Asianet Suvarna News Asianet Suvarna News

Bigg Boss: ಅಂತೂ ಬಂತು ಬಿಗ್ಬಾಸ್ ಕಾರು… ಕಾರ್ತಿಕ್ ಮಹೇಶ್ ಫುಲ್ ಖುಷ್

ಬಿಗ್ ಬಾಸ್ 10ರ ವಿಜೇತ ಕಾರ್ತಿಕ್ ಮಹೇಶ್ ಅವರಿಗೆ ಬಿಗ್ ಬಾಸ್ ಕಾರ್ ಉಡುಗೊರೆಯಾಗಿ ಸಿಕ್ಕಿದೆ. 7 ತಿಂಗಳ ನಂತರ ಮಾರುತಿ ಸುಝುಕಿ ಬ್ರಿಝಾ ಕಾರನ್ನು ಬಿಗ್ ಬಾಸ್ ನೀಡಿದೆ. ಕಾರ್ತಿಕ್ ಈ ಸಂತೋಷವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

actor karthik mahesh get maruti suzuki brizza car for bigg boss kanndad season 10
Author
First Published Aug 29, 2024, 10:25 AM IST | Last Updated Aug 29, 2024, 10:52 AM IST

ಬಿಗ್ ಬಾಸ್ 10ರ ವಿಜೇತ ಕಾರ್ತಿಕ್ ಮಹೇಶ್ (Bigg Boss 10 winner Karthik Mahesh) ಖುಷಿ ದುಪ್ಪಟ್ಟಾಗಿದೆ. ಬಿಗ್ ಬಾಸ್ ಟ್ರೋಫಿ  (Bigg Boss Trophy ) ಎತ್ತಿ 7 ತಿಂಗಳ ನಂತ್ರ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಬಿಗ್ ಬಾಸ್ ಕಡೆಯಿಂದ ಕೊನೆಗೂ ಕಾರ್ ಉಡುಗೊರೆಯಾಗಿ ಸಿಕ್ಕಿದೆ. ಬಿಗ್ ಬಾಸ್ 10ರ ಶೋ ವಿಜೇತ ಕಾರ್ತಿಕ್ ಮಹೇಶ್ ಈ ಖುಷಿ ವಿಷ್ಯವನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ (social media) ದಲ್ಲಿ ವಿಡಿಯೋ ಹಾಕಿರುವ ಅವರು, ಅಂತೂ ಬಿಗ್ ಬಾಸ್ ಕಾರು ಬಂತು ಎಂದು ಶೀರ್ಷಿಕೆ ಹಾಕಿದ್ದಾರೆ. ಶೋರೂಮ್ ನಲ್ಲಿ ಕಾರ್ ಕೀ ಪಡೆದು, ಮನೆಯಲ್ಲಿ ಪೂಜೆ ಮಾಡಿಸಿದ ಕಾರ್ತಿಕ್, ನಂತ್ರ ಅಮ್ಮನ ಜೊತೆ ಒಂದು ರೈಡ್ ಹೋಗಿ ಬಂದಿದ್ದಾರೆ.

ಕಾರ್ತೀಕ್ ಮಹೇಶ್ ಬಿಗ್ ಬಾಸ್ 10ರ ಸೀಸನ್ ನಲ್ಲಿ ವೀಕ್ಷಕರ ಮನಗೆಲ್ಲಲು ಯಶಸ್ವಿಯಾಗಿದ್ದರು. ಡ್ರೋನ್ ಪ್ರತಾಪ್ (Drone Pratap) ರನ್ನರ್ ಅಪ್ ಆದ್ರೆ, ಸಂಗೀತಾ ಶೃಂಗೇರಿ (Sangeeta Sringeri) ಮೂರನೇ ಸ್ಥಾನದಲ್ಲಿದ್ರು. ಇಬ್ಬರು ದಿಗ್ಗಜರನ್ನು ಹಿಂದಿಕ್ಕಿ ಬಿಗ್ ಬಾಸ್ 10ರ ವಿಜೇತರಾಗಿದ್ದ ಕಾರ್ತೀಕ್ ಗೆ 50 ಲಕ್ಷ ರೂಪಾಯಿ ಹಣ ಹಾಗೂ ಕಾರ್ ಬಹುಮಾನವಾಗಿ ಸಿಕ್ಕಿತ್ತು. ಬಿಗ್ ಬಾಸ್ ಶೋ ಮುಗಿದು ಏಳು ತಿಂಗಳಾದ್ಮೇಲೆ ಈಗ ಕಾರ್ತೀಕ್ ಮಹೇಶ್ ಗೆ ಕಾರ್ ಸಿಕ್ಕಿದೆ. ಮಾರುತಿ ಸುಝುಕಿ ಬ್ರಿಝಾ (Maruti Suzuki Brizza) ಕಾರನ್ನು ಬಿಗ್ ಬಾಸ್, ಕಾರ್ತಿಕ್ ಗೆ ಗಿಫ್ಟ್ ಆಗಿ ನೀಡಿದೆ. ಕಾರ್ತೀಕ್ ತಮ್ಮ ಇನ್ಸ್ಟಾ ಖಾತೆ (Insta Account) ಯಲ್ಲಿ ಕಾರಿನ ಸುಂದರ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅವರ ವಿಡಿಯೋ ನೋಡಿದ ಅಭಿಮಾನಿಗಳು, ಇದಕ್ಕೆ ಕಾರ್ತೀಕ್ ಪರ್ಫೆಕ್ಟ್ ಎಂದಿದ್ದಾರೆ. ಹಾಗೆಯೇ ಶುಭಾಶಯಗಳ ಸುರಿಮಳೆ ಗೈದಿದ್ದಾರೆ.

Bhat N Bhatt YouTube Channel: ಭಟ್ರ ಜೊತೆ ಅಡುಗೆ ಮಾಡೋಕೆ ಹೆಂಡ್ತಿ ಬರ್ತಿದ್ದಾರೆ…. ಹುಡುಗಿ ಅದೃಷ್ಟ ಮಾಡಿದ್ರು

ಕಾರ್ತೀಕ್ ಗೆ ಸಿಕ್ಕಿರುವ ಬ್ರಿಝಾ ಕಾರ್ ಬೆಲೆ 10 -15 ಲಕ್ಷ ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಕಾರ್ ಬುಕ್ ಮಾಡಿ ಐದಾರು ತಿಂಗಳ ನಂತ್ರ ಕಂಪನಿ ಕಾರ್ ಡಿಲೇವರಿ ಮಾಡುತ್ತದೆ. ಹಾಗಾಗಿ ಕಾರ್ತೀಕ್ ಮಹೇಶ್ ಗೆ ಕಾರ್ ಸಿಗಲು ಇಷ್ಟು ತಡವಾಯ್ತು. ಕಾರ್ತೀಕ್ ಮಹೇಶ್ ಮಾತ್ರವಲ್ಲ ಹಿಂದಿನ ಬಿಗ್ ಬಾಸ್ ವಿಜೇತರಿಗೆ ಕೂಡ ಕಾರು ತಡವಾಗಿ ಸಿಕ್ಕಿದೆ. ಏನೇ ಆಗ್ಲಿ, ಬಿಗ್ ಬಾಸ್ ತನ್ನ ಮಾತಿನಂತೆ ನಡೆದುಕೊಂಡಿದೆ. ವಿಜೇತರಿಗೆ ಕಾರ್ ನೀಡಿ ತನ್ನ ಗೌರವ ಹೆಚ್ಚಿಸಿಕೊಂಡಿದೆ ಎನ್ನುತ್ತಾರೆ ಅಭಿಮಾನಿಗಳು. 

ಬಿಗ್ ಬಾಸ್ ವಿಜೇತ ಕಾರ್ತಿಕ್, ಬ್ಯುಸಿಯಾಗಿದ್ದಾರೆ. ಒಂದಾದ್ಮೇಲೆ ಒಂದು ಆಫರ್ ಬರ್ತಾ ಇದೆ. ಬಿಗ್ ಬಾಸ್ ಹಣ ಮನೆ ಖರೀದಿಗೆ ಸಾಕಾಗೋದಿಲ್ಲ ಎಂದಿದ್ದ ಕಾರ್ತೀಕ್ ಮಹೇಶ್, ಸಿನಿಮಾ, ಇವೆಂಟ್ ಅಂತ ದುಡಿಮೆ ಮುಂದುವರೆಸಿದ್ದಾರೆ. ಕಾರ್ತೀಕ್ ಗೆ ಸಾಕಷ್ಟು ಸಿನಿಮಾ ಆಫರ್ ಬರ್ತಿದ್ದು, ಸದ್ಯ ಕಾರ್ತಿಕ್ ರಾಮರಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾರ್ತೀಕ್ ಸಕ್ರಿಯವಾಗಿದ್ದಾರೆ.

Beard Balaka: ಬಿಯರ್ಡ್ ಬಾಲಕ ವಿಡಿಯೋ ನೋಡಿ ಆಸ್ಪತ್ರೆಯಲ್ಲಿ ನಕ್ಕ ಮಗು, ಅಮ್ಮನ ಮೆಸೇಜ್‌ಗೆ ಗಣೇಶ್ ಕಾರಂತ್

2023ರ ಅಕ್ಟೋಬರ್ ನಲ್ಲಿ ಶುರುವಾಗಿದ್ದ ಬಿಗ್ ಬಾಸ್ ಸೀಸನ್ 10, ಜನವರಿ 2024ರವರೆಗೆ ನಡೆದಿತ್ತು. 112 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಕಾರ್ತೀಕ್ ಎಲ್ಲರ ಅಚ್ಚುಮೆಚ್ಚಾಗಿದ್ದರು. ಅವರ ಸ್ವಭಾವ, ಆಟದ ಶೈಲಿ ಅಭಿಮಾನಿಗಳ ಗಮನ ಸೆಳೆದಿತ್ತು. ಈಗ ಬಿಗ್ ಬಾಸ್ 11ರ ಸರಣಿಗೆ ವೀಕ್ಷಕರು ಕಾಯ್ತಿದ್ದಾರೆ. ಈಗಾಗಲೇ ಬಿಗ್ ಬಾಸ್ ಪ್ರೋಮೋ ಸಿದ್ಧವಾಗಿದೆ, ಸ್ಪರ್ಧಿಗಳು ಫೈನಲ್ ಆಗಿದ್ದಾರೆ ಎನ್ನುವ ಮಾತಿದೆ. ಆದ್ರೆ ಯಾವೆಲ್ಲ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬರ್ತಾರೆ, ನಿರೂಪಣೆ ಯಾರು ಮಾಡ್ತಾರೆ, ಬಿಗ್ ಬಾಸ್ ಶೋ ಎಂದಿನಿಂದ ಶುರುವಾಗಲಿದೆ ಎಂಬ ಬಗ್ಗೆ ಶೀಘ್ರವೇ ಉತ್ತರ ಸಿಗುವ ಸಾಧ್ಯತೆ ಇದೆ. 

Latest Videos
Follow Us:
Download App:
  • android
  • ios