ತುಮಕೂರು(ಅ.08): ಪಿಕ್ ಪಾಕೆಟ್ ಮಾಡ್ತಿದ್ದ ಆಂಧ್ರಪ್ರದೇಶ ಮೂಲದ ಕಳ್ಳರು ತುಮಕೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಪಿಕ್‌ ಪಾಕೆಟ್ ಮಾಡ್ತಿದ್ದವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಂಧ್ರಪ್ರದೇಶದ 6 ಜನ ಖತರ್ನಾಕ್ ಜೇಬುಗಳ್ಳರನ್ನು ಸಾರ್ವಜನಿಕರು ಹಿಡಿದಿದ್ದು, ಕಳ್ಳರಿಗೆ ಗೂಸಾ ಬಿದ್ದಿದೆ. ಆರು ಜನರನ್ನೂ ಸಾರ್ವಜನಿಕರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

400 ವರ್ಷದಿಂದ ಜೊತೆಗೇ ಬಾಳುತ್ತಿರುವ ಅವಿಭಕ್ತ ಕುಟುಂಬ

ತುಮಕೂರು ಜಿಲ್ಲೆ ಪಾವಗಡ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಹಬ್ಬದ ಸಂಭ್ರಮದಲ್ಲಿದ್ದ ಜನರ ಜೇಬಿಗೆ ಕತ್ತರಿ ಹಾಕುವಾಗ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.

ಜನರ ಪರ್ಸ್, ನಗದು ಕದಿಯುತ್ತಿದ್ದವರಿಗೆ ಸಾರ್ವಜನಿಕರು ಧರ್ಮದೇಟು ಕೊಟ್ಟಿದ್ದಾರೆ. ನಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಜೇಬುಗಳ್ಳರೆಲ್ಲರೂ ಆಂಧ್ರ ಮೂಲದವರಾಗಿದ್ದು, ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಧ್ಯಂತರ ಚುನಾವಣೆ : ಬಿಜೆಪಿಯಿಂದ ಸ್ಪರ್ಧಿಸಲು ಜೆಡಿಎಸ್ ಮುಖಂಡಗೆ ಒತ್ತಾಯ