'ಪಾಪ ಪಾಂಡು' ಪಾಚು ಆಗಿ ಕಾಮಿಡಿ ಮಾಡುತ್ತಾ, ನಿರೂಪಣೆಯ ಮೂಲಕವೂ ಎಲ್ಲರನ್ನು ನಗಿಸುತ್ತಾ ಇರುವ ಶಾಲಿನಿ ಕಿರುತೆರೆಯ ಹೊರತಾಗಿ ಯೂಟ್ಯೂಬ್‌ ಚಾನಲ್‌ವೊಂದನ್ನು ಶುರುಮಾಡಿದ್ದಾರೆ.

ಪಾಪ ಪಾಂಡು ಪಾಚು ಇನ್ ಥೈಲ್ಯಾಂಡ್!

22 ವರ್ಷಗಳಿಂದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಶಾಲಿನಿ ಇದೀಗ 'ಶಾಲಿವುಡ್‌' ಯೂಟ್ಯೂಬ್‌ ಚಾನೆಲ್‌ ಶುರು ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬ್ಯೂಟಿ ಹಾಗೂ ಆರೋಗ್ಯ ಟಿಪ್ಸ್‌ ನೀಡುತ್ತಿದ್ದರು. ಶಾಲಿನಿ ಕೊಟ್ಟ ಸಲಹೆಗಳಿಂದ ಉಪಯೋಗ ಪಡೆದ ಅಭಿಮಾನಿಗಳು ಇನ್ನು ಹೆಚ್ಚು ಮಾಹಿತಿ ನೀಡಿದರೆ ನಮಗೆ ಸಹಾಯವಾಗುತ್ತದೆ ಎಂದು ಡಿಮ್ಯಾಂಡ್‌ ಮಾಡಲು ಶುರು ಮಾಡಿದ್ದರು. ಇದೀಗ ಅಭಿಮಾನಿಗಳ ಬೇಡಿಕೆಗೆ ಮನಸೋತು, ಚಾನೆಲ್‌ವೊಂದನ್ನು ಆರಂಭಿಸಿದ್ದಾರೆ.

ಜನವರಿ 31ರಂದು ತೆರೆದ 'ಶಾಲಿವುಡ್‌'ಗೆ ಈಗಾಗಲೆ 2000ಕ್ಕೂ ಹೆಚ್ಚು ಸಬ್‌ಸ್ಕ್ರೈಬರ್ಸ್ ಇದ್ದಾರೆ. ಅಷ್ಟೇ ಅಲ್ಲದೇ ಪ್ರೇಕ್ಷಕರ ಗಮನ ಸೆಳೆಯುವ ಚಾನೆಲ್ ಟ್ರೈಲರ್‌ ಸಹ ರಿಲೀಸ್‌ ಮಾಡಿದ್ದರು. IGTVನಲ್ಲೇ ಎಷ್ಟೊಂದು ಟಿಪ್ಸ್‌ ನೀಡುತ್ತಿದ್ದರು ಶಾಲು. ಇನ್ನು ಯೂಟ್ಯೂಬ್‌ ಚಾನೆಲ್‌ನಲ್ಲಿ ಇನ್ನೇನು ಹೇಳಬಹುದು? ಅಭಿಮಾನಿಗಳು ಕಾತುರಕ್ಕೆ ಮುಂದಿನ ದಿನಗಳಲ್ಲಿ ರಿಲೀಸ್ ಆಗುತ್ತಿರುವ ವಿಡಿಯೋ ಉತ್ತರಿಸುತ್ತದೆ.