Asianet Suvarna News Asianet Suvarna News

WATCH: ಆರ್ಟ್ ಆಫ್ ಲಿವಿಂಗ್ ಸಂಸ್ಥೆ ನಿರ್ಮಾಣದ ಪ್ರಥಮ ವೆಬ್ ಸರಣಿ 'ಆದಿ ಶಂಕರಾಚಾರ್ಯ' ಟ್ರೇಲರ್ ಬಿಡುಗಡೆ

ತೀವ್ರ ಕಾತುರದಿಂದ ಕಾಯುವಂತೆ ಮಾಡಿದ್ದ ಆರ್ಟ್ ಆಫ್ ಲಿವಿಂಗ್ ನ ಪ್ರಥಮ ವೆಬ್ ಸರಣಿಯಾದ 'ಆದಿ ಶಂಕರಾಚಾರ್ಯ'  ಟ್ರೇಲರನ್ನು ದಸರಾ ಹಬ್ಬದ ಪ್ರಯುಕ್ತವಾಗಿ, ಜಾಗತಿಕ ಮಾನವತಾವಾದಿಗಳೂ, ಆಧ್ಯಾತ್ಮಿಕ ಗುರುಗಳೂ ಆದ ಗುರುದೇವ್ ಶ್ರೀ ಶ್ರೀ ರವಿಶಂಕರರ ಸಮ್ಮುಖದಲ್ಲಿ ಬಿಡುಗಡೆಯಾಗಿದೆ.

Aadi Shankaracharya Official Trailer Trailer Released by sri sri ravishankar guruji rav
Author
First Published Oct 12, 2024, 6:23 PM IST | Last Updated Oct 12, 2024, 6:23 PM IST

Aadi Shankaracharya Official Trailer Trailer: ತೀವ್ರ ಕಾತುರದಿಂದ ಕಾಯುವಂತೆ ಮಾಡಿದ್ದ ಆರ್ಟ್ ಆಫ್ ಲಿವಿಂಗ್ ನ ಪ್ರಥಮ ವೆಬ್ ಸರಣಿಯಾದ 'ಆದಿ ಶಂಕರಾಚಾರ್ಯ'  ಟ್ರೇಲರನ್ನು ದಸರಾ ಹಬ್ಬದ ಪ್ರಯುಕ್ತವಾಗಿ, ಜಾಗತಿಕ ಮಾನವತಾವಾದಿಗಳೂ, ಆಧ್ಯಾತ್ಮಿಕ ಗುರುಗಳೂ ಆದ ಗುರುದೇವ್ ಶ್ರೀ ಶ್ರೀ ರವಿಶಂಕರರ ಸಮ್ಮುಖದಲ್ಲಿ ಬಿಡುಗಡೆಯಾಗಿದೆ.

 ಟ್ರೇಲರ್ ಬಿಡುಗಡೆಗೊಳಿಸಿದ ಮಾತನಾಡಿದ ಗುರುದೇವರು, "ಆಗಿಂದಾಗ್ಗೆ ಜ್ಜಾನದ ಪುನರುಜ್ಜೀವನವಾಗುತ್ತಲೇ ಇರಬೇಕು. ಆದಿ ಶಂಕರರು ಜ್ಜಾನದ ಪುನರುತ್ಥಾನವನ್ನು ಮಾಡಿದರು. ಅವರು ಭಕ್ತಿ, ಜ್ಞಾನ ಮತ್ತು ಕರ್ಮವನ್ನು ಒಂದಾಗಿ ತಂದರು. 'ಜೀವನವು ದುಃಖಮಯವಲ್ಲ, ಆನಂದಮಯ' ಎಂಬುದೇ ಅವರ ಸಂದೇಶವಾಗಿತ್ತು' ಎಂದರು.

 

ಆದಿ ಶಂಕರರ ಬಾಲ್ಯ ಹಾಗೂ ಯೌವ್ವನದ ಸವಿಸ್ತಾರವಾದ ಚಿತ್ರಣವನ್ನು , ಭಾರತಾದ್ಯಂತದ ಅವರ ಪಯಣ ಮತ್ತು ಆ ಪಯಣದಲ್ಲಿ ಆಧ್ಯಾತ್ಮಿಕತೆಯ ಪರಂಪರೆಯ ಪುನರುತ್ಥಾನವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇವರ ಈ ಪುನರುತ್ಥಾನದ ಕಾರ್ಯವು ಇಂದಿಗೂ ಜೀವಂತವಾಗಿದೆ. ಈ ಸರಣಿಯ ಸೀಸನ್ 1 ರಲ್ಲಿ 10 ಧಾರಾವಾಹಿಗಳಿದ್ದು, ಪ್ರತಿಯೊಂದು ಧಾರಾವಾಹಿಯ ಅವಧಿಯು 40 ನಿಮಿಷಗಳು. ಶಂಕರರ ಜೀವನದ ಮೊದಲ ಎಂಟು ವರ್ಷಗಳನ್ನು ಇದು ತೋರಿಸುತ್ತದೆ. ಶ್ರೀ ಶ್ರೀ ಪಬ್ಲಿಕೇಷನ್ಸ್ ನ ಟ್ರಸ್ಟಿಯಾದ ನಕುಲ್ ಧವನ್ ರವರು, "ಆದಿ ಶಂಕರರು ಭಾರತೀಯ ಇತಿಹಾಸದಲ್ಲಿ ಖ್ಯಾತನಾಮರಾಗಿದ್ದರೂ ಸಹ, ಎಲ್ಲರಿಗೂ ಅವರ ಜೀವನ ಚರಿತ್ರೆ ತಿಳಿದಿಲ್ಲ. ಅವರು ಅಲ್ಪಾಯುಷಿಗಳಾದರೂ ಸಹ ಆಗಿನ ಸಮಯಗಳಲ್ಲಿ ಅವರು ಕಾಲ್ನಡಿಗೆಯಲ್ಲೇ ಭಾರತದ ಉದ್ದಗಲಕ್ಕೂ ಪ್ರಯಾಣ ಮಾಡಿ, ದೇಶವನ್ನು ಸಾಂಸ್ಕೃತಿಕವಾಗಿ ಏಕೀಕರಣಗೊಳಿಸಿದರು. ಅವರು ಸಂರಕ್ಷಿಸಿದ ಸಂಪ್ರದಾಯಗಳು, ಪರಂಪರೆ, ಸಂಸ್ಥೆಗಳು ಇಂದಿಗೂ ಸಹ ಜೀವಂತವಾಗಿವೆ. ಅವರು ಭಾರತದ ಸಾಂಸ್ಕೃತಿಕ ಪುನರುತ್ಥಾನದ ರೂವಾರಿಗಳು" ಎನ್ನುತ್ತಾರೆ.    

ಆತಂಕ, ಒತ್ತಡ ಜೀವನಕ್ಕೆ ಸುದರ್ಶನ ಕ್ರಿಯೆ ಪರಿಹಾರ, ರವಿಶಂಕರ ಗುರೂಜಿ       

ಈ ಯೋಜನೆಯ ಬಗ್ಗೆ ಮಾತನಾಡುತ್ತಾ ನಿರ್ದೇಶಕರಾದ ಓಂಕಾರ್ ನಾಥ್ ಮಿಶ್ರಾರವರು, "ಈ ಸರಣಿಯನ್ನು ಮಹಾಗುರುಗಳಾದ ಆದಿ ಶಂಕರರಿಗೆ ಮುಡಿಪಾಗಿಸಲಾಗಿದೆ. ಅವರ ಬುದ್ಧಿ, ಜ್ಞಾನ ಮತ್ತು ಆಧ್ಯಾತ್ಮಿಕ ಶಕ್ತಿಯು ದೇಶಕ್ಕೆ ಒಂದು ರೂಪವನ್ನೇ ನೀಡಿತು. 300 ಭಾಗಗಳಾಗಿ ವಿಭಜಿತವಾಗಿದ್ದ ಭಾರತ ದೇಶದಲ್ಲಿ ನಡೆದು, ಆದಿ ಶಂಕರಾಚಾರ್ಯರು ಸನಾತನ ಧರ್ಮದ ಅಡಿಯಲ್ಲಿ ಭಾರತವನ್ನು ಒಗ್ಗೂಡಿಸಿದರು. ಭಾರತದ ಸಾಂಸ್ಕೃತಿಕ, ಧಾರ್ಮಿಕ    ಪುನರುತ್ಥಾನಕ್ಕೆ ಅವರು ಅಪಾರ ಕಾಣಿಕೆಯನ್ನು ನೀಡಿದರು. ಆಧುನಿಕ ಪ್ರೇಕ್ಷಕರಿಗೆ ಸ್ಪಂದಿಸುವ ರೀತಿಯಲ್ಲಿ ಅವರ ಜೀವನ ಚರಿತ್ರೆಯನ್ನು ನಾವು ಹೊರತಂದಿದ್ದೇವೆ" ಎನ್ನುತ್ತಾರೆ.

ವಿಜಯದಶಮಿಯ ಶುಭ ದಿನದಂದು ಬಿಡುಗಡೆಯಾಗುತ್ತಿರುವ ಆದಿ ಶಂಕರಾಚಾರ್ಯ ಟ್ರೇಲರ್ (Aadi Shankaracharya Trailer), ಭಾರತದ ಆಧ್ಯಾತ್ಮಿಕ ಗತದ ಭವ್ಯವಾದ ಪಯಣ. ಈ ಸರಣಿಯು ಆರ್ಟ್ ಆಫ್ ಲಿವಿಂಗ್ ಆಪ್ ನಲ್ಲಿ ನವೆಂಬರ್ 1 ರಿಂದ ಲಭ್ಯವಾಗಿದೆ. ಜಾಗತಿಕ ಪ್ರೇಕ್ಷಕರಿಗೆ ಭಾರತದ ಅತೀ ದೊಡ್ಡ ರಾಷ್ಟ್ರೀಯ ನಾಯಕನ ಕಥೆಯು ಜೀವಂತವಾಗಿ ಬರಲಿದೆ.

Latest Videos
Follow Us:
Download App:
  • android
  • ios