ಫಾರ್ಮ್‌ಹೌಸ್‌ನಲ್ಲಿ ಸಮಯ ಕಳೆಯುತ್ತಿರುವ ರಕ್ಷಿತಾ ಪ್ರೇಮ್ ಕುಟುಂಬ. ಪುತ್ರನ ಆಸಕ್ತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ತಾಯಿ....  

ಕನ್ನಡ ಚಿತ್ರರಂಗದ ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ನಿರ್ದೇಶಕ ಜೋಗಿ ಪ್ರೇಮ್ ಒಂದು ಅದ್ಭುತವಾದ ಫಾರ್ಮ್‌ಹೌಸ್ ಮಾಡಿಕೊಂಡಿದ್ದಾರೆ. ಅದಕ್ಕೆ 'ಅಮ್ಮನ ತೋಟ' ಎಂದು ಹೆಸರಿಟ್ಟಿದ್ದಾರೆ. ಇಬ್ಬರಿಗೂ ಚಿತ್ರೀಕರಣದಿಂದ ಬಿಡುವು ಸಿಕ್ಕಾಗ ಇಡೀ ಫ್ಯಾಮಿಲಿ ತೋಟದ ಮನೆಯಲ್ಲಿ ಸಮಯ ಕಳೆಯುತ್ತದೆ. ಈ ವೇಳೆ ಪುತ್ರ ಕೃಷಿ ಮೇಲೆ ತೋರಿಸಿರುವ ಆಸ್ತಿ ಬಗ್ಗೆ ರಕ್ಷಿತಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಸೂರ್ಯನ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ. ನನ್ನ ಪುಟ್ಟ ರೈತ. ಸಿಗುವ ಸಮಯದಲ್ಲಿ ಅವನು ಇಷ್ಟೆಲ್ಲಾ ಕಲಿಯುತ್ತಿರುವುದರ ಬಗ್ಗೆ ನನಗೆ ತುಂಬಾ ಸಂತೋಷವಿದೆ. ಭಾನುವಾರವಾದರೆ ಸಾಕು ಸೂರ್ಯ ತೋಟದಲ್ಲಿ ಈ ಕೆಲಸ ಮಾಡುತ್ತಾನೆ,' ಎಂದು ರಕ್ಷಿತಾ ಬರೆದುಕೊಂಡಿದ್ದಾರೆ. ಜೋಗಿ ಪ್ರೇಮ್ ಅವರು ರೈತಾಪಿ ಕುಟುಂಬದವರಾಗಿದ್ದು, ಯಾವ ಕೆಲಸವನ್ನೂ ಮರೆತಿಲ್ಲ. ತೋಟದಲ್ಲಿರುವ ಹುಡುಗರ ಜೊತೆ ಅವರೂ ಕೆಲಸ ಮಾಡುತ್ತಾರೆ. 

ಲಾಕ್‌ಡೌನ್‌ನಿಂದ ಪೋಷಕರೇ ಗುರುಗಳು; ಮಕ್ಕಳ ತೊಂದರೆ ಬಗ್ಗೆ ರಕ್ಷಿತಾ ಪ್ರೇಮ್ ಮಾತು! 

ಸಂಕ್ರಾಂತಿ ಹಬ್ಬದಂದು ತೋಟಕ್ಕೆ ಹಸು, ಎಮ್ಮೆ ಮತ್ತು ಕರುಗಳನ್ನು ತರಿಸಿ ಪೂಜೆ ಮಾಡಿದ್ದರು. ಇತ್ತೀಚಿಗೆ ಗುಜರಾತ್‌ನಿಂದಲೂ ತಮ್ಮ ತೋಟಕ್ಕೆ ಎಮ್ಮೆ ತರಿಸಿದ್ದಾರೆ. 'ಒಳ್ಳೆಯದು ಸೂರ್ಯ,' ಎಂದು ನಟ ಸತೀಶ್ ನೀನಾಸಂ ಕಾಮೆಂಟ್ ಮಾಡಿದ್ದಾರೆ. ಸಾಮಾನ್ಯರಂತೆ ಮಕ್ಕಳನ್ನು ಸೆಲೆಬ್ರಿಟಿಗಳು ಬೆಳೆಸುವುದು ಕಷ್ಟ ಅದರಲ್ಲೂ ನೀವು ಕೃಷಿ ಕೆಲಸಗಳನ್ನು ಮಾಡಿಸುತ್ತಿರುವುದು ಗ್ರೇಟ್ ಎಂದು ನೆಟ್ಟಿಗರು ರಕ್ಷಿತಾ ಮತ್ತು ಪ್ರೇಮ್‌ರನ್ನು ಹೊಗಳಿದ್ದಾರೆ.

View post on Instagram