ಬಿಗ್‌ಬಾಸ್ 7 ವಿಜೇತ ಶೈನ್ ಶೆಟ್ಟಿ,  'ಜಸ್ಟ್ ಮ್ಯಾರೀಡ್' ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇತ್ತೀಚೆಗೆ ಹಿಮಾಚಲ ಪ್ರದೇಶ ಮತ್ತು ಕುಂಭಮೇಳದಲ್ಲಿ ಕಾಣಿಸಿಕೊಂಡ ಶೈನ್, ಆಧ್ಯಾತ್ಮಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಬಿಗ್ ಬಾಸ್ ಸೀಸನ್ 7 ವಿನ್ನರ್ (Bigg Boss Winner) ಶೈನ್ ಶೆಟ್ಟಿ, ಬಿಗ್ ಬಾಸ್ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ ಸಹ, ಯಾವುದರಲ್ಲೂ ಹೆಚ್ಚು ಸಕ್ಸಸ್ ಮಾತ್ರ ಸಿಕ್ಕಿಲ್ಲ ಶೆಟ್ಟಿಗೆ. ಕೆಲವೊಂದು ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿದ್ದರೂ ಸಹ ಸದ್ಯಕ್ಕೆ ಸಂಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಬಿಡುಗಡೆಯಾದ ಸಿನಿಮಾಗಳು ಯಾವುದೂ ಇಲ್ಲ. ಜಸ್ಟ್ ಮ್ಯಾರೀಡ್ ಸಿನಿಮಾ ತನ್ನ ಟೀಸರ್ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ, ಆದರೆ ಸಿನಿಮಾ ರಿಲೀಸ್ ಆಗೋದಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಾಗಿದೆ. 

34ಕ್ಕೆ ಎರಡಾದ್ರೂ‌ ಆಗ್ಬಾರದಾ? ಬಿಗ್ ಬಾಸ್ ಶೈನ್ ಶೆಟ್ಟಿ ಪ್ರೀತಿಯಲ್ಲಿದ್ದಾರಾ!

ಬಿಗ್ ಬಾಸ್ ನಿಂದ ಬಂದ ಮೇಲೆ ಶೈನ್ (Shine Shetty) ರುದ್ರಪ್ರಯಾಗ್, ಹರಿಕಥೆ ಅಲ್ಲ ಗಿರಿಕಥೆ, ಪ್ರಾಯಶಃ, ವಿಜಯಾನಂದ್, ಜೇಮ್ಸ್, ಕಾಂತಾರ, ಮಾಫಿಯಾ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಬ್ಯಾಚುಲರ್ ಪಾರ್ಟಿ, ನಿದ್ರಾದೇವಿ ನೆಕ್ಸ್ಟ್ ಡೋರ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವ ಸಿನಿಮಾಗಳಲ್ಲೂ ನಿರೀಕ್ಷಿತ ಯಶಸ್ಸು ಕಾಣಲೇ ಇಲ್ಲ. ಆದರೆ ಶೈನ್ ಶೆಟ್ಟಿ ಜನಪ್ರಿಯತೆ ಮಾತ್ರ ಕಡಿಮೆಯಾಗಿಯೇ ಇಲ್ಲ. ಜಾಹೀರಾತು, ಫೋಟೋ ಶೂಟ್, ರ್ಯಾಂಪ್ ವಾಕ್ ಎನ್ನುತ್ತಾ ಬ್ಯುಸಿಯಾಗಿದ್ದಾರೆ ಶೈನ್ ಶೆಟ್ಟಿ. 

ಬಾಲಿವುಡ್ ಸ್ಟಾರ್ ನಟ ರಣದೀಪ್ ಹೂಡ ಜೊತೆ ಶೈನ್ ಶೆಟ್ಟಿ… ಹಿಂದಿ ಸಿನಿಮಾದಲ್ಲಿ ನಟಿಸ್ತಿದ್ದಾರ ಶೈನ್?

ಕಳೆದ ಕೆಲವು ತಿಂಗಳಿಂದ ಶೈನ್ ಶೆಟ್ಟಿ ಹಿಮಾಚಲ ಪ್ರದೇಶದಲ್ಲಿ (Himachal Pradesh) ಬೀಡು ಬಿಟ್ಟಿದ್ದರು. ಹೆಚ್ಚಾಗಿ ಹಿಮಾಲಯದ ತಪ್ಪಲಿನ ಪುಣ್ಯಧಾಮಗಳಿಗೆ ಭೇಟಿ ನೀಡುತ್ತಾ, ಧ್ಯಾನ ಮಾಡುತ್ತಾ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಕುಂಭಮೇಳದಲ್ಲೂ ಶೈನ್ ಶೆಟ್ಟಿ ಹೈಲೈಟ್ ಆಗಿದ್ದರು. ಸಾಧು ಸನ್ಯಾಸಿಗಳ ಜೊತೆ ಶೈನ್ ಶೆಟ್ಟಿ ತಾವೂ ಕೂಡ ಖಾವಿ ಬಟ್ಟೆ ತೊಟ್ಟು, ಕುತ್ತಿಗೆಗೆ ರುದ್ರಾಕ್ಷಿ ಹಾರ ಧರಿಸಿ, ಕುಂಭಮೇಳದ (Kumbha Mela) ಪ್ರದೇಶದಲ್ಲೆಲ್ಲಾ ಓಡಾಡಿದ್ದರು. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಬಂದು ಸಹ ಪುಳಕಿತರಾಗಿದ್ದಾರೆ ಶೈನ್. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡೀಯೋ ಶೇರ್ ಮಾಡಿರುವ ಶೈನ್ ಶೆಟ್ಟಿ, ಕುಂಭ ಮೇಳದಲ್ಲಿ ಕಾಣೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳುತ್ತಾರೆ, ಹೌದು ಅದು ನಿಜಾ, ನಾನು ಕುಂಭಮೇಳದ ಸೌಂದರ್ಯದಲ್ಲಿ ಕಳೆದು ಹೋದೆ. ನನ್ನನ್ನು ನಾನು ಈ ಮೊದಲು ಕಂಡಿರದೇ ರೀತಿಯಲ್ಲಿ ಕಂಡುಕೊಂಡೆ ಎಂಬುದಾಗಿ ಕುಂಭಮೇಳದ ದೈವೀಕತೆಯ ಬಗ್ಗೆ ತಿಳಿಸಿದ್ದಾರೆ. ಜನವರಿ 14 ರಂದು ಮಕರ ಸಂಕ್ರಾಂತಿಯ ವೇಳೆ ಶೈನ್ ಶೆಟ್ಟಿ ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಅಲ್ಲಿಯೇ ಹಲವು ದಿನಗಳನ್ನು ಸಹ ಕಳೆದಿದ್ದಾರೆ. 

View post on Instagram