ತುಮಕೂರು ಪೊಲೀಸ್ ಆಯುಕ್ತರಾದ ಕೋನ ವಂಶಿಕೃಷ್ಣ ಮಹಾಭಾರತ ನಾಟಕದಲ್ಲಿ ಅಭಿನಯಿಸಿ ಜನಮನ ಸೆಳೆದಿದ್ದಾರೆ. 

ತುಮಕೂರು (ಅ.28): ತುಮಕೂರು ಎಸ್ ಪಿ ಕೋನ ವಂಶಿಕೃಷ್ಣ ನಾಟಕ ಒಂದರಲ್ಲಿ ಪಾತ್ರ ಮಾಡಿ ಮಿಂಚಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ಕುರುಕ್ಷೇತ್ರ ನಾಟದಲ್ಲಿ ದುರ್ಯೋಧನನಾಗಿ ನಟಿಸಿ ಎಸ್ ಪಿ ಕೋನ ವಂಶಿ ಕೃಷ್ಣ ಮಿಂಚಿದ್ದಾರೆ. 

ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದಲೇ ತುಮಕೂರಿನಲ್ಲಿ ನಡೆದ ನಾಟಕದಲ್ಲಿ ಅಭಿನಯಿಸಿದ್ದು, ಪೊಲೀಸ್ ಅಧಿಕಾರಿ ಅಭಿನಯಕ್ಕೆ ಪ್ರೇಕ್ಷಕರು ಮಾರುಹೋಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ 6 ತಿಂಗಳಿನಿಂದ ಪೊಲೀಸ್ ಇಲಾಖೆಯಿಂದ ನಾಟಕಾಭಿನಯ ಅಭ್ಯಾಸ ಮಾಡಿ ಪ್ರದರ್ಶಿಸಲಾಗಿದೆ. ಇಲಾಖೆಯ ಅನೇಕ ಸಿಬ್ಬಂದಿಯು ನಾಟಕದಲ್ಲಿ ಅಭಿನಯಿಸಿ ಜನ ಮನ ಸೆಳೆದಿದ್ದಾರೆ.