ನನಗೆ ಮೋಸ ಆಗ್ತಿದೆ- ಫಾಲೋವರ್ಸ್ಗೆ ಎಚ್ಚರಿಕೆ ನೀಡಿದ 'ಸೀತಾರಾಮ' ಸೀರಿಯಲ್ ರಾಮ!
ಸೀತಾರಾಮ ಧಾರಾವಾಹಿಯ ನಾಯಕ ಗಗನ ಚಿನ್ನಪ್ಪ ಅವರ ಫೇಕ್ ಐಡಿ ಕ್ರಿಯೇಟ್ ಮಾಡಲಾಗಿದ್ದು, ಫಾಲೋವರ್ಸ್ ಬಳಿ ಹಣ ಕೇಳಲಾಗುತ್ತಿದೆ. ಈ ಬಗ್ಗೆ ನಾಯಕ ಎಚ್ಚರಿಸಿದ್ದಾರೆ.
ಸೈಬರ್ ಕ್ರೈಂ ಎನ್ನುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಅದರಲ್ಲಿಯೂ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಹಣ ಮಾಡುವ ದೊಡ್ಡ ವರ್ಗವೇ ಇದೆ. ಸಾಮಾನ್ಯ ಜನರ ಹೆಸರಿನಲ್ಲಿ ಫೇಕ್ ಅಕೌಂಟ್ (Fake account) ಕ್ರಿಯೇಟ್ ಮಾಡಿ ಅವರ ಸ್ನೇಹಿತರಿಗೆ ಅರ್ಜೆಂಟ್ ಹಣ ನೀಡುವಂತೆ ಮನವಿ ಮಾಡಿಕೊಳ್ಳುವುದು ಇತ್ತೀಚೆಗಂತೂ ಮಾಮೂಲಾಗಿ ಬಿಟ್ಟಿದೆ. ಹಣದ ಸಹಾಯ ಕೇಳಿದಾಗ ಆರಂಭದಲ್ಲಿ ನಿಜವಾಗಿಯೂ ಫೋನ್ ಪೇ, ಗೂಗಲ್ ಪೇ ಮೂಲಕ ಅವರು ತಿಳಿಸಿದ್ದ ನಂಬರ್ಗೆ ದುಡ್ಡು ಕಳಿಸಿ ಮೋಸ ಹೋದವರೇ ಹೆಚ್ಚು. ಬರಬರುತ್ತಾ ಇದರ ಬಗ್ಗೆ ಅರಿವಾಗುತ್ತಿದ್ದಂತೆಯೇ ಮೋಸ ಮಾಡುವುದು ಕಡಿಮೆಯಾದರೂ, ಇನ್ನೂ ಇಂಥ ಕೆಲಸಕ್ಕೆ ಕೆಲವರು ಇಳಿದಿದ್ದಾರೆ. ಈ ಫೇಕ್ ಖಾತೆ ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಝೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಧಾರಾವಾಹಿ ಮೂಲಕ ಮನೆಮಾತಾಗಿರುವ ನಾಯಕ, ರಾಮನ ಪಾತ್ರಧಾರಿ ಗಗನ್ ಚಿನ್ನಪ್ಪ ಅವರಿಗೂ ಇದೇ ರೀತಿ ಆಗಿದ್ದು, ಈ ಕುರಿತು ಅಭಿಮಾನಿಗಳಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
ತಮ್ಮ ಹೆಸರಿನಲ್ಲಿ ಫೇಕ್ ಅಕೌಂಟ್ ಐಡಿ ಕ್ರಿಯೇಟ್ ಆಗಿದ್ದು, ಯಾರೂ ಅದಕ್ಕೆ ದುಡ್ಡು ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಗಗನ್ ಅವರು ಇಂಗ್ಲಿಷ್ನಲ್ಲಿ ಈ ಮಾಹಿತಿಯನ್ನು ತಿಳಿಸಿದ್ದಾರೆ. ಅದರಲ್ಲಿ ಅವರು, ಯಾರೋ ಒಬ್ಬರು ನನ್ನ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಈ ಐಡಿಯಿಂದ ಸೋಷಿಯಲ್ ಮೀಡಿಯಾದಲ್ಲಿರುವ ನನ್ನ ಫಾಲೋವರ್ಸ್ ಬಳಿಯಿಂದ ದುಡ್ಡು ಕೇಳಲಾಗುತ್ತಿದ್ದು, ಇದು ನನ್ನ ಗಮನಕ್ಕೆ ಬಂದಿದೆ. ನಿಮಗೂ ಹೀಗೆಯೇ ಮನವಿ ಬಂದಿದ್ದರೆ, ಬಂದಿರೋ ಐಡಿಯನ್ನು ರಿಪೋರ್ಟ್ ಮಾಡಿ ಎಂದಿದ್ದಾರೆ. ಫೇಕ್ ಐಡಿ ಕ್ರಿಯೇಟ್ ಮಾಡಿದವನ ಮೊಬೈಲ್ ನಂಬರ್ ಅನ್ನೂ ಅವರು ಉಲ್ಲೇಖಿಸಿದ್ದಾರೆ. ಈ ನಂಬರ್ 09650889811 ಆಗಿದ್ದು, ಟ್ರೂ ಕಾಲರ್ನಲ್ಲಿ ಅದು ಬಬ್ಬು ಖಾನ್ ಎಂದು ತೋರಿಸುತ್ತದೆ. ದಯವಿಟ್ಟು ಎಲ್ಲರೂ ಇವನನ್ನು ರಿಪೋರ್ಟ್ ಮಾಡಿ ಎಂದು ಗಗನ್ ಚಿನ್ನಪ್ಪ ಹೇಳಿದ್ದಾರೆ.
SEETARAMA: ನೀವಿರೋ ಮನೆಗೆ ಎಷ್ಟು ಬಾಡಿಗೆ ಕೇಳಿದ ಮಿಡ್ಲ್ಕ್ಲಾಸ್ ಸೀತಾ: ಬಿಲೇನಿಯರ್ ರಾಮ ಕಕ್ಕಾಬಿಕ್ಕಿ- ಮುಂದೆ?
ಇನ್ನು ಸೀತಾರಾಮ ಧಾರಾವಾಹಿ ಕುರಿತು ಹೇಳುವುದಾದರೆ, ಇದು ಟಿಆರ್ಪಿಯಲ್ಲಿಯೂ ಸಕತ್ ಟಾಪ್ನಲ್ಲಿದೆ. ಇದರಲ್ಲಿನ ಸೀತೆ ಮತ್ತು ರಾಮ ಹಾಗೂ ಸೀತಾಳ ಮಗಳು ಸಿಹಿಯ ಪಾತ್ರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟಕ್ಕೂ ಈ ಧಾರಾವಾಹಿಯ (Seetaram) ಕಥೆ ಏನೆಂದರೆ, ರಾಮ ದೊಡ್ಡ ಕಂಪನಿಯ ಮಾಲಿಕ.
ಭಾರತಕ್ಕೆ ಬರುವ ಆತ ಕಂಪೆನಿ ಬಗ್ಗೆ ತಿಳಿದುಕೊಳ್ಳಲು ತಾನೂ ಅದೇ ಕಂಪೆನಿಯಲ್ಲಿ ನೌಕರನ ಹಾಗೆ ಸೇರಿಕೊಳ್ಳುತ್ತಾನೆ. ಸೀತಾ ಅಲ್ಲಿಯೇ ಕೆಲಸ ಮಾಡುವ ಉದ್ಯೋಗಿ. ಇಬ್ಬರ ನಡುವೆ ಸ್ನೇಹ ಬೆಳೆದು, ಸೀತಾ ರಾಮನ ನೆರವನ್ನು ಕೋರುತ್ತಿದ್ದಾಳೆ. ಅದೇ ಇನ್ನೊಂದೆಡೆ ಸೀತಾ ಸಿಂಗಲ್ ಪೇರೆಂಟ್. ಆಕೆಯ ಮಗಳು ಪುಟಾಣಿ ಸಿಹಿ ಮಧುಮೇಹದಿಂದ ಬಳಲುತ್ತಿದ್ದಾಳೆ. ಸೀತಾ ಮತ್ತು ರಾಮರ ಸಂಬಂಧ ಹೇಗೆ ಮುಂದುವರೆಯುತ್ತದೆ ಎನ್ನುವುದು ಸದ್ಯದ ಕುತೂಹಲ.
ಶೂಟಿಂಗ್ ನಡುವೆ ನಿದ್ರೆಗೆ ಜಾರಿದ ಸೀತಾ; ರಾಮ ಬೆಡ್‌ಶೀಟ್ ಕೊಡಪ್ಪ ಎಂದು ಕಾಲೆಳೆದ ನೆಟ್ಟಿಗರು