ಜೀ ಕನ್ನಡ ವೇದಿಕೆಯ ಮೇಲೆ ಮತ್ತೆ ಕಾಣಿಸಿಕೊಂಡ ಕ್ರೇಜಿ ಸ್ಟಾರ್. ವೀಕೆಂಡ್ ಪ್ರಸಾರ ಮಿಸ್ ಮಾಡಬೇಡಿ...

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಮೂರನೇ ಸೀಸನ್‌ನ ತೀರ್ಪುಗಾರರು ವಿಜಯ್‌ ರಾಘವೇಂದ್ರ, ರಕ್ಷಿತಾ ಪ್ರೇಮ್ ಹಾಗೂ ಚಿನ್ನಿ ಮಾಸ್ಟರ್. ಸ್ಪೆಷಲ್ ಥೀಮ್‌ ಇದ್ದಾಗ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ತೀರ್ಪು ನೀಡುತ್ತಾರೆ. ಈ ವಾರ ಪ್ರಸಾರವಾಗಲಿರುವ ಸ್ಪೆಷಲ್ ಎಪಿಸೋಡ್‌ಗೆ ಕ್ರೇಜಿ ಸ್ಟಾರ್ ಆಗಮಿಸುತ್ತಿರುವುದು ವಿಶೇಷ. 

ಹೌದು! ಕ್ರೇಜಿ ಕ್ವೀನ್ ರಕ್ಷಿತಾ ಜೊತೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕಾಣಿಸಿಕೊಳ್ಳಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ರಕ್ಷಿತಾ ಫಟಾ ಫಟ್ ಅಂತ ಫೋಟೋ ಹಂಚಿ ಕೊಳ್ಳುತ್ತಾರೆ. 'ದಿ ಮೋಸ್ಟ್ ಹ್ಯಾಂಡ್ಸಮ್, ದಿ ಮೋಸ್ಟ್‌ ಅಮೇಜಿಂಗ್ ವ್ಯಕ್ತಿ ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್ ಸರ್. ಇವತ್ತು ನಮ್ಮ ಸೆಟ್‌ನಲ್ಲಿ. ಅವರು ಸುತ್ತ ಎಷ್ಟು ಪಾಸಿಟಿವಿಟಿ ಇದೆ, ಅವರೊಂದಿಗೆ ಕೆಲಸ ಮಾಡುವುದಕ್ಕೆ ಸಂತೋಷವಾಗುತ್ತದೆ. ಇದೊಂದು ಜಾಯ್ ರೈಡ್ ಆಗಿತ್ತು. ಈ ವಾರ ಸಂಚಿಕೆ ನಿಮಗೆ ಇಷ್ಟವಾಗಲಿದೆ,' ಎಂದು ಬರೆದುಕೊಂಡಿದ್ದಾರೆ.

ತೋಟದ ಕೆಲಸ ಮಾಡುತ್ತಿರುವ ಪುತ್ರನ ವಿಡಿಯೋ ಹಂಚಿಕೊಂಡ ನಟಿ ರಕ್ಷಿತಾ ಪ್ರೇಮ್!

'ಕ್ರೇಜಿ ಸ್ಟಾರ್‌, ಕ್ರೇಜಿ ಕ್ವೀನ್ ಜೊತೆ ಒಂದು ಸೆಲ್ಫಿ,' ಎಂದು ಡ್ಯಾನ್ಸ್ ಮಾಸ್ಟರ್ ಚಿನ್ನಿಪ್ರಶಾಕ್ ಬರೆದಿದ್ದಾರೆ. ಅನುಶ್ರೀ ನಿರೂಪಣೆ ಮಾಡುತ್ತಿರುವ ಡಿಕೆಡಿ ಶೋನಲ್ಲಿ 5 ವರ್ಷದ ಅನ್ವಿಕಾಯಿಂದ ಹಿಡಿದು 29 ವರ್ಷದವರೆಗಿನ ಚೈತ್ರಾಲಿವರೆಗೂ ಇದ್ದಾರೆ. ಸ್ಪೆಷಲ್ ಸ್ಪರ್ಧಿಯಾಗಿ 60 ವರ್ಷದ ಅನ್ನಪೂರ್ಣ ಕೂಡ ಡ್ಯಾನ್ಸ್ ಮಾಡುತ್ತಾರೆ. ಕಿರುತೆರೆ ರಿಯಾಲಿಟಿ ಶೋಗಳಿಗೆ ತೀರ್ಪುಗಾರ್ತಿ ಹಾಗೂ ನಿರ್ಮಾಪಕಿಯಾಗಿ ರಕ್ಷಿತಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

View post on Instagram