊರಗಡೆ ಹೇಗಿರಬಹುದು ಅಷ್ಟೇ ನನ್ನ ಪ್ರಶ್ನೆ, ಭಾಗವಂತ ಇನ್ನಾದರೂ ಒಳ್ಳೆ ಬುದ್ದಿ ಕೊಡ್ಲಿ , ನನ್ ಜೀವನದಲ್ಲಿ ನಾನು ಯಾರಿಗೂ ಹೆದರೋ ಮಾತಿಲ್ಲ ನನ್ ಯಾರ್ ಸುದ್ದಿಗೂ ಹೋಗಲ್ಲ ಯಾಕೆಂದ್ರೆ ಎಲ್ಲರ ಫ್ಯಾಮಿಲಿ ನು ಚೆನ್ನಾಗಿರಬೇಕು ಹೋಗುವಾಗ ಏನು ತಗೊಂಡ್ ಹೋಗಲ್ಲ ನಾವು ಅಂತ ತಿಳ್ಕೊಂಡಿರೋಳು ಬದುಕಿರೋದು ಇಷ್ಟು ದಿನ ಪ್ರೀತಿ ವಿಶ್ವಾಸ ನಂಬಿಕೆ ಇಂದಾನೆ ಜೀವನ ಮಾಡಬೇಕು ಅನ್ನೋದು,ನನ್ ಸುದ್ದಿಗೆ ಬಂದ್ರೆ ಡು ಆರ್ ಡೈ ಕೆಟ್ಟ ಕೆಲಸ ಮಾಡಿ ನೂರು ದಿನ ಬದುಕುವುದಕ್ಕಿಂತ ಒಳ್ಳೆ ಕೆಲಸ ಮಾಡಿ ಒಂದಿನ ಬದುಕೋದು ಗ್ರೇಟ್ ಮನ್ಸಲ್ಲಿರೋದನ್ನ ಹೇಳಲೇಬೇಕು ಆಗಲೇ ನಂಗೆ ಸಮಾಧಾನ 

 

 

actress ilaa vitla opinion about vinay gowda behavior in kannada bigg boss house gow

Follow Us:
Download App:
  • android
  • ios