ತುಮಕೂರು (ಅ.08) : ರಾಜ್ಯದಲ್ಲಿ ಈಗಾಗಲೇ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಇನ್ನು ಮದ್ಯಂತರ ಚುನಾವಣೆ ಬಗ್ಗೆಯೂ ಕೂಡ ಚರ್ಚೆಗಳು ಆರಂಭವಾಗಿದೆ.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ಪಕ್ಕಾ ಎನ್ನಲಾಗುತ್ತಿದ್ದು, ಬಿಜೆಪಿ ನಾಯಕರೇ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಬಿಜೆಪಿಯಲ್ಲಿ ಸೂಕ್ತ ಅಭ್ಯರ್ಥಿಗಳ ಹುಡುಕಾಟವು ಆರಂಭವಾಗಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಜೆಡಿಎಸ್ ಮುಖಂಡ ಶ್ರೀನಿವಾಸ್ ಹೇಳಿಕೆಯೊಂದನ್ನು ನೀಡಿದ್ದು, ಗುಬ್ಬಿ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಒತ್ತಾಯಿಸಲಾಗುತ್ತಿದೆ ಎನ್ನಲಾಗಿದೆ. ಕಳೆದ ಬಾರಿ ಬಿಜೆಪಿಯಿಂದ ಪರಾಭವಗೊಂಡಿದ್ದ ಬೆಟ್ಟ ಸ್ವಾಮಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯಡಿಯೂರಪ್ಪರ‌ ಬಳಿ ಮಾತನಾಡಿ. ಮುಂದೆ ಈ ಬಗ್ಗೆ ನೋಡೋಣ ಎಂದು ಶ್ರೀನಿವಾಸ್ ಹೇಳಿದ್ದು, ಮನೆಗೆ ಹೋಗಿ ಸ್ವತಃ ಆಹ್ವಾನ ನೀಡಲಾಗಿದೆ. ಕಳೆದ ಮೂರು ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬೆಟ್ಟ ಸ್ವಾಮಿ ಸೋತಿದ್ದು, ಈ ಬಾರಿ ಮತ್ತೆ ಟಿಕೆಟ್ ಸಿಗುವುದ ಡೌಟ್ ಆಗಿದ್ದು, ಈ ನಿಟ್ಟಿನಲ್ಲಿ ಒತ್ತಡ ಹೇರಲಾಗುತ್ತಿದೆ.

ಇನ್ನು ಗುಬ್ಬಿ ಕ್ಷೇತ್ರದಿಂದ ಬೆಟ್ಟಸ್ವಾಮಿ ಬದಲಿಗೆ ಕಳೆದ ಬಾರಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದ ದಿಲಿಪ್ ಕುಮಾರ್ ಗೆ ಟಿಕೆಟ್ ಸಿಗುವ‌ ಸಾಧ್ಯತೆ ಇದ್ದು, ದಿಲಿಪ್ ಕುಮಾರ್ ಗೆ ಟಿಕೆಟ್ ತಪ್ಪಿಸಲು ಬೆಟ್ಟಸ್ವಾಮಿ ಪ್ಲಾನ್ ಮಾಡುತ್ತಿದ್ದಾರೆ.