'ಪಾಪ ಪಾಂಡು' ವಿನಲ್ಲಿ ಖಿಲಾಡಿ ಶ್ರೀಹರಿಯ ಪಾತ್ರದ ಮೂಲಕ ನಕ್ಕು ನಗಿಸುವ ಸೌರಭ್ ಕುಲಕರ್ಣಿ ಕಿರುತೆರೆಯಲ್ಲಿ ಭರವಸೆ ಮೂಡಿಸಿರುವ ಪ್ರತಿಭಾವಂತ ನಟ, ನಿರೂಪಕ. ಸಾಕಷ್ಟು ಧಾರವಾಹಿ, ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ರಂಗಭೂಮಿ, ನಿರೂಪಣೆ, ಹೊಸ ಹೊಸ ಪ್ರಯೋಗಗಳಲ್ಲಿ ಸಕ್ರಿಯರಾಗಿರುವ ಸೌರಭ್ ಕುಲಕರ್ಣಿ, ಲಾಕ್‌ಡೌನ್ ಸಮಯದಲ್ಲಿ ಹೊಸ ಪ್ರಯೋಗ ಮಾಡುತ್ತಿದ್ದಾರೆ. 

'ರ‍್ಯಾಪಿಡ್‌ ಫೈರ್ ರಮೇಶ್ ಅಂಕಲ್' ಅಂತ ಕಾಮಿಡಿ ವಿಡಿಯೋ ಮೂಲಕ ಕಾಮಿಡಿ ಪಂಚ್ ನೀಡುತ್ತಿದ್ದಾರೆ. ದಿನಕ್ಕೊಂದು ಹೊಸ ಹೊಸ ವಿಷಯ, ಮಸ್ತ್ ಪಂಚಿಂಗ್ ಡೈಲಾಗ್‌ಗಳು ಮುದ ನೀಡುವುದಂತೂ ಗ್ಯಾರಂಟಿ. ಪಕ್ಕದ ಮನೆಯ ಅಂಕಲ್‌ಗಳು ಒಂದು ವಿಚಾರದ ಬಗ್ಗೆ ಪ್ರಶ್ನೆ ಕೇಳುವುದಕ್ಕೆ ಶುರು ಮಾಡಿದರೆ ಹೇಗೆ ನಾನ್ ಸ್ಟಾಪ್ ಪ್ರಶ್ನೆಗಳು ಸುರಿಮಳೆಗೈದು, ಉತ್ತರವನ್ನೇ ಕೊಡದ ಹಾಗೆ ಮಾಡುತ್ತಾರೆ ಎಂದು ಸೌರಭ್ ವಿಡಿಯೋದಲ್ಲಿ ಹಾಸ್ಯಸ್ಪದವಾಗಿ ತೋರಿಸಿದ್ದಾರೆ. 

ಲಾಕ್‌ಡೌನ್‌ನಲ್ಲಿ ಕೋತಿಗಳ ಕಾಳಜಿ ವಹಿಸಿದ ನಿರೂಪಕಿ ಚೈತ್ರಾ ವಾಸುದೇವನ್! 

ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಕೂಡ ಸೌರಭ್ ಅವರ 'ರಮೇಶ್ ಅಂಕಲ್' ವಿಡಿಯೋನ ಲೈಕ್ ಮಾಡಿದ್ದಾರೆ. ಸಿನಿಮಾ ತಾರೆಯರು ಮತ್ತು ಸ್ನೇಹಿತರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಸೌರಭ್ ಮಾಡುತ್ತಿರುವ ಈ ನವನವೀನ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಬಿಗ್ ಬಾಸ್‌ ವೈನ್‌ ಸ್ಟೋರ್‌ ರಘು ಕೂಡ ಸೌರಭ ಪಂಚ್ ಡೈಲಾಗ್‌ಗೆ  ಫಿದಾ ಆಗಿದ್ದಾರೆ.