ಮದುವೆಯಾದ ಬೆನ್ನಲ್ಲೇ ನಾಗಿಣಿ-2 ಧಾರಾವಾಹಿಯಿಂದ ಹೊರಬಂದ ನಿನಾದ್; ತ್ರಿಶೂಲ್ ಪಾತ್ರಕ್ಕೆ ಹೊಸ ನಟ ಎಂಟ್ರಿ
ಮದುವೆಯಾದ ಬೆನ್ನಲ್ಲೇ ನಿನಾದ್ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ನಟ ನಿನಾದ್ ನಾಗಿಣಿ-2 ಧಾರಾವಾಹಿಯಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ನಿನಾದ್ ಜಾಗಕ್ಕೆ ಮತ್ತೋರ್ವ ಖ್ಯಾತ ನಟ ಎಂಟ್ರಿ ಕೊಟ್ಟಿದ್ದಾರೆ.
ಕನ್ನಡ ಕಿರುತೆರೆಯ ಖ್ಯಾತ ನಟ ನಿನಾದ್(Ninad) ಇತ್ತೀಚಿಗಷ್ಟೆ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದರು. ನಾಗಿಣಿ-2(Naagini-2) ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗಿದ್ದಿರುವ ನಟ ನಿನಾದ್ ಇತ್ತೀಚಿಗಷ್ಟೆ ಬಹುಕಾಲದ ಗೆಳತಿ ರಮ್ಯಾ ಜೊತೆ ಹಸೆಮಣೆ ಏರಿದರು. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ನಿನಾದ್ ಪ್ರೇಯಸಿ ರಮ್ಯಾಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮದುವೆಯಾದ ಬೆನ್ನಲ್ಲೇ ನಿನಾದ್ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ನಟ ನಿನಾದ್ ನಾಗಿಣಿ-2 ಧಾರಾವಾಹಿಯಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ಹೌದು, ನಟ ನಿನಾದ್ ನಾಗಿಣಿ-2 ಧಾರಾವಾಹಿಯಲ್ಲಿ ತ್ರಿಶೂಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತ್ರಿಶೂಲ್ ಪಾತ್ರ ಈಗಾಗಲೇ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿದೆ. ನಿನಾದ್ ಈ ಪಾತ್ರಕ್ಕೆ ಜೀವ ತುಂಬಿದ್ದರು. ಆದರೀಗ ನಿನಾದ್ ಹೊರಬಂದಿದ್ದಾರೆ ಎನ್ನಲಾಗಿದೆ. ನಿನಾದ್ ಧಾರಾವಾಹಿಯಿಂದ ಹೊರಬಂದಿರುವ ಕಾರಣ ಇನ್ನು ರಿವೀಲ್ ಆಗಿಲ್ಲ. ನಿನಾದ್ ಜಾಗಕ್ಕೆ ಮತ್ತೋರ್ವ ಖ್ಯಾತ ನಟ ಎಂಟ್ರಿ ಕೊಟ್ಟಿದ್ದಾರೆ. ಹೌದು, ಇನ್ಮುಂದೆ ನಿನಾದ್ ಬದಲಿಗೆ ನಟ ದೀಪಕ್ ಮಹದೇವ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ನಾಗಿಣಿ-2 ತ್ರಿಶೂಲ್ ಪಾತ್ರಕ್ಕೆ ನಟ ದೀಪಕ್(Deepak Mahadev) ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಧಾರಾವಾಹಿ ತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಮೂಲಗಳ ಪ್ರಕಾರ ದೀಪಿಕ್ ತ್ರಿಶೂಲ್ ಆಗಿ ಅಭಿಮಾನಿಗಳ ಮುಂದೆ ಬರುವುದು ಖಚಿತ ಎನ್ನಲಾಗಿದೆ.
'ನಾಗಿಣಿ 2' ಖ್ಯಾತಿಯ ನಟ ನಿನಾದ್ ಮದುವೆ ಫೋಟೋಶೂಟ್ ವೈರಲ್
ಅಂದಹಾಗೆ ದೀಪಿಕ್ ನಿನ್ನಿಂದಲೇ ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಚಿರಪರಿಚಿತರಾದವರು. ಈ ಧಾರಾವಾಹಿ ಬಳಿಕ ಕನ್ನಡದಲ್ಲಿ ಬ್ರೇಕ್ ಪಡೆದಿದ್ದ ದೀಪಿಕ್ ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸಾಗಿದೆ ಧಾರಾವಾಹಿ ಮೂಲಕ ಮತ್ತೆ ವಾಪಾಸ್ ಆಗಿದ್ದರು. ಈ ಧಾರಾವಾಹಿಯಲ್ಲಿ ನಾಯಕ ಚಂದನ್ ಸಹೋದರಿಯ ಗಂಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
'ನಾಗಿಣಿ'ಯ ಖ್ಯಾತಿಯ ನಿನಾದನ ಜೊತೆ ಸಂವಾದ
ಇದೀಗ ನಾಗಿಣಿ-2 ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಈಗಾಗಲೇ ದೀಪಿಕ್ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಅಂದ್ಮೇಲೆ ಸದ್ಯದಲ್ಲೇ ದೀಪಿಕ್, ತ್ರಿಶೂಲ್ ಆಗಿ ತೆರೆಮೇಲೆ ಮಿಂಚಲಿದ್ದಾರೆ. ನಿನಾದ್ ಜಾಗಕ್ಕೆ ಬಂದಿರುವ ದೀಪಿಕ್ ತ್ರಿಶೂಲ್ ಆಗಿ ಹೇಗೆ ನಟಿಸಲಿದ್ದಾರೆ, ಕಿರುತೆರೆ ಪ್ರೇಕ್ಷಕರ ಹೃದಯ ಗೆಲ್ತಾರಾ ಎಂದು ಕಾದುನೋಡಬೇಕಿದೆ.
ನಿನಾದ್ ಮದುವೆ ಸಂಭ್ರಮ
ನಿನಾದ್ ಮತ್ತು ರಮ್ಯಾ ಮದುವೆ ಮೇ 20 ರಂದು ಬೆಂಗಳೂರಿನಲ್ಲಿ ನೆರವೇರಿತು. ಈ ಮದುವೆ ಸಮಾರಂಭದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆ ಗಣ್ಯರು ಹಾಜರಿದ್ದರು. ನವ ಜೋಡಿಗೆ ಶುಭಹಾರೈಸಿದ್ದರು. ನಿನಾದ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮದುವೆ ಬಳಿಕ ನಿನಾದ್ ಮಾಡಿಸಿರುವ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆದಿತ್ತು. ಪತ್ನಿ ರಮ್ಯಾ ಜೊತೆ ನಿನಾದ್ ಕ್ಯಾಮರಾಗೆ ಪೋಸ್ ನೀಡಿದ್ದ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲಾತಣದಲ್ಲಿ ಶೇರ್ ಮಾಡಿದ್ದರು. ಬಿಳಿ ಬಣ್ಣದ ಶೇರ್ವಾನಿಯಲ್ಲಿ ನಿನಾದ್ ಕಂಗೊಳಿಸುತ್ತಿದ್ದರೆ ನೀಲಿ ಬಣ್ಣದ ಸೀರಿಯಲ್ಲಿ ರಮ್ಯಾ ಮಿಂಚಿದ್ದರು. ಇಬ್ಬರು ತರಹೇವಾರಿ ಪೋಸ್ ಗಳನ್ನು ನೀಡಿದ್ದು ಫೋಟೋಗಳು ವೈರಲ್ ಆಗಿತ್ತು.